ಇಂಟರ್ ನೆಟ್ ಡೇಟಾ ಇಲ್ಲದೆಯೇ ಪೇಟಿಎಂ ಸೇವೆಗಳನ್ನು ಬಳಸಬಹುದು!
ನಗದು ರಹಿತ ವಹಿವಾಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಪೇಟಿಎಂ ಇಂತರ್ ನೆಟ್ ಡೇಟಾ, ಸ್ಮಾರ್ಟ್ ಫೋನ್ ಸಹಾಯವಿಲ್ಲದೇ ನಗದು ರಹಿತ ವಹಿವಾಟು ನಡೆಸುವ ವ್ಯವಸ್ಥೆಯನ್ನು ಪರಿಚಯಿಸಿದೆ.

Published On :
ನವದೆಹಲಿ: ನಗದು ರಹಿತ ವಹಿವಾಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಪೇಟಿಎಂ ಇಂತರ್ ನೆಟ್ ಡೇಟಾ, ಸ್ಮಾರ್ಟ್ ಫೋನ್ ಸಹಾಯವಿಲ್ಲದೇ ನಗದು ರಹಿತ ವಹಿವಾಟು ನಡೆಸುವ ವ್ಯವಸ್ಥೆಯನ್ನು ಪರಿಚಯಿಸಿದೆ.
ಇಂಟರ್ ನೆಟ್ ಹೊಂದದವರನ್ನೂ ತಲುಪುವ ನಿಟ್ಟಿನಲ್ಲಿ ಹೊಸ ವ್ಯವಸ್ಥೆಯನ್ನು ಪರಿಚಯಿಸಿರುವ ಪೇಟಿಎಂ, ಶುಲ್ಕ ರಹಿತ ದೂರವಾಣಿ ಸಂಖ್ಯೆಯನ್ನು (1800 1800 1234) ನೀಡಿದೆ. ಈ ಮೂಲಕ ಗ್ರಾಹಕರು ಹಾಗೂ ವ್ಯಾಪಾರಿಗಳು ಮೊಬೈಲ್ ಮೂಲಕ ಇಂಟರ್ ನೆಟ್ ಇಲ್ಲದೇ ವಹಿವಾಟು ನಡೆಸುವ ವಿಧಾನವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.
ಇಂಟರ್ ನೆಟ್ ರಹಿತ ಪೇಟಿಎಂ ವಹಿವಾಟುಗಳನ್ನು ಬಳಕೆ ಮಾಡಲು( ಗ್ರಾಹಕರು ಹಾಗೂ ವ್ಯಾಪಾರಿಗಳು) ಮೊದಲು ಪೇಟಿಎಂ ನಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿಕೊಂಡು 4- ಅಂಕಿಗಳ ಪೇಟಿಎಂ ಪಿನ್ ಸೆಟ್ ಮಾಡಬೇಕು. ನಂತರ ಗ್ರಾಹಕರು ಹಣ ಸ್ವೀಕರಿಸುವವರ ಮೊಬೈಲ್ ನಂಬರ್ ಹಾಗೂ ಪಾವತಿ ಮಾಡಬೇಕಿರುವ ಮೊತ್ತ, ಪೇಟಿಎಂ ಪಿನ್ ನ್ನು ನಮೂದಿಸಿ ಒಂದು ಪೇಟಿಎಂ ವಾಲೆಟ್ ನಿಂದ ಮತ್ತೊಂದು ಪೇಟಿಎಂ ವಾಲೆಟ್ ಗೆ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಇಂಟರ್ ನೆಟ್ ಹೊಂದದೇ ವಹಿವಾಟು ನಡೆಸಬಹುದಾಗಿದೆಯಾದರೂ ಪೇಟಿಎಂ ಖಾತೆಯನ್ನು ಪ್ರಾರಂಭಿಸಿ ಪಿನ್ ನ್ನು ನಮೂದಿಸಲು ಮೊದಲ ಬಾರಿಗೆ ಇಂಟರ್ ನೆಟ್ ಅತ್ಯಗತ್ಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


