ಗೋ ಚರ್ಮದ ಉತ್ಪನ್ನಗಳ ಮಾರಾಟ; ಮಿಂತ್ರ ವಿರುದ್ಧ ಆರ್ ಎಸ್ ಎಸ್ ಟ್ವೀಟ್
ಭಾರತದಲ್ಲಿ ಗೋರಕ್ಷಣೆಯ ಬಗೆಗಿನ ವಿವಾದಗಳಿಗೆ ಅಂತ್ಯ ಕಾಣುವ ಲಕ್ಷಣಗಳೇ ಇಲ್ಲ. ಈಗ ಹೊಸದೊಂದು ವಿವಾದದಲ್ಲಿ ಅಂತರ್ಜಾಲ ಫ್ಯಾಶನ್ ಉತ್ಪನ್ನಗಳ ಮಾರಾಟಗಾರ ಸಂಸ್ಥೆ

ಭಾರತದಲ್ಲಿ ಗೋರಕ್ಷಣೆಯ ಬಗೆಗಿನ ವಿವಾದಗಳಿಗೆ ಅಂತ್ಯ ಕಾಣುವ ಲಕ್ಷಣಗಳೇ ಇಲ್ಲ. ಈಗ ಹೊಸದೊಂದು ವಿವಾದದಲ್ಲಿ ಅಂತರ್ಜಾಲ ಫ್ಯಾಶನ್ ಉತ್ಪನ್ನಗಳ ಮಾರಾಟಗಾರ ಸಂಸ್ಥೆ ಮಿಂತ್ರಾ ವಿರುದ್ಧ ಟ್ವಿಟ್ಟರ್ ನಲ್ಲಿ ದಾಳಿ ನಡೆಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಸ್ಥೆ ಗೋ ಚರ್ಮದ ಉತ್ಪನ್ನಗಳನ್ನು (ಪಾದರಕ್ಷೆ) ಮಾರದಂತೆ ಸಂಸ್ಥೆಗೆ ಆಗ್ರಹಿಸಿದೆ.
ಕೇಂದ್ರ ಸಂಪುಟ ಸಚಿವರಾದ ಅರುಣ್ ಜೇಟ್ಲಿ ಮತ್ತು ಸ್ಮೃತಿ ಇರಾನಿ ಅನುಸರಿಸುತ್ತಿರುವ ಟ್ವಿಟರ್ ಹ್ಯಾಂಡಲ್ @ಆರ್ ಎಸ್ ಎಸ್_ಆರ್ಗ್ ಪ್ಲಿಪ್ಕಾರ್ಟ್ ಒಡೆತನದ ಮಿಂತ್ರಾ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ.
ಇದು ಆರ್ ಎಸ್ ಎಸ್ ಸ್ವಯಂಸೇವಕರ ಪ್ರತ್ಯೇಕ ಟ್ವಿಟ್ಟರ್ ಹ್ಯಾಂಡಲ್ ಎಂದು ತಿಳಿದುಬಂದಿದ್ದು ಆರ್ ಎಸ್ ಎಸ್ ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲ ಎಂದು ಕೂಡ ತಿಳಿದಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮಿಂತ್ರಾ ಸಂಸ್ಥೆ ಇದು ಆಮದು ಮಾಡಿಕೊಂಡಿರುವ ಉತ್ಪನ್ನವೆಂದು ಇದರ ಮಾರಾಟಕ್ಕೆ ಕಾನೂನಿನಲ್ಲಿ ಅವಕಾಶವಿದೆಯೆಂದೂ ಸ್ಪಷ್ಟೀಕರಣ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


