ಪ್ರಧಾನ ಸುದ್ದಿ

ನಾಳೆ ಮತ ಎಣಿಕೆ ಎಲ್ಲೆಡೆ ಗೆಲವಿನ ಲೆಕ್ಕ

ಬಿಬಿಎಂಪಿ ಕದನ ಕಣದ ಕಲಿಗಳು ಈಗ ಚುನಾವಣೆ ಮುಗಿಸಿರುವ ಸಮಾಧಾನದಲ್ಲೇ ನೋ ಇದ್ದಾರೆ. ಆದರೆ, ಅವರ ಎದೆಯಲ್ಲಿ ಫಲಿತಾಂಶದ ನಡುಕ ಆರಂಭವಾಗಿದೆ.

ನಾಳೆ ಮತ ಎಣಿಕೆ ಎಲ್ಲೆಡೆ ಗೆಲವಿನ ಲೆಕ್ಕ
ಮತ ಯಂತ್ರಗಳಿರುವ ಕೊಠಡಿ
Published On :

ಬೆಂಗಳೂರು: ಬಿಬಿಎಂಪಿ ಕದನ ಕಣದ ಕಲಿಗಳು ಈಗ ಚುನಾವಣೆ ಮುಗಿಸಿರುವ ಸಮಾಧಾನದಲ್ಲೇ ನೋ ಇದ್ದಾರೆ. ಆದರೆ, ಅವರ ಎದೆಯಲ್ಲಿ ಫಲಿತಾಂಶದ ನಡುಕ ಆರಂಭವಾಗಿದೆ.

ಕಣದಲ್ಲಿದ್ದ ಬಹುತೇಕ ಅಭ್ಯರ್ಥಿಗಳು ಶನಿವಾರ ರಾತ್ರಿಯೇ ಮೊಬೈಲ್‍ಗಳನ್ನು ಬಂದ್ ಮಾಡಿ ವಿಶ್ರಾಂತಿಗೆ ಜಾರಿದ್ದರು.  ಭಾನುವಾರ ತಮ್ಮ ಪಕ್ಷದ ಕಚೇರಿಗಳಿಗೆ ಭೇಟಿ ನೀಡಿ ಮತದಾನದ ನಂತರದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದ್ದಾರೆ. ಹಾಗೆಯೇ ಕೆಲವು ವೈಯುಕ್ತಿಕ ಕೆಲಸಗಳನ್ನೂ ಮುಗಿಸಿಕೊಂಡು ಮನರಂಜನೆ ಕಾರ್ಯಕ್ರಮಗಳಿಗೂ ಹೋಗಿದ್ದಾರೆ. ಇನ್ನು ಕೆಲವು
ಅಭ್ಯರ್ಥಿಗಳು ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥನೆಯನ್ನೂ ಮಾಡಿದ್ದಾರೆ.

ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾದ ಸಮೀಕ್ಷೆಯಿಂದಲೂ ಅಭ್ಯರ್ಥಿಗಳು ಚಿಂತೆಗೆ ಒಳಗಾಗಿದ್ದಾರೆ. ಯಾವ ಮತಗಟ್ಟೆಯಲ್ಲಿ ಎಷ್ಟು ಮತಗಳು, ಜಾತಿ ಲೆಕ್ಕಾಚಾರದಲ್ಲಿ ಹೇಗೆ ಲಾಭ ಎಂಬುದರ ಬಗ್ಗೆ ಚರ್ಚೆ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.