ಹೊಸದಿಕ್ಕಿನತ್ತ ದೇಶದ ಉತ್ಪಾದನೆ
ಮುಂದುವರಿದ ದೇಶಗಳೂ ಸಹ ಭಾರತದಲ್ಲಿ ತಯಾರಾಗುವ ಉತ್ಪನ್ನಗಳನ್ನು ಬಳಸುವ ಕಾಲ ದೂರವಿಲ್ಲ. ಇಷ್ಟು ದಿನ ಭಾರತ ಬೇರೆ ದೇಶಗಳತ್ತ ನೋಡುತ್ತಿತ್ತು, ಇನ್ನು ಕಾಲ ಬದಲಾಗಲಿದೆ ಎಂದು ವೋಲ್ವೊ ಇಂಡಿಯಾ ಆಡಳಿತ ನಿರ್ದೇಶಕ ಕಮಲ್ ಬಾಲಿ ಅಭಿಪ್ರಾಯಪಟ್ಟಿದ್ದಾರೆ...

ಬೆಂಗಳೂರು: ಮುಂದುವರಿದ ದೇಶಗಳೂ ಸಹ ಭಾರತದಲ್ಲಿ ತಯಾರಾಗುವ ಉತ್ಪನ್ನಗಳನ್ನು ಬಳಸುವ ಕಾಲ ದೂರವಿಲ್ಲ. ಇಷ್ಟು ದಿನ ಭಾರತ ಬೇರೆ ದೇಶಗಳತ್ತ ನೋಡುತ್ತಿತ್ತು, ಇನ್ನು ಕಾಲ ಬದಲಾಗಲಿದೆ ಎಂದು ವೋಲ್ವೊ ಇಂಡಿಯಾ ಆಡಳಿತ ನಿರ್ದೇಶಕ ಕಮಲ್ ಬಾಲಿ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಹಮ್ಮಿಕೊಂಡ ಎರಡು ದಿನಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ತಯಾರಾಗುವ ವೋಲ್ವೊ ಬಸ್ಗಳು ಯೂರೋಪ್ನಲ್ಲಿ ಸಂಚರಿಸುತ್ತಿವೆ. ಇದೇ ರೀತಿ ಭಾರತದಲ್ಲಿ ತಯಾರಾಗುವ ಉತ್ಪನ್ನಗಳು ವಿದೇಶಗಳಲ್ಲಿ ಬಳಕೆಯಾಗುವ ಸಂದರ್ಭಗಳು ಇನ್ನು ಹೆಚ್ಚುತ್ತವೆ ಎಂದು ತಮ್ಮದೇ ಸಂಸ್ಥೆಯ ಉದಾಹರಣೆ ನೀಡಿದರು. ದೇಶದ ಉತ್ಪಾದನಾ ಕ್ಷೇತ್ರ ಹೊಸ ಮಗ್ಗುಲಿಗೆ ಹೊರಳುವ ಕಾಲ ಸನ್ನಿಹಿತವಾಗಿದೆ. ಈ ವಿಚಾರದಲ್ಲಿ ಧನಾತ್ಮಕ ಸೂಚನೆಗಳು ಕಂಡುಬರುತ್ತಿವೆ. ಉತ್ಪಾದನಾ ಕ್ಷೇತ್ರ ಬೆಳೆದರೆ ದೇಶದ ಕೃಷಿ, ಸೇವಾ ಕ್ಷೇತ್ರಕ್ಕೂ ಸಾಕಷ್ಟು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇನ್ನೊಂದೆಡೆ ಡಿಜಿಟಲೀಕರಣ ಕಾರ್ಯ ಭರದಿಂದ ಸಾಗಿರುವುದು ಉತ್ಪಾದನಾ ಕ್ಷೇತ್ರಕ್ಕೆ ಸಾಕಷ್ಟು ಬೆಂಬಲ ನೀಡಿದಂತಾಗುತ್ತಿದೆ ಎಂದರು. ಜಿಎಸ್ಟಿ ಅನುಷ್ಠಾನಗೊಂಡರೆ ಉತ್ಪಾದನೆ ಮತ್ತು ಸರಕು ಸಾಗಾಣೆ ಕ್ಷೇತ್ರಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದರು. ಬಿಇಎಲ್ ಆಡಳಿತ ನಿರ್ದೇಶಕ ಸುನಿಲ್ ಕುಮಾರ್ ಮಾತನಾಡಿ, ಮೇಕ್ ಇನ್ ಇಂಡಿಯ ಪರಿಕಲ್ಪನೆಯಡಿ ಭಾರತದ ರಕ್ಷಣಾ ಕ್ಷೇತ್ರ ಹೊಸ ದಿಕ್ಕಿನತ್ತ ಸಾಗುತ್ತಿದೆ. ದೇಶೀ ರಕ್ಷಣಾ ಸಾಧನಗಳ ತಯಾರಿಕೆಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದು, ಒಂದೂವರೆ ವರ್ಷದಲ್ಲಿ ನಿರೀಕ್ಷೆ ಮೀರಿದ ಸ್ಪಂದನೆ ಸಿಕ್ಕಿದೆ ಎಂದರು. ನಿಯಮಗಳ ಸಡಿಲಿಕೆಯಿಂದ ರಕ್ಷಣಾ ಉತ್ಪನ್ನಗಳ ಸಂಶೋಧನೆಗೆ ಒತ್ತು ಸಿಕ್ಕಿದೆ. ಖಾಸಗಿ ಸಹಭಾಗಿತ್ವದಿಂದ ದೇಶಿ ತಂತ್ರಜ್ಞಾನ ಅಭಿವೃದ್ಧಿಗೆ ನೆರವಾಗಿದೆ.
ಇದಲ್ಲದೆ ರಕ್ಷಣಾ ಕ್ಷೇತ್ರದಲ್ಲಿ ರಫ್ತು ಮಾಡುವಷ್ಟು ಬದಲಾವಣೆ ಕಾಣುತ್ತಿದೆ ಎಂದರು. ಜಿಇ ಇಂಡಿಯಾ ಆಡಳಿತ ನಿರ್ದೇಶಕ ಮನೀಶ್ ಮುಖರ್ಜಿ ಸೇರಿದಂತೆ ವಿವಿಧ ಕಂಪನಿಗಳ ಪ್ರಮುಖರು ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


