ಪ್ರಧಾನ ಸುದ್ದಿ

ಲೋಕಾ ಪದಚ್ಯುತಿ: ಸರ್ಕಾರದಿಂದ ಪತ್ರ

ಲೋಕಾಯುಕ್ತ ನ್ಯಾ.ಭಾಸ್ಕ ರ್‍ರಾವ್ ಪದಚ್ಯುತಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಲೋಕಾಯುಕ್ತ ಕಚೇರಿಗೆ ತಿಳುವಳಿಕೆ ಪತ್ರ ರವಾನೆಯಾಗಿದೆ...

ಲೋಕಾ ಪದಚ್ಯುತಿ: ಸರ್ಕಾರದಿಂದ ಪತ್ರ
ಕರ್ನಾಟಕ ಲೋಕಾಯುಕ್ತ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಲೋಕಾಯುಕ್ತ ನ್ಯಾ.ಭಾಸ್ಕ ರ್‍ರಾವ್ ಪದಚ್ಯುತಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಲೋಕಾಯುಕ್ತ ಕಚೇರಿಗೆ ತಿಳುವಳಿಕೆ ಪತ್ರ ರವಾನೆಯಾಗಿದೆ.

ನ್ಯಾ.ಭಾಸ್ಕರ್‍ರಾವ್ ಪದಚ್ಯುತಿಗೆ ಸಂಬಂಧಿಸಿ ಸರ್ಕಾರದ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆಯ ಆಡಳಿತ ವಿಭಾಗದ ಅದೀನ ಕಾರ್ಯದರ್ಶಿ ಲೋಕಾಯುಕ್ತ ರಿಜಿಸ್ಟ್ರಾರ್ ಅವರಿಗೆ ತಿಳುವಳಿಕೆ ಪತ್ರ  ರವಾನಿಸಿದ್ದಾರೆ. ನ್ಯಾ.ಭಾಸ್ಕರ್‍ರಾವ್ ವಿರುದ್ಧ ಭ್ರಷ್ಟಾ ಚಾರ ಆರೋಪಗಳ ಬಂದಿರುವ ಹಿನ್ನೆಲೆಯಲ್ಲಿ ವಿಧಾನಸಭೆ ಉಭಯ ಸದನದಲ್ಲಿ ಪ್ರಸ್ತಾಪ ಮಾಡಲಾಗಿದೆ. ಅಂತಿಮವಾಗಿ ವಿಧಾನಸಭೆಯಲ್ಲಿ ಪದಚ್ಯುತಿ ಪ್ರಸ್ತಾಪ ಮಂಡಿಸಲಾಗಿದೆ. ಮುಂದಿನ ಕ್ರಮಕ್ಕೆ ಹೈಕೋರ್ಟ್ ಸಿಜೆ ಅವರಿಗೂ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಪತ್ರದ ಮೂಲಕ ತಿಳಿಸಲಾಗಿದೆ.

ಇದೇ ರೀತಿ ಉಪ ಲೋಕಾಯುಕ್ತ ನ್ಯಾ.ಸುಭಾಷ್ ಆಡಿ ಕುರಿತ ಪತ್ರವನ್ನೂ ಕಳುಹಿಸಲಾಗಿದೆ. ಸದನದಲ್ಲಿ ಕೈಗೊಳ್ಳುವ ನಿರ್ಧಾರ ಗಳನ್ನು ಲೋಕಾ ಯುಕ್ತಕ್ಕೆ ತಿಳಿಸುವುದು ನಿಯಮವಾಗಿದ್ದು, ಅದರಂತೆ  ಪತ್ರ ರವಾನಿಸಲಾಗಿದೆ.

ಆಡಿ ಪ್ರಕರಣದ ಸೂಕ್ತ ನಿರ್ಧಾರಕ್ಕೆ ಸ್ಪೀಕರ್‍ಗೆ ಪತ್ರ
ಬೆಂಗಳೂರು: ಉಪಲೋಕಾ ಯುಕ್ತರ ಪದಚ್ಯುತಿ ಪ್ರಸ್ತಾಪವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ರವಾನಿ ಸುವ ಮುನ್ನ ಸ್ಪೀಕರ್ ಅವರು ವಹಿಸುವ ಪಾತ್ರ ಇಡೀ ದೇಶದಲ್ಲೇ ಚರ್ಚೆಗೀಡಾಗಿದೆ.  ಹೀಗಾಗಿ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯಾಂಗ ಮತ್ತು ನ್ಯಾಯಾಂಗ ದ ಮೇಲೂ ಪ್ರಭಾವ ಬೀರುವ ನಿರ್ಧಾರ ತೆಗೆದುಕಗೊಳ್ಳಬೇಕು ಎಂದು ಜನಾಧಿಕಾರ ಸಂಘರ್ಷ ಪರಿಷತ್ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಲಿಖಿತ ಮನವಿ ಸಲ್ಲಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.