ಪ್ರಧಾನ ಸುದ್ದಿ

ಬರ್ಲಿನ್ ದಾಳಿ ಮುಸ್ಲಿಮರನ್ನು ನಿಷೇಧಿಸುವ ನನ್ನ ಪ್ರಸ್ತಾವನೆಯನ್ನು ಧೃಢೀಕರಿಸುತ್ತದೆ: ಟ್ರಂಪ್

ಬರ್ಲಿನ್ ನ ಕ್ರಿಸ್ಮಸ್ ಮಾರುಕಟ್ಟೆಯ ಮೇಲೆ ನಡೆದ ಮಾರಣಾಂತಿಕ ದಾಳಿ, ಮುಸ್ಲಿಮರು ಅಮೆರಿಕಾಗೆ ವಲಸೆ ಬರುವುದನ್ನು ನಿಷೇಧಿಸುವ ನನ್ನ ಪ್ರಸ್ತಾವನೆ ಸರಿ ಎಂದು ಧೃಢೀಕರಿಸುತ್ತದೆ ಎಂದು ಅಮೆರಿಕಾದ ನೂತನ

ಬರ್ಲಿನ್ ದಾಳಿ ಮುಸ್ಲಿಮರನ್ನು ನಿಷೇಧಿಸುವ ನನ್ನ ಪ್ರಸ್ತಾವನೆಯನ್ನು ಧೃಢೀಕರಿಸುತ್ತದೆ: ಟ್ರಂಪ್
ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published On :
ವಾಷಿಂಗ್ಟನ್: ಬರ್ಲಿನ್ ನ ಕ್ರಿಸ್ಮಸ್ ಮಾರುಕಟ್ಟೆಯ ಮೇಲೆ ನಡೆದ ಮಾರಣಾಂತಿಕ ದಾಳಿ, ಮುಸ್ಲಿಮರು ಅಮೆರಿಕಾಗೆ ವಲಸೆ ಬರುವುದನ್ನು ನಿಷೇಧಿಸುವ ನನ್ನ ಪ್ರಸ್ತಾವನೆ ಸರಿ ಎಂದು ಧೃಢೀಕರಿಸುತ್ತದೆ ಎಂದು ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 
"ಈ ಎಲ್ಲ ಸಮಯದಲ್ಲಿ, ನಾನು ಹೇಳಿದ್ದು ಸರಿ ಎಂದು ಧೃಢಪಟ್ಟಿದೆ. ೧೦೦ ಪ್ರತಿಶತ ಸರಿ. ಈಗ ನಡೆಯುತ್ತಿರುವುದು ನಾಚಿಕೆಗೇಡು" ಎಂದು ಪಾಮ್ ಬೀಚ್ ನಲ್ಲಿರುವ ಅವರ ಮಾರ್-ಅ-ಲಾಗೊ ರೆಸಾರ್ಟ್ ಹೊರಗೆ ವರದಿಗಾರರಿಗೆ ಟ್ರಂಪ್ ಹೇಳಿದ್ದಾರೆ. 
ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ, ಬರ್ಲಿನ್ ನಲ್ಲಿ ನಡೆದಿರುವ ಈ ಹೊಸ ದಾಳಿಯ ಹಿನ್ನಲೆಯಲ್ಲಿ ನಿಮ್ಮ ಪ್ರಸ್ತಾವನೆಯನ್ನು ಮರು ಪರಿಶೀಲಿಸುವ ಮರುಚಿಂತನೆ ನಡೆಸುತ್ತಿದ್ದೀರಾ ಎಂಬ ಪ್ರಶ್ನೆಗೆ "ನನ್ನ ಯೋಜನೆಗಳು ನಿಮಗೆ ಗೊತ್ತಿದೆ" ಎಂದು ಟ್ರಂಪ್ ಉತ್ತರಿಸಿದ್ದಾರೆ. 
ಇಸ್ಲಾಮಿಕ್ ಸ್ಟೇಟ್ ಹೊಣೆ ಹೊತ್ತಿರುವ ಬರ್ಲಿನ್ ಕ್ರಿಸ್ಮಸ್ ದಾಳಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತದೆ ಎಂದು ಕೂಡ ಟ್ರಂಪ್ ಹೇಳಿದ್ದಾರೆ. ಈ ದಾಳಿಯಲ್ಲಿ ೧೨ ಜನ ಮೃತಪಟ್ಟಿದ್ದರು. ೨೪ ವರ್ಷದ ಟ್ಯುನೀಶಿಯನ್ ವಲಸಿಗ ಈ ಕೃತ್ಯ ಎಸಗಿದ್ದಾನೆ ಎಂದು ಜರ್ಮನ್ ಅಧಿಕಾರಿಗಳು ಹೇಳಿದ್ದು, ಅವನನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. 
ಅಮೆರಿಕಾಕ್ಕೆ ವಲಸೆ ಬರುವ ಮುಸ್ಲಿಮರಿಗೆ ನಿಷೇಧ ಹೇರಬೇಕೆಂದು ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಸಮಯದಲ್ಲಿ ಟ್ರಂಪ್ ಹೇಳಿದ್ದರು ಆದರೆ ಇದನ್ನು ರೆಪಬ್ಲಿಕನ್ನರು ಮತ್ತು ಡೆಮಾಕ್ರಟ್ ಗಳು ತೀವ್ರವಾಗಿ ವಿರೋಧಿಸಿದ್ದರು. 
ಬರ್ಲಿನ್ ಮೇಲಿನ ದಾಳಿ ಕ್ರಿಶ್ಚಿಯನ್ನರ ಮೇಲಿನ ದಾಳಿ ಎಂದು ಕೂಡ ಟ್ರಂಪ್ ಹೇಳಿದ್ದಾರೆ.  "ಐ ಎಸ್ ಮತ್ತು ಇತರ ಭಯೋತ್ಪಾದಕರು ತಮ್ಮ ಜಾಗತಿಕ ಜಿಹಾದ್ ಅಂಗವಾಗಿ ಕ್ರಿಶ್ಚಿಯನ್ನರನ್ನು ಕೊಲೆಗೈಯ್ಯುತ್ತಾ ಇದ್ದಾರೆ" ಎಂದು ಕೂಡ ಟ್ರಂಪ್ ಈ ದಾಳಿಯ ನಂತರ ಸೋಮವಾರ ಹೇಳಿಕೆ ನೀಡಿದ್ದರು. 
ಆದರೆ ಈ ಹೇಳಿಕೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಟ್ರಂಪ್ ಬುಧವಾರ ಹೇಳಿದ್ದರು. "ಯಾರು ಹೀಗೆ ಹೇಳಿದ್ದು" ಎಂದು ವರದಿಗಾರನಿಗೆ ಸವಾಲೆಸೆದಿದ್ದ ಟ್ರಂಪ್ "ಇದು ಮನುಷತ್ವದ ಮೇಲಿನ ದಾಳಿ ಮತ್ತು ಇದನ್ನು ತಡೆಯಬೇಕು" ಎಂದಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.