ಪ್ರಧಾನ ಸುದ್ದಿ

ಚಿನ್ನ ಖರೀದಿ ಬೇಡ, ಆ ದುಡ್ಡನ್ನು ಬ್ಯಾಂಕ್ನಲ್ಲಿರಿಸಿ : ಮೋದಿ

ಚಿನ್ನ ಖರೀದಿಸಿ ಅದನ್ನು ಸುರಕ್ಷಿತವಾಗಿಡುವ ಬದಲು ಅದನ್ನು ಬ್ಯಾಂಕ್ ನಲ್ಲಿರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ....

ಚಿನ್ನ ಖರೀದಿ ಬೇಡ, ಆ ದುಡ್ಡನ್ನು ಬ್ಯಾಂಕ್ನಲ್ಲಿರಿಸಿ : ಮೋದಿ
ನರೇಂದ್ರ ಮೋದಿ
Published On :

ಮುಂಬೈ:  ಚಿನ್ನ ಖರೀದಿಸಿ ಅದನ್ನು ಸುರಕ್ಷಿತವಾಗಿಡುವ ಬದಲು ಅದನ್ನು ಬ್ಯಾಂಕ್ ನಲ್ಲಿರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತೀಯರಿಗೆ ಉಳಿತಾಯ ಮಾಡುವ ಒಳ್ಳೆಯ ಗುಣವಿದೆ. ಈ ಎಲ್ಲ ಉಳಿತಾಯಗಳು ಚಿನ್ನದ ರೂಪದಲ್ಲಿರುತ್ತವೆ. ಚಿನ್ನವನ್ನು ಬ್ಯಾಂಕ್ನಲ್ಲಿರಿಸಿದರೆ ಅದನ್ನು ಸುರಕ್ಷಿತವಾಗಿ ಕಾಪಾಡುವುದು ಕೂಡಾ ಬ್ಯಾಂಕ್ಗಳಿಗೆ ಚಾಲೆಂಜಿಂಗ್ ವಿಷಯವೇ.

ಜನರು ಚಿನ್ನ ಖರೀದಿಸುತ್ತಾರೆ, ತಾವು ಖರೀದಿಸಿದ ಚಿನ್ನ ಸುರಕ್ಷಿತ ಹಾಗೂ ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತೆ ಎಂಬ ಅನಿಸಿಕೆ ಅವರಲ್ಲಿ ಇರುತ್ತದೆ. ಜನರು ಬ್ಯಾಂಕ್ ಖಾತೆಗಳಲ್ಲಿರಿಸಿದನ್ನು ಅವರು ಆಗ್ರಹಿಸಿದಾಗ ಕೊಡುವುದು ಕೂಡಾ ಬ್ಯಾಂಕ್ಗಳಿಗೆ ಸವಾಲಿನ ಸಂಗತಿ ಎಂದು ಮೋದಿ ಹೇಳಿದ್ದಾರೆ.

ಐಸಿಐಸಿಐ  ಡಿಜಿಟಲ್ ಗ್ರಾಮವನ್ನು ದೇಶಕ್ಕೆ ಸಮರ್ಪಿಸಿ ಮಾತನಾಡಿದ ಮೋದಿ, ಕ್ಯಾಶ್ಲೆಸ್  ಬ್ಯಾಂಕಿಂಗ್ ವ್ಯವಹಾರದಿಂದ ಕಪ್ಪು ಹಣವನ್ನು ನಿಯಂತ್ರಿಸಬಹುದು. ಭಾರತದಲ್ಲಿರುವ ಬ್ಯಾಂಕ್ಗಳು ಕ್ಯಾಶ್ಲೆಸ್ ಬ್ಯಾಂಕಿಂಗ್ ವ್ಯವಹಾರಗಳಿಗೆ ಪ್ರೋತ್ಸಾಹ ನೀಡಬೇಕು. ಇದು ಕಪ್ಪು ಹಣ ತಡೆಗಿರುವ ಉತ್ತಮ ಪರಿಹಾರ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.