ಸಹಿಷ್ಣುತೆ ಬೋಧಿಸಿದ ಗಾಂಧಿಯವರನ್ನು ಆರ್ ಎಸ್ ಎಸ್ ಕೊಲೆ ಮಾಡಿದೆ: ಅಜಂ ಖಾನ್
ಮಾಹಾತ್ಮ ಗಾಂಧಿ ಅವರ ನೆಲದಲ್ಲಿ ಯಾವುದೇ ಅಸಹಿಷ್ಣುತೆ ಇಲ್ಲ ಎಂದು ಲಂಡನ್ ನಲ್ಲಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ

ಗೋರಕ್ಪುರ್: ಮಾಹಾತ್ಮ ಗಾಂಧಿ ಅವರ ನೆಲದಲ್ಲಿ ಯಾವುದೇ ಅಸಹಿಷ್ಣುತೆ ಇಲ್ಲ ಎಂದು ಲಂಡನ್ ನಲ್ಲಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಉತ್ತರ ಪ್ರದೇಶದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಅಜಂ ಖಾನ್ ಸಹಿಷ್ಣುತೆ ಬೋಧನೆ ಮಾಡಿದ್ದಕ್ಕೆ ಗಾಂಧಿಯವರನ್ನು ಆರ್ ಎಸ್ ಎಸ್ ಕೊಲೆ ಮಾಡಿದ ಮೇಲೆ ಅವರ ಹೆಸರನ್ನು ಬಳಸಿಕೊಳ್ಳುವುದು ಸಾಧುವಲ್ಲ ಎಂದಿದ್ದಾರೆ.
"ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ ವಿದೇಶದ ಜನ ಪ್ರಧಾನಿಯವರಿಂದ ಪ್ರಾಮಾಣಿಕ ಉತ್ತರ ನಿರೀಕ್ಷಿಸಿದ್ದರು ಆದರೆ ಅವರು ತಮ್ಮನ್ನು ಸಮರ್ಥಿಸಿಕೊಳ್ಳಲು ಗಾಂಧಿವಾದ ಮತ್ತು ಬೌದ್ಧ ಧರ್ಮದ ಹೆಸರನ್ನು ತೆಗೆದುಕೊಂಡರು. ಬೌದ್ಧ ಧರ್ಮ ಭಾರತದಲ್ಲಿ ಹರಡುತ್ತಿದ್ದಾಗ, ಮುಕ್ತಿ ಚಳವಳಿ ಪ್ರಾರಂಭವಾಗಿ ಬೌದ್ಧ ಧರ್ಮೀಯರನ್ನು ಕಗ್ಗೊಲೆ ಮಾಡಲಾಗಿತ್ತು. ಗಾಂಧಿಯವರಿಗೆ ಆರ್ ಎಸ್ ಎಸ್ ಏನು ಮಾಡಿತು ಎಂದು ತಿಳಿದೇ ಇದೆ. ಇದು ಅವರು ನೀಡಬೇಕಿದ್ದ ಉತ್ತರವಲ್ಲ ಮತ್ತು ವಿಶ್ವ ಅದನ್ನು ಒಪ್ಪುವುದಿಲ್ಲ" ಎಂದು ಖಾನ್ ಹೇಳಿದ್ದಾರೆ.
ಇಂಗ್ಲೆಂಡಿನಲ್ಲಿ ಮೋದಿ ಅಸಹಿಷ್ಣುತೆಯ ಪ್ರಶ್ನೆಗೆ ಯು ಕೆ ಪ್ರಧಾನಿಯವರ ಜೊತೆಗೆ ನೀಡಿದ ಜಂಟಿ ಹೇಳಿಕೆಯಲ್ಲಿ ಭಾರತ ಗಾಂಧಿ ಮತ್ತು ಬುದ್ಧನ ನಾಡು. ಯಾವುದೇ ಕಾರಣಕ್ಕು ಅಸಹಿಷ್ಣುತಯೆಲ್ಲಿ ಇಲ್ಲಿ ಸಹಿಸಿಕೊಳ್ಳುವುದಿಲ್ಲ ಎಂದಿದ್ದರು.
"ಭಾರತದಲ್ಲಿ ಯಾವುದೇ ಮೂಲೆಯಲ್ಲಿ ಯಾವುದೇ ಘಟನೆಯಾಗಲಿ - ಒಂದೆರಡೇ ಘಟನೆಗಳಾಗಲೀ- ನಾವು ಅದನ್ನು ಸಹಿಸಿಕೊಳ್ಳುವುದಿಲ್ಲ ಮತ್ತು ಕಾನೂನಾತ್ಮಕವಾಗಿ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ. ೧೨೫ ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯುಳ್ಳ ದೇಶದಲ್ಲಿ ಸಣ್ಣ ಘಟನೆಯೆಂದು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಎಲ್ಲ ಘಟನೆಗಳು ಗಂಭೀರವೇ. ನಮ್ಮ ಸಾಮಾಜಿಕ ಮೌಲ್ಯಗಳ ವಿರುದ್ಧದ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ" ಎಂದು ಪ್ರಧಾನಿ ಮೋದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


