ಪ್ರಧಾನ ಸುದ್ದಿ

ಶ್ರೀರಾಮ ಸೇನೆಯಿಂದ ಮೂವರು ವಿಚಾರವಾದಿಗಳಿಗೆ ಬೆದರಿಕೆ..?

ಹಿರಿಯ ಸಾಹಿತಿ ಮತ್ತು ವಿಚಾರವಾದಿ ಡಾ.ಎಂಎಂ ಕಲಬುರ್ಗಿ ಹತ್ಯೆಯ ಕರಿ ನೆರಳಿನಲ್ಲೇ ಮತ್ತೆ ಮೂವರು ಕರ್ನಾಟಕದ ವಿಚಾರವಾದಿಗಳಿಗೆ ಬೆದರಿಕೆ ಬಂದಿದೆ ಎಂದು ಹೇಳಲಾಗುತ್ತಿದೆ.

ಶ್ರೀರಾಮ ಸೇನೆಯಿಂದ ಮೂವರು ವಿಚಾರವಾದಿಗಳಿಗೆ ಬೆದರಿಕೆ..?
ಚೆನ್ನವೀರ ಕಣವಿ, ಡಾ.ಗಿರಡ್ಡಿ ಗೋವಿಂದ ರಾಜ್ ಮತ್ತು ತೋಂಟದಾರ್ಯ ಶ್ರೀಗಳಿಗೆ ಬೆದರಿಕೆ..!
Published On :

ಬೆಂಗಳೂರು: ಹಿರಿಯ ಸಾಹಿತಿ ಮತ್ತು ವಿಚಾರವಾದಿ ಡಾ.ಎಂಎಂ ಕಲಬುರ್ಗಿ ಹತ್ಯೆಯ ಕರಿ ನೆರಳಿನಲ್ಲೇ ಮತ್ತೆ ಮೂವರು ಕರ್ನಾಟಕದ ವಿಚಾರವಾದಿಗಳಿಗೆ ಬೆದರಿಕೆ ಬಂದಿದೆ ಎಂದು  ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಶ್ರೀರಾಮ ಸೇನೆಗೆ ಸೇರಿದ ಮುಖಂಡರು ಈ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದ್ದು, ಹಿರಿಯ ಸಾಹಿತಿಗಳಾದ ಚೆನ್ನವೀರ ಕಣವಿ, ಡಾ.ಗಿರಡ್ಡಿ ಗೋವಿಂದ ರಾಜ್  ಮತ್ತು ತೋಂಟದಾರ್ಯ ಶ್ರೀಗಳಿಗೆ ಬೆದರಿಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಇನ್ನು ಪ್ರಕರಣ ಸಂಬಂಧ ಶ್ರೀರಾಮ ಸೇನೆಯ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ  ಬಾವಿ ಎಂಬುವವರನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ವಿಚಾರವಾದಿ ಮತ್ತು ಹಿರಿಯ ಸಂಶೋಧಕ ಡಾ. ಎಂಎಂ ಕಲಬುರ್ಗಿ ಅವರ ಹತ್ಯಾ ಪ್ರಕರಣದಲ್ಲಿ ಶ್ರೀರಾಮ ಸೇನೆ ಸಂಘಟನೆಯ ಪಾತ್ರವಿದೆ ಎಂದು ಆರೋಪಿಸಿ ಹಿರಿಯ  ಸಾಹಿತಿಗಳಾದ ಚನ್ನವೀರ ಕಣವಿ, ಡಾ. ಗಿರಡ್ಡಿ ಗೋವಿಂದರಾಜ, ತೊಂಟದಾರ್ಯ ಸ್ವಾಮಿಗಳ ನೇತೃತ್ವದ ಸಾಹಿತಿಗಳ ತಂಡ ಧಾರವಾಡ ಉಪವಿಭಾಗಾಧಿಕಾರಿಗೆ ದೂರು ನೀಡಿದ್ದರು.

ಈ ಆರೋಪವನ್ನು ತಳ್ಳಿಹಾಕಿದ್ದ ರಾಯಚೂರು ಶ್ರೀರಾಮ ಸೇನೆ ಘಟಕ ಕೂಡಲೇ ಸಾಕ್ಷಿ ಒದಗಿಸಬೇಕು, ಇಲ್ಲವಾದಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿತ್ತು. ಅಷ್ಟೇ ಅಲ್ಲದೇ ಒಂದು ತಿಂಗಳೊಳಗೆ ಕ್ಷಮೆಯಾಚಿಸದಿದ್ದರೆ ಚನ್ನವೀರ ಕಣವಿ ಹಾಗೂ ಗಿರಡ್ಡಿ ಗೋವಿಂದರಾಜ ನಿವಾಸಗಳನ್ನು ಧ್ವಂಸ ಮಾಡುವುದಾಗಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಬಾವಿ ಹೇಳಿಕೆ ನೀಡಿದ್ದರು. ಈ ಬೆದರಿಕೆಯ ಆರೋಪದಡಿಯಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಬಾವಿಯನ್ನು ರಾಯಚೂರು ಪಶ್ಚಿಮ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬೆದರಿಕೆ  ಹಿನ್ನೆಲೆ ಧಾರವಾಡದಲ್ಲಿ ಸಾಹಿತಿಗಳಿಬ್ಬರ ನಿವಾಸಗಳಿಗೂ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.