ಚಳಿಗಾಲಕ್ಕೆ ಸೂರಿಲ್ಲದವರ ಸಹಾಯಕ್ಕೆ 18.81 ಕೋಟಿ ಅನುದಾನ ನೀಡಿದ ಉತ್ತರಪ್ರದೇಶ
ಬರಲಿರುವ ಚಳಿಗಾಲದಲ್ಲಿ, ಕೊರೆವ ಗಾಳಿ ವ್ಯಾಪಕ ಹಾನಿ ಸೃಷ್ಟಿಸಬಹುದಾದ ಹಿನ್ನಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಬಡ ಮತ್ತು ಸೂರಿಲ್ಲದ ಜನರಿಗಾಗಿ 18.81 ಕೋಟಿ ಅನುದಾನ ಬಿಡುಗಡೆ ಮಾಡಿದೆ.

Published On :
ಲಖನೌ: ಬರಲಿರುವ ಚಳಿಗಾಲದಲ್ಲಿ, ಕೊರೆವ ಗಾಳಿ ವ್ಯಾಪಕ ಹಾನಿ ಸೃಷ್ಟಿಸಬಹುದಾದ ಹಿನ್ನಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಬಡ ಮತ್ತು ಸೂರಿಲ್ಲದ ಜನರಿಗಾಗಿ 18.81 ಕೋಟಿ ಅನುದಾನ ಬಿಡುಗಡೆ ಮಾಡಿದೆ.
ಹೊದಿಕೆಗಳನ್ನು ವಿತರಿಸುವ ಮೂಲಕ ಹಾಗು ಚಳಿ ಕಾಯಿಸಿಕೊಳ್ಳಲು ಬಯಲುರಿಯನ್ನು ಹಾಕಲು ನೆರವಾಗಿ ಬಡ, ಸೂರಿಲ್ಲದ ಮತ್ತು ನಿರ್ಗತಿಕರಿಗೆ ಸಹಾಯ ಹಸ್ತ ಚಾಚುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮುಖ್ಯಮಂತ್ರಿಯವರ ನಿರ್ದೇಶನದ ಮೇರೆಗೆ ಈಗಾಗಲೇ ಇದಕ್ಕಾಗಿ ಅನುದಾನ ಬಿಡುಗಡೆಯಾಗಿದೆ ಎಂದು ರಾಜ್ಯ ಸರ್ಕಾರದ ವಕ್ತಾರ ಹೇಳಿದ್ದಾರೆ.
ಕಳೆದ ಚಳಿಗಾಲಗಳಲ್ಲಿ ಎದುರಿಸಿರುವ ತೊದರೆಗಳನ್ನು ಗಮನದಲ್ಲಿರಿಸಿ, ಬಡಜನಕ್ಕಾಗಿ ಹೊದಿಕೆಗಳನ್ನು ಖರೀದಿಸಲು ಪ್ರತಿ ತಾಲ್ಲೂಕಿಗೆ ಐದು ಲಕ್ಷ ರೂ ಅನುದಾನ ನೀಡಲಾಗಿದೆ. 342 ತಾಲ್ಲೂಕುಗಳಲ್ಲಿ ಹೊದಿಕೆಗಳ ವಿತರಣೆಗಾಗಿಯೇ 17.1 ಕೋಟಿ ರೂ ಮೀಸಲಿಡಲಾಗಿದೆ.
ಹಾಗೆಯೇ ಸಾರ್ವಜನಿಕ ಪ್ರದೇಶಗಳಲ್ಲಿ ಬಯಲುರಿಗಳನ್ನು ಹೊತ್ತಿಸಲು ನೆರವಾಗಲು ಪ್ರತಿ ತಾಲ್ಲೂಕಿಗೆ 50 ಸಾವಿರ ರೂ ನೀಡಲಾಗುತ್ತಿದ್ದು ಇದಕ್ಕಾಗಿ 1.71 ಕೋಟಿ ರು ಅನುದಾನ ಬಿಡುಗಡೆ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


