ಒಂದೇ ದಿನ 13 ರೈತರ ಆತ್ಮಹತ್ಯೆ!
ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ ಹದಿಮೂರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಮೈಸೂರು ಜಿಲ್ಲೆಯವರೇ ನಾಲ್ವರಿದ್ದಾರೆ. ಅಲ್ಲದೆ, ಇಬ್ಬರು ಮಹಿಳೆಯರೂ ಸಾವಿಗೆ ಶರಣಾಗಿದ್ದಾರೆ...

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ ಹದಿಮೂರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಮೈಸೂರು ಜಿಲ್ಲೆಯವರೇ ನಾಲ್ವರಿದ್ದಾರೆ. ಅಲ್ಲದೆ, ಇಬ್ಬರು ಮಹಿಳೆಯರೂ ಸಾವಿಗೆ ಶರಣಾಗಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಜಗದೀಶ್ ಅವರು 1 ಎಕರೆಯಲ್ಲಿ ಬೆಳೆದಿದ್ದ ಶುಂಠಿ ಅತಿಯಾದ ಮಳೆಯಿಂದ ಕೊಳೆತಿತ್ತು. ರು.1.5 ಲಕ್ಷ ಸಾಲವಿದ್ದ ಹಿನ್ನೆಲೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಎಂ. ಹೊಸಳ್ಳಿ ಗ್ರಾಮದ ಮಂಜುನಾಥ್ ರು.5 ಲಕ್ಷ ಸಾಲಕ್ಕೆ ಹೆದರಿ ನೇಣಿಗೆ ಶರಣಾಗಿದ್ದಾರೆ. ಹುಣಸೂರು ತಾಲೂಕಿನ ಸಣ್ಣೇಗೌಡರ ಕಾಲೋನಿಯ ಶಿವರಾಜೇಗೌಡ ರು.3.50 ಲಕ್ಷ ಸಾಲಕ್ಕೆ ಹೆದರಿ ಸಾವು ತಂದುಕೊಂಡಿದ್ದಾರೆ.
ಕೆ.ಆರ್. ನಗರ ತಾಲೂಕಿನ ಯೋಗವಾಣಿ ಎಂಬುವರು ಪತಿಯ ಸಾಲದಿಂದ ಬೇಸತ್ತು ಬೆಂಕಿ ಹಚ್ಚಿಕೊಂಡಿದ್ದಾರೆ. ಪತಿ ಬಸವರಾಜು ಕೃಷಿಗಾಗಿ ರು.2.65 ಲಕ್ಷ ಸಾಲ ಮಾಡಿದ್ದರು. ಯಳಂದೂರು ತಾಲೂಕಿನ ಇರಸವಾಡಿ ಗ್ರಾಮದ ಮರಿಸ್ವಾಮಿ ಕೊಳವೆಬಾವಿ ಕೊರೆಸಲು ರು.2 ಲಕ್ಷ ಸಾಲ ಮಾಡಿದ್ದರು. ಆದರೆ, ಕೊಳವೆಬಾವಿ ಬತ್ತಿ ಬೆಳೆ ಒಣಗಿದ್ದರಿಂದ ನಷ್ಟಕ್ಕೆ ಹೆದರಿ ವಿಷ ಸೇವಿಸಿದ್ದಾರೆ. ಗಂಗಾವತಿ ತಾಲೂಕಿನ ಶ್ರೀನಿವಾಸ ವೆಂಕಟನಾ ರಾಯಣ 10 ಎಕರೆ ಜಮೀನಲ್ಲಿ ಕೃಷಿ ಕೈಗೊಂಡಿ ದ್ದರು. ಇದಕ್ಕಾಗಿ ರು.8 ಲಕ್ಷ ಸಾಲ ಮಾಡಿದ್ದರು. ಆಲಿಕಲ್ಲು ಮಳೆಗೆ ಬೆಳೆ ಹಾನಿಯಾಗಿತ್ತು. ಸಾಲಗಾರರ ಕಿರುಕುಳಕ್ಕೆ ಬೇಸತ್ತು ನೇಣುಬಿಗಿದು ಕೊಂಡಿದ್ದಾರೆ.
ಇದೇ ತಾಲೂಕಿನ ಮಲ್ಲಯ್ಯ ರಾಯಪ್ಪ ಸ್ಥಳೀಯ ವ್ಯವಸಾಯ ಸೇವಾ ಸಹಕಾರ ಸಂಘ ದಲ್ಲಿ ಸಾಲ ಪಡೆದಿದ್ದರು. ಬೆಳೆ ನಷ್ಟದಿಂದ ಕಂಗಾಲಾಗಿ ನೇಣಿಗೆ ಕೊರಳೊಡ್ಡಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ಕಗ್ಗೆರೆಯ ರೈತ ಸಹದೇವ ತಮ್ಮ ಬೆಳೆಗೆ ಸೂಕ್ತ ಬೆಲೆ ಸಿಕ್ಕಿರಲಿಲ್ಲ.ಕೊಳವೆ ಬಾವಿ ಕೊರೆಸಲು ಮಾಡಿದ್ದ ಸಾಲವನ್ನೂ ತೀರಿಸಲಾಗದೆ ನೇಣಿಗೆ ಮೊರೆಹೋಗಿದ್ದಾರೆ. ಹಗರಿ ಬೊಮ್ಮನಹಳ್ಳಿ ತಾಲೂಕಿನ ರೈತ ಜೇಮ್ಲ ನಾಯ್ಕ ಅವರ ಬೆಳೆ ನೀರಿಲ್ಲದೆ ಒಣಗಿತ್ತು. ರು.5 ಲಕ್ಷ ಸಾಲವಿದ್ದರಿಂದ ಕ್ರಿಮಿನಾಶಕ ಸೇವಿಸಿದ್ದಾರೆ. ಸವದತ್ತಿ ತಾಲೂಕಿನ ಈರಪ್ಪ ಬಸಪ್ಪ ಕಡಕೋಳ 11 ಕೊಳವೆಬಾವಿ ಕೊರೆಸಿದ್ದರೂ, ನೀರು ಸಿಕ್ಕಿರಲಿಲ್ಲ. ಇದಕ್ಕಾಗಿ ರು.25 ಲಕ್ಷ ಸಾಲವಾಗಿದ್ದರಿಂದ ಬೇಸತ್ತು ವಿನ ನಿರ್ಧಾರ ತೆಗೆದುಕೊಂಡಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ಮಹಾದೇವಗೌಡ ಬಸನ ಗೌಡ ಬಿರಾದಾರ ಅವರಿಗೆ ರು.3 ಲಕ್ಷ ಸಾಲವಿತ್ತು. ಕಾರ್ಖಾನೆಗೆ ಕಬ್ಬು ಮಾರಿದ್ದರೂ ಹಣ ಸಿಕ್ಕಿರಲಿಲ್ಲ. 4-5 ದಿನಗಳ ಹಿಂದೆ ನೆ ಬಿಟ್ಟಿದ್ದ ಅವರು ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ. ಹೊಳಲ್ಕೆರೆಯ ರೈತ ತಿಪ್ಪೇಸ್ವಾಮಿ ಬ್ಯಾಂಕ್‍ನಲ್ಲಿ ರು.50,000 ಸಾಲ ಪಡೆದಿದ್ದರು. ಜಮೀನಿನಲ್ಲಿ ಸರಿಯಾಗಿ ಬೆಳೆ ಬಂದಿರದ್ದಕ್ಕೆ ಬೇಸರಗೊಂಡು ವಿಷ ಸೇವಿಸಿದ್ದಾರೆ. ಹಾಸನದ ಜಯ ಲಕ್ಷ್ಮಮ್ಮ (41) ಲೇವಾದೇವಿದಾರರಿಂದ ಎರಡೂವರೆ ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲಕ್ಕೆ ಬದಲಾಗಿ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಇದಕ್ಕೆ ನೊಂದು ಸಾವಿಗೆ ಶರಣಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


