ಪ್ರಧಾನ ಸುದ್ದಿ

ಬಿಬಿಎಂಪಿ ಗದ್ದುಗೆಗೆ ಪಕ್ಷಗಳ ತಂತ್ರ: ಗೌಡರ ಭೇಟಿಗೆ ಬಿಜೆಪಿ?

ಕೈಗೆಬಂದ ತುತ್ತು ಬಾಯಿಗೆ ಬರದಂತೆ ತಡೆಯುವ ಕಾಂಗ್ರೆಸ್ ತಂತ್ರಕ್ಕೆ ಮರು ತಂತ್ರ ಹಾಕಿರುವ ಬಿಜೆಪಿಯು ಜೆಡಿಎಸ್‍ನೊಂದಿಗೆ ಮೈತ್ರಿಗೆ ಮುಕ್ತ ಮನಸ್ಸು ಮಾಡಿದೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ರಚಿತವಾಗಿದ್ದ ಪಕ್ಷದ ಕೋರ್ ಕಮಿಟಿ...

ಬಿಬಿಎಂಪಿ ಗದ್ದುಗೆಗೆ ಪಕ್ಷಗಳ ತಂತ್ರ: ಗೌಡರ ಭೇಟಿಗೆ ಬಿಜೆಪಿ?
ಜೆಡಿಎಸ್‌ ಮುಖ್ಯಸ್ಥ ಎಚ್.ಡಿ.ದೇವೇಗೌಡ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಕೈಗೆಬಂದ ತುತ್ತು ಬಾಯಿಗೆ ಬರದಂತೆ ತಡೆಯುವ ಕಾಂಗ್ರೆಸ್ ತಂತ್ರಕ್ಕೆ ಮರು ತಂತ್ರ ಹಾಕಿರುವ ಬಿಜೆಪಿಯು ಜೆಡಿಎಸ್‍ನೊಂದಿಗೆ ಮೈತ್ರಿಗೆ ಮುಕ್ತ ಮನಸ್ಸು ಮಾಡಿದೆ.
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ರಚಿತವಾಗಿದ್ದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಹಲವು ಸದಸ್ಯರು ಜೆಡಿಎಸ್‍ನೊಂದಿಗೆ ಹೋಗುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಧಾನಪರಿಷತ್ ಪಕ್ಷೇತರ ಸದಸ್ಯ ಮಲ್ಲಿಕಾರ್ಜುನ್ ಅವರು ಜೆಡಿಎಸ್ ನೊಂದಿಗೆ ಹೋಗುವುದು ಸೂಕ್ತ. ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಡುವುದು ಅಗತ್ಯ ಎಂದು ಅಭಿಪ್ರಾಯಮಂಡಿಸಿದ್ದಾರೆ. ಈ ಬಗ್ಗೆ ಆರ್. ಅಶೋಕ್ ಸಹ ಸಹಮತ ವ್ಯಕ್ತಪಡಿಸಿದ್ದಾರೆ ಎಂದಿವೆ ಪಕ್ಷದ ಮೂಲಗಳು.

ಪಕ್ಷೇತರ ಸದಸ್ಯರನ್ನು ಮನವೊಲಿಸುವ ನಿಟ್ಟಿನಲ್ಲಿ ಪಕ್ಷದ ಮುಖಂಡರು ಪ್ರಯತ್ನವನ್ನೂ ನಡೆಸಿದ್ದಾರೆ. ಕೆಲವು ಸದಸ್ಯರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದೂ ಸಹ ಗೊತ್ತಾಗಿದೆ. ಆದರೆ, ನಂಬಿಕೆ ಕಷ್ಟಸಾದ್ಯವಾಗಿರುವುದರಿಂದ ಪರ್ಯಾಯ ಆಲೋಚನೆಯೂ ಅಗತ್ಯ ಎಂದು ಸಭೆಯಲ್ಲಿ ಅಭಿಪ್ರಾಯವ್ಯಕ್ತವಾಗಿದೆ.

ಶನಿವಾರ ಸಂಜೆ ವೇಳೆಗೆ ಇನ್ನೊಂದು ಸುತ್ತಿನ ಸಭೆ ನಡೆಸುವುದು ಹಾಗೂ ಸಾಧ್ಯವಾದರೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರನ್ನು ಭೇಟಿಯಾಗಿ ಜೆಡಿಎಸ್ ಬೆಂಬಲ ಕೋರುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಮೈತ್ರಿ ಮುನಿಸು

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾತುಕತೆ ಪ್ರಾರಂಭವಾಗುತ್ತಿದ್ದಂತೆ ಮಾ್ಯಜಿಕ್ ನಂಬರ್‍ನ ಲೆಕ್ಕಾಚಾರ ಪ್ರಾರಂಭವಾಗಿದೆ. ಕೋಮುವಾದಿ ಬಿಜೆಪಿ ಬಿಬಿಎಂಪಿ ಯಲ್ಲಿ ಕೂಡದಂತೆ ತಡೆಯುವುದೇ ಕಾಂಗ್ರೆಸ್ ಜೊತೆಗಿನ ಮೈತ್ರಿಯ ಮೂಲ ಎಂದ ಜೆಡಿಎಸ್ 100 ವಾರ್ಡ್ ಗೆದ್ದು ಬೀಗಿದ ಬಿಜೆಪಿಯಲ್ಲಿ ಈಗ ತಳಮಳದ ಛಾಯೆ. ಪ್ರತಿ ತಂತ್ರ ಹೆಣೆಯಲು ಎಲ್ಲ ರೀತಿಯ ಸಿದಟಛಿತೆ. ಶುಕ್ರವಾರ ವರಮಹಾಲಕ್ಷ್ಮಿ ಪೂಜೆಗಿಂತ ಮೇಯರ್‍ಗಿರಿ ಮೈತ್ರಿ ಪೂಜೆಯೇ ವಿಜೃಂಭಿಸಿತು. ಮಹತ್ವದ ಮಾತುಕತೆ ನಡೆದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.