ಪ್ರಧಾನ ಸುದ್ದಿ

ಶಾಸ್ತ್ರೀಯ ಭಾಷೆಗಾಗಿ ಅನುದಾನ ತರಲು ಬದ್ಧ

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ನಂತರ ಅನುದಾನ ಸಿಗುವುದು ತಡವಾಗಿದ್ದರೆ, ಸಮಸ್ಯೆ ಬಗೆಹರಿಸಲು ತಾವು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಒಟ್ಟಾಗಿ ಪ್ರಯತ್ನಿಸುತ್ತೇವೆ,'' ಎಂದು....

ಶಾಸ್ತ್ರೀಯ ಭಾಷೆಗಾಗಿ ಅನುದಾನ ತರಲು ಬದ್ಧ
ಕೇಂದ್ರ ಸಚಿವ ಅನಂತ್ ಕುಮಾರ್ (ಸಂಗ್ರಹ ಚಿತ್ರ)
Published On :

ಬೆಂಗಳೂರು: ``ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ನಂತರ ಅನುದಾನ ಸಿಗುವುದು ತಡವಾಗಿದ್ದರೆ, ಸಮಸ್ಯೆ ಬಗೆಹರಿಸಲು ತಾವು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಒಟ್ಟಾಗಿ  ಪ್ರಯತ್ನಿಸುತ್ತೇವೆ,'' ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದ್ದಾರೆ.

ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಡಿಜಿಟಲ್ ಕನ್ನಡ ಫೋರ್ಟಲ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ವಿಷಯ ತಿಳಿಸಿದರು. ಶಾಸ್ತ್ರೀಯ ಭಾಷೆ ಸ್ಥಾನಮಾನ  ಪಡೆದ ತಮಿಳುನಾಡು ಈ ವರೆಗೆ ರು.220 ಕೋಟಿ ಅನುದಾನ ಪಡೆದಿದೆ. ಕನ್ನಡಕ್ಕೆ ಹೆಚ್ಚಿನ ನೆರವು ದೊರೆತಿಲ್ಲ ಎಂಬ ವಿಚಾರವನ್ನು ಕಾರ್ಯಕ್ರಮದಲ್ಲಿ ಸಚಿವರಿಗೆ ತಿಳಿಸಲಾಯಿತು. ಇದಕ್ಕೆ  ಪ್ರತಿಕ್ರಿಯಿಸಿದ ಸಚಿವರು, ``ಶಾಸ್ತ್ರೀಯ ಸ್ಥಾನಮಾನದ ವಿಚಾರದಲ್ಲಿ ಕನ್ನಡಕ್ಕೆ ನಷ್ಟ ಆಗಿದೆ ಎಂಬ ಮಾಹಿತಿ ಪಡೆದಿದ್ದೇನೆ. ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಟ್ಟಾಗಿ  ಪ್ರಯತ್ನಿಸಿ ಸಮಸ್ಯೆ ಬಗೆಹರಿಸುತ್ತೇವೆ,'' ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ``ಇಂದಿನ ಯುವ ಜನಾಂಗ ಸಾಮಾಜಿಕ ತಾಣಗಳಿಗೆ ಒಗ್ಗಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರದಲ್ಲೂ ಹೊಸ ಪ್ರಯೋಗಗಳು ನಡೆಯುತ್ತಿದೆ.  ಇಂದಿನ ಸುದ್ದಿಗಾಗಿ ನಾಳೆವರೆಗೆ ಕಾಯಬೇಕಿಲ್ಲ,'' ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಸಿ.-ನಾಣಯ್ಯ, ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, ಡಿಜಿಟಲ್  ಕನ್ನಡದ ಸಂಸ್ಥಾಪಕ ಪಿ.ತ್ಯಾಗರಾಜ್ ಮತ್ತಿತರರು ಇದ್ದರು.

ಶೇ.20 ಕಪ್ಪು ಪ್ರದೇಶ: ದೇಶದದಲ್ಲಿ ಟಿವಿ, ಪತ್ರಿಕೆ ಇಲ್ಲದ ಶೇ.20ರಷ್ಟು `ಡಾರ್ಕ್ ಏರಿಯ' ಇದೆ. ಈ ಶತಮಾನದಲ್ಲಿ ಸಾಕಷ್ಟು ತಾಂತ್ರಿಕ ಬೆಳವಣಿಗೆ ಸಾಧಿಸಿದರೂ ಈ ಸಂಗತಿಯು ನಾಗರಿಕ  ಸಮಾಜಕ್ಕೆ ಸವಾಲಿನ ವಿಷಯ ಎಂದು ಅನಂತಕುಮಾರ್ ತಿಳಿಸಿದರು. ದೇಶವನ್ನು ಡಿಜಿಟಲೀಕರಣ ಮಾಡಬೇಕೆಂಬ ನಿಟ್ಟಿನಲ್ಲಿ ಪ್ರಧಾನಿಯವರ ವಿಶೇಷ ಪ್ರಯತ್ನ ನಡೆಸಿದ್ದಾರೆ. ರಾಜ್ಯಗಳ  ಸಹಕಾರದೊಂದಿಗೆ ವಿವಿಧ ಕ್ಷೇತ್ರಗಳನ್ನು ಡಿಜಿಟಲೀಕರಣದ ಪ್ರಯತ್ನ ನಡೆದಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.