ಪ್ರಧಾನ ಸುದ್ದಿ

ನಾಲ್ಕು ದಿನ ತಡವಾಗಿ ಕೇರಳಕ್ಕೆ ಬಂದೆರಗಿದ ಮುಂಗಾರು

ತನ್ನ ನಿಗದಿತ ದಿನಕ್ಕೂ ನಾಲ್ಕು ದಿನ ತಡವಾಗಿ ಕೇರಳಕ್ಕೆ ಅಪ್ಪಳಿಸಿರುವ ನೈಋತ್ಯ ಮುಂಗಾರು ಮಳೆ, ಮಳೆಗಾಲದ ಆರಂಭವನ್ನು ಸೂಚಿಸಿದೆ.

ನಾಲ್ಕು ದಿನ ತಡವಾಗಿ ಕೇರಳಕ್ಕೆ ಬಂದೆರಗಿದ ಮುಂಗಾರು
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ತನ್ನ ನಿಗದಿತ ದಿನಕ್ಕೂ ನಾಲ್ಕು ದಿನ ತಡವಾಗಿ ಕೇರಳಕ್ಕೆ ಅಪ್ಪಳಿಸಿರುವ ನೈಋತ್ಯ ಮುಂಗಾರು ಮಳೆ, ಮಳೆಗಾಲದ ಆರಂಭವನ್ನು ಸೂಚಿಸಿದೆ.

"ಸಾಮಾನ್ಯವಾಗಿ ಜೂನ್ ೧ರಂದು ಬರುವ ನೈಋತ್ಯ ಮುಂಗಾರು ಇಂದು ಜೂನ್ ೪ ೨೦೧೫ ರಂದು ಕೇರಳಕ್ಕೆ ಬಂದಿದೆ" ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

"ಇದು ದಕ್ಷಿಣ ಅರಬ್ಬೀ ಸಮುದ್ರ ಮತ್ತು ಕೇಂದ್ರ ಅರಬ್ಬೀ ಸಮುದ್ರ, ಸಂಪೂರ್ಣ ಲಕ್ಷ ದ್ವೀಪ ಮತ್ತು ಕೇರಳ, ಕರ್ನಾಟಕದ ದಕ್ಷಿಣ ಮತ್ತು ಕರಾವಳಿ, ತಮಿಳುನಾಡು, ಬಂಗಾಳ ಕೊಲ್ಲಿಯ ಕೆಲವು ಭಾಗಗಳಿಗೂ ಮುನ್ನುಗ್ಗಿದೆ" ಎಂದು ತಿಳಿಸಿದೆ.

ಈ ಮುಂಗಾರು ಕರ್ನಾಟಕದ ಇನ್ನೂ ಹೆಚ್ಚಿನ ಭಾಗಗಳಿಗೆ, ತಮಿಳುನಾಡು, ರಾಯಲಸೀಮಾದ ಕೆಲವು ಭಾಗಗಳು ಮತ್ತು ಆಂಧ್ರ ಪ್ರದೇಶದ ಕಾರಾವಳಿ ಹಾಗು ಈಶಾನ್ಯ ಭಾರತಕ್ಕೂ ಮುಂದಿನ ೪೮ ಘಂಟೆಗಳಲ್ಲಿ ಕ್ರಮಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸದೆ.

ಇದಕ್ಕೂ ಮೊದಲು ಹವಾಮಾನ ಇಲಾಖೆ ಈ ಬಾರಿ ಮೇ ೩೦ ರಂದು ಮಳೆಗಾಲ ಪ್ರಾರಂಭವಾಗಲಿದ್ದು ಮುಂಗಾರು ಸಾಮಾನ್ಯಕ್ಕಿಂತಲೂ ಕಡಿಮೆಯಿರುತ್ತದೆ ಎಂದಿತ್ತು ಹಾಗು ನಂತರ ಮಳೆ ಅಂಶ ಕಡಿಮೆಯಿರಲಿದೆ ಎಂದು ತಿಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.