೪ ವರ್ಷದ ಅಪ್ರಾಪ್ತನಿಗೆ ಮದ್ಯ ನೀಡಿದ ಯುವಕರು; ವಿಡಿಯೋ ಜಾಡು ಹಿಡಿದು ಇಬ್ಬರ ಬಂಧನ
ಯುವಕರ ಗುಂಪೊಂದು ೪ ವರ್ಷದ ಬಾಲಕನೋಬ್ಬನಿಗೆ ಮದ್ಯಪಾನ ಸೇವಿಸುವಂತೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೆಲವೇ

ತಿರುವಣ್ಣಾಮಲೈ: ಯುವಕರ ಗುಂಪೊಂದು ೪ ವರ್ಷದ ಬಾಲಕನೋಬ್ಬನಿಗೆ ಮದ್ಯಪಾನ ಸೇವಿಸುವಂತೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೆಲವೇ ಘಂಟೆಗಳಲ್ಲಿ ಕಾರ್ಯನಿರತರಾದ ತಿರುವಣ್ಣಾಮಲೈ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿ, ಬಾಲಕನ ಮಾವನನ್ನು ಸೇರಿದಂತೆ ಇನ್ನೂ ನಾಲ್ವರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಒಂದು ನಿಮಿಷ ೩೭ ಸೆಕಂಡ್ ಗಳ ಈ ವಿಡಿಯೋ ವಾಟ್ಸ್ ಆಪ್, ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಟ್ವಿಟ್ಟರ್ ಗಳಲ್ಲಿ ಹರಿದಾಡುತ್ತಿತ್ತು. ಈ ವಿಡಿಯೋದಲ್ಲಿ ೬ ರಿಂದ ಏಳು ಜನರ ಗುಂಪು ನಾಲ್ಕು ವರ್ಷದ ಬಾಲಕನಿಗೆ ಪ್ಲಾಸ್ಟಿಕ್ ಲೋಟದಿಂದ ಬಿಯರ್ ಕುಡಿಯುವಂತೆ ಮಾಡಿ ನಗಾಡುತ್ತಿದ್ದ ಆಘಾತಕಾರಿ ಘಟನೆ ದಾಖಲಾಗಿತ್ತು.
ಬಾಲಕ ಬಿಯರ್ ಕುಡಿಯುತ್ತಿದ್ದಂತೆ ಅವನ ಸುತ್ತ ನೆರೆದಿದ್ದ ಈ ಯುವಕರು ಗಹಗಹಿಸಿ ನಗುತ್ತ ಇನ್ನು ಹೆಚ್ಚು ಕುಡಿಯುವಂತೆ ಪುಸಲಾಯಿಸುತ್ತಿದ್ದರು. ಬಾಲಕ ಕುಡಿಯಲಾಗುವುದಿಲ್ಲ ಎಂದು ಸನ್ನೆ ಮಾಡಿದ್ದರೂ ಕುಡಿಯುವಂತೆ ಪ್ರೇರೇಪಿಸಿದ್ದರು ಈ ಯುವಕರು.
ಈ ವಿಡಿಯೋ ಹರಡುತ್ತಿದ್ದಂತೆ ಮೂರು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ವಿಡಿಯೋದಲ್ಲಿ ಕಂಡ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯ ಜಾಡು ಹಿಡಿದು ಆ ಯುವಕರಲ್ಲಿ ಇಬ್ಬರನ್ನು ಸೆರೆ ಹಿಡಿದಿದ್ದಾರೆ. ಬಂಧಿತರಾದ ಏಳುಮಲೈ(೨೩) ಮತ್ತು ಪ್ರೇಮಕುಮಾರ್(೨೨) ತಮ್ಮ ಗ್ರಾಮದ ಬಳಿಯಿರುವ ಕೆರೆಯ ಬಳಿ ಈ ಘಟನೆ ನಡೆದಿದ್ದು ಎಂದು ಒಪ್ಪಿಕೊಂಡಿದ್ದಾರೆ.
ಮುರುಗನ್ ಎಂಬುವವನ ಸೋದರ ಅಳಿಯ ಈ ಬಾಲಕ. ಮುರುಗನ್ ತನ್ನ ಗೆಳೆಯರೊಂದಿಗೆ ಕ್ರಿಕೆಟ್ ಆಡಲು ತೆರಳುವಾಗ ಈ ಬಾಲಕನ್ನನ್ನು ಕರೆದೊಯ್ದು, ಆಟದ ನಂತರ ಗೆಳೆಯರೊಂದಿಗೆ ಮದ್ಯ ಸೇವಿಸಿ ಬಾಲಕನಿಗೂ ಮದ್ಯ ಸೇವಿಸುವಂತೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


