ಘರ್ ವಾಪ್ಸಿ: ಹಿಂದೂ ಧರ್ಮಕ್ಕೆ ಮರಳಿದ 53 ಕುಟುಂಬಗಳು
ಆರ್ ಎಸ್ ಎಸ್ ನ ಆಯೋಜಿಸಿದ್ದ ಕ್ರಿಶ್ಚಿಯಾನಿಟಿ ಫ್ರೀ ಶಿಬಿರದಿಂದಾಗಿ ಜಾರ್ಖಂಡ್ ನ 53 ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಿವೆ...

Published On :
ಖುಂಟಿ: ಆರ್ ಎಸ್ ಎಸ್ ನ ಆಯೋಜಿಸಿದ್ದ ಕ್ರಿಶ್ಚಿಯಾನಿಟಿ ಫ್ರೀ ಶಿಬಿರದಿಂದಾಗಿ ಜಾರ್ಖಂಡ್ ನ 53 ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಿವೆ.
ಕ್ರೈಸ್ತ ಮಿಷನರಿಗಳಡೆಗೆ ಆಕರ್ಷಿತರಾಗಿ ಬುಡಕಟ್ಟು ಜನಾಂಗದವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂದು ಖುಂಟಿ ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಲಕ್ಷ್ಮಣ್ ಸಿಂಗ್ ಮುಂಡಾ ಹೇಳಿದ್ದಾರೆ.
ಇದು ಮತಾಂತರವಲ್ಲಿ, ಅವರು ವಾಪಸ್ ತಮ್ಮ ಧರ್ಮಕ್ಕೆ ಮರಳಿದ್ದಾರೆ ಎಂದು ಆರ್ ಎಸ್ ಎಸ್ ಸ್ಪಷ್ಟನೆ ನೀಡಿದೆ. ನಮಗೆ ಕ್ರಿಶ್ಚಿಯಾನಿಟಿ ಮುಕ್ತ ಪ್ರದೇಶ ಬೇಕು. ಗ್ರಾಮಸ್ಥರು ತಮ್ಮ ಮೂಲಕ್ಕೆ ಶೀಘ್ರವೇ ವಾಪಸಾಗುತ್ತಾರೆ ಎಂದು ಆರ್ ಎಸ್ ಎಸ್ ಸಂಯೋಜಕ ಲಕ್ಷ್ಮಣ್ ಸಿಂಗ್ ಮುಂಡಾ ತಿಳಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಜಾರ್ಖಂಡ್ ನ ಹಲವು ಬುಡಕಟ್ಟು ಜನಾಂಗಗಳು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿವೆ, ಬಲವಂತವಾಗಿ ಮತಾಂತರ ಮಾಡುವವರ ವಿರುದ್ಧ , ಜಾರ್ಖಂಡ್ ಸಿಎಂ ರಘುಬರ್ ದಾಸ್ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


