ಗಿನ್ನಿಸ್ ಪುಟ ಸೇರಿದ ಬೆಂಗಳೂರಿನ ಗಾಂಧಿ ವೇಷಧಾರಿಗಳು
ಮಹಾತ್ಮ ಗಾಂಧೀಜಿಯವರ 146ನೇ ಜನ್ಮದಿನದ ಅಂಗವಾಗಿ 4 ಸಾವಿರಕ್ಕೂ ಹೆಚ್ಚು ಬೆಂಗಳೂರಿನ ಮಕ್ಕಳು ಗಾಂಧಿ ವೇಷ ತೊಟ್ಟು ಗಿನ್ನಿಸ್ ದಾಖಾಲೆ ಮಾಡಿದ್ದಾರೆ...

ಬೆಂಗಳೂರು: ಮಹಾತ್ಮ ಗಾಂಧೀಜಿಯವರ 146ನೇ ಜನ್ಮದಿನದ ಅಂಗವಾಗಿ 4 ಸಾವಿರಕ್ಕೂ ಹೆಚ್ಚು ಬೆಂಗಳೂರಿನ ಮಕ್ಕಳು ಗಾಂಧಿ ವೇಷ ತೊಟ್ಟು ಗಿನ್ನಿಸ್ ದಾಖಾಲೆ ಮಾಡಿದ್ದಾರೆ.
ಗಾಂಧೀ ಜಯಂತಿಯನ್ನು ದೇಶದಾದ್ಯಂತ ಶುಕ್ರವಾರ ಆಚರಿಸಲಾಗುತ್ತಿತ್ತು. ಇದರಂತೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ವೆಂಕಟ್ ಸ್ಟಾಂನ್ಸ್ ಮತ್ತು ವಿನಸ್ ಗ್ರೂಪ್ ಇನ್ ಸ್ಟಿಟ್ಯೂಶನ್ ಗಳು ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ 6 ರಿಂದ 14 ವರ್ಷದೊಳಗಿನ 4,605 ಪುಟ್ಟ ಮಕ್ಕಳು ಗಾಂಧಿ ವೇಷ ತೊಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಹಿಂದೆಯೂ ತಮಿಳುನಾಡಿನ ಶಾಲೆಯೊಂದು ಇದೇ ರೀತಿ ಪ್ರಯತ್ನವನ್ನು ಮಾಡಿತ್ತು. ಆದರೆ, ಇಷ್ಟು ಸಂಖ್ಯೆಯಲ್ಲಿ ಗಾಂಧಿ ವೇಷಧಾರಿಗಳು ಒಂದು ಸಮಾರಂಭದಲ್ಲಿ ನೆರಿದಿರುವ ಇದೇ ಮೊದಲ ಬಾರಿಗೆಯಾದ್ದರಿಂದ ಇದು ಗಿನ್ನಿಲ್ ದಾಖಲೆಯ ಪುಸ್ತಕದ ಪುಟ ಸೇರಲು ಕಾರಣವಾಗಿದೆ.
ರಾಷ್ಟ್ರಪಿತ ಗಾಂಧೀಜಿಯವರ ಜನ್ಮದಿನ ಹಿನ್ನೆಲೆಯಲ್ಲಿ ನಿನ್ನೆ ಹಲವಾರು ಸಭೆ, ಸಮಾರಂಭಗಳನ್ನು ಏರ್ಪಡಿಸಲಾಗಿತ್ತು. ಪ್ರಧಾನಿ, ರಾಷ್ಟ್ಪಪತಿಗಳು ಸೇರಿದಂತೆ ಹಲವಾರು ಗಣ್ಯರು ರಾಷ್ಟ್ರಪಿತನಿಗೆ ಗೌರವಗಳನ್ನು ಸಲ್ಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


