ಪ್ರಾಕೃತಿಕ ವಿಕೋಪ ಮರು ಸೃಷ್ಟಿ; ಕಾಶ್ಮೀರದಲ್ಲಿ ಭಾರತದೊಂದಿಗೆ ಚೀನಾ ಜಂಟಿ ಸೇನಾ ತರಬೇತಿ!
ಮಹತ್ವದ ಬೆಳೆವಣಿಗೆಯೊಂದರಲ್ಲಿ ಚೀನಾದ ರೆಡ್ ಆರ್ಮಿ ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯೊಂದಿಗೆ ಜಂಟಿ ಸಮರಾಭ್ಯಾಸ ಮಾಡಿದೆ.

ನವದೆಹಲಿ: ಮಹತ್ವದ ಬೆಳೆವಣಿಗೆಯೊಂದರಲ್ಲಿ ಚೀನಾದ ರೆಡ್ ಆರ್ಮಿ ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯೊಂದಿಗೆ ಜಂಟಿ ಸಮರಾಭ್ಯಾಸ ಮಾಡಿದೆ.
ಬುಧವಾರ ಜಮ್ಮು ಮತ್ತು ಕಾಶ್ಮೀರದ ಲಡಾನ್ ನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್ ಎಸಿ) ಬಳಿ ಜಂಟಿ ಸಮರಾಭ್ಯಸ ನಡೆಸಿವೆ. ಲಡಾಕ್ ಸಮೀಪದಲ್ಲಿರುವ ಹಳ್ಳಿಯೊಂದರಲ್ಲಿ ಈ ಸಮರಾಭ್ಯಾಸ ನಡೆಸಲಾಗಿದ್ದು, ಭೂಕಂಪನ ಅಥವಾ ಮತ್ತಿತರೇ ಪ್ರಾಕೃತಿಕ ವಿಕೋಪಗಳ ಸಂಭಿವಿಸಿದಾಗ ಕೈಗೊಳ್ಳಬಹುದಾದ ಕಾರ್ಯಾಚರಣೆ ಕುರಿತಂತೆ ಉಭಯ ಸೇನೆಯ ಸೈನಿಕರು ತರಬೇತಿ ನಡೆಸಿದ್ದಾರೆ.
ಗಡಿಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಮಾನವೀಯತೆಯ ಆಧಾರದ ಮೇಲೆ ಪರಸ್ಪರ ಸಹಕಾರ ಹಾಗೂ ಜಂಟಿ ಕಾರ್ಯಾಚರಣೆ ನಡೆಸುವ ಉದ್ದೇಶದಿಂದ ಈ ಅಭ್ಯಾಸ ನಡೆಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ತುರ್ತು ಕಾರ್ಯಾಚರಣೆ, ಗಾಯಾಳುಗಳ ಸ್ಥಳಾಂತರ, ವೈದ್ಯಕೀಯ ಸೇವೆ, ಅವಶೇಷಗಳಡಿಯಲ್ಲಿ ಸಿಲುಕಿರುವವರ ರಕ್ಷಣೆ ಸೇರಿದಂತೆ ಹಲವು ರೀತಿಯ ತರಬೇತಿಯನ್ನು ಸೈನಿಕರಿಗೆ ನೀಡಲಾಯಿತು.
ಈ ಹಿಂದೆಯೂ ಕೂಡ ಭಾರತ ಮತ್ತು ಚೀನಾ ಇಂತಹುದೇ ಸಮರಾಭ್ಯಾಸ ನಡೆಸಿದ್ದವು. ಕಳೆದ ಫೆಬ್ರವರಿ 6ರಂದು ಇದೇ ಲಡಾಕ್ ನ ಪೂರ್ವಭಾಗದಲ್ಲಿ ಉಭಯ ದೇಶಗಳ ಸೈನಿಕರು ಸಮರಾಭ್ಯಾಸ ನಡೆಸಿದ್ದವು. ಪ್ರಸ್ತುತ ಸಮರಾಭ್ಯಾಸ ಅದರ ಮುಂದುವರೆದ ಭಾಗ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


