ಪ್ರಧಾನ ಸುದ್ದಿ

ಪ್ರದೀಪ್ ಜೈನ ಕೊಲೆ ಪ್ರಕರಣ: ಅಬು ಸಲೇಂ ತಪ್ಪಿತಸ್ಥ

೧೯೯೫ ರಲ್ಲಿ ನಡೆದ ಮುಂಬೈ ನಗರದ ರಿಯಲ್ ಎಸ್ಟೇಟ್ ಉದ್ಯಮಿ ಪ್ರದೀಪ್ ಜೈನ್ ಅವರ ಕೊಲೆ ಆರೋಪದಲ್ಲಿ

ಪ್ರದೀಪ್ ಜೈನ ಕೊಲೆ ಪ್ರಕರಣ: ಅಬು ಸಲೇಂ ತಪ್ಪಿತಸ್ಥ
ಅಬು ಸೇಲಂ
Published On :

ಮುಂಬೈ: ೧೯೯೫ ರಲ್ಲಿ ನಡೆದ ಮುಂಬೈ ನಗರದ ರಿಯಲ್ ಎಸ್ಟೇಟ್ ಉದ್ಯಮಿ ಪ್ರದೀಪ್ ಜೈನ್ ಅವರ ಕೊಲೆ ಆರೋಪದಲ್ಲಿ, ಭಾರತಕ್ಕ ಗಡಿಪಾರಾಗಿರುವ ಅಬು ಸಲೇಂ ಮತ್ತು ಇನ್ನಿತರ ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರು ಎಂದು ವಿಶೇಷ ಟಾಡಾ ನ್ಯಾಯಾಲಯ ಸೋಮವಾರ ಮುಂಬೈನಲ್ಲಿ ತೀರ್ಪು ನೀಡಿದೆ.

೨೦೦೫ ರಲ್ಲಿ ಭಾರತಕ್ಕೆ ಗಡಿಪಾರಾದ ನಂತರ ತಪ್ಪಿತಸ್ಥ ಎಂದು ಸಾಬೀತಾಗಿರುವ ಮೊದಲ ಪ್ರಕರಣ ಇದು. "ಐಪಿಸಿ ಸೆಕ್ಷನ್ ೩೦೨(ಕೊಲೆ) ೧೨೦ ಬಿ (ಪಿತೂರಿ) ಅಡಿ ಅಬು ಸಲೇಂ ತಪ್ಪಿತಸ್ಥ ಎಂದು ಸಾಬೀತಾಗಿದೆ" ಎಂದು ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ಉಜ್ವಲ್ ನಿಕಂ ತಿಳಿಸಿದ್ದಾರೆ.ತಪ್ಪಿತಸ್ಥರೆಂದು ಸಾಬೀತಾಗಿರುವ ಇನ್ನಿಬ್ಬರು ಆರೋಪಿಗಳು ವೀರೇಂದ್ರ ಜಂಬ್ ಮತ್ತು ಮೆಹಂದಿ ಹಸ್ಸನ್.

ಪೊಲೀಸರ ಆರೋಪದ ಪ್ರಕಾರ ೧೯೯೫ ಮಾರ್ಚ್ ೭ ರಂದು ತಮ್ಮ ಬೃಹತ್ ಬಂಗಲೆಯನ್ನು ತೊರೆಯಲು ನಿರಾಕರಿಸಿದ್ದಕ್ಕೆ ಅವರ ಜುಹೂ ಬಂಗಲೆ ಹೊರಗೆ ಗುಂಡಿನ ದಾಳಿಗೆ ಆಹುತಿಯಾಗಿದ್ದರು.

ಈ ಪ್ರಕರಣದಲ್ಲಿ ಸಲೇಂ, ಹಾಗು ರಿಯಲ್ ಎಸ್ಟೇಟ್ ಉದ್ಯಮಿಗಳಾದ ಜಂಬ್ ಮತ್ತು ಹಸ್ಸನ್ ವಿಚಾರಣೆ ಹೆದರಿಸುತ್ತಿದ್ದರು. ಮತ್ತೊಬ್ಬ ಆರೋಪಿ ನಯೀಮ್ ಖಾನ್ ತಪ್ಪೊಪ್ಪಿಕೊಂಡಿದ್ದರು. ಇನ್ನೊಬ್ಬ ಆರೋಪಿ ರಿಯಾಜ್ ಸಿದ್ಧಿಕಿ ಮೊದಲು ತಪ್ಪೊಪ್ಪಿಕೊಂಡಿದ್ದರೂ ನಂತರ ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿದ್ದರು. ನಂತರ ಸಿದ್ಧಿಕಿ ಅವರ ವಿಚಾರಣೆಯನ್ನು ಬೇರ್ಪಡಿಸಲಾಗಿತ್ತು.

೧೯೯೩ ರ ಮುಂಬೈ ಸರಣಿ ಬಾಂಬ್ ಸ್ಫೋಟ ಆರೋಪಿ ಅಬು ಸೇಲಂನನ್ನು ಪೋರ್ಚುಗಲ್ ನಿಂದ ೨೦೦೫ ೧೧ ನವೆಂಬರ್  ನಲ್ಲಿ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.