ಕ್ರೀಡೆ

Asian Games 2026: 16 ವರ್ಷಗಳ ಕಾಯುವಿಕೆ ಅಂತ್ಯ; ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಸೀಮಾ ಕುಮಾರಿ!

ಭಾರತೀಯ ಅಥ್ಲೀಟ್ ಸೀಮಾ ಕುಮಾರಿ ಗುರುವಾರ 2026ರ ಏಷ್ಯನ್ ಗೇಮ್ಸ್‌ನಲ್ಲಿ 10,000 ಮೀಟರ್ ಓಟದಲ್ಲಿ ಭಾರತಕ್ಕೆ ಕಂಚಿನ ಪದಕ ಗೆಲ್ಲುವ ಮೂಲಕ 16 ವರ್ಷಗಳ ಬರಗಾಲವನ್ನು ಕೊನೆಗೊಳಿಸಿದರು. ಮಹಿಳೆಯರ 10,000 ಮೀಟರ್ ಫೈನಲ್ ಮಿಜುಹೊ ಪಾರ್ಕ್ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆಯಿತು.

Asian Games 2026: 16 ವರ್ಷಗಳ ಕಾಯುವಿಕೆ ಅಂತ್ಯ; ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಸೀಮಾ ಕುಮಾರಿ!
ಸೀಮಾ ಕುಮಾರಿ
Published On :

ಭಾರತೀಯ ಅಥ್ಲೀಟ್ ಸೀಮಾ ಕುಮಾರಿ ಗುರುವಾರ 2026ರ ಏಷ್ಯನ್ ಗೇಮ್ಸ್‌ನಲ್ಲಿ 10,000 ಮೀಟರ್ ಓಟದಲ್ಲಿ ಭಾರತಕ್ಕೆ ಕಂಚಿನ ಪದಕ ಗೆಲ್ಲುವ ಮೂಲಕ 16 ವರ್ಷಗಳ ಬರಗಾಲವನ್ನು ಕೊನೆಗೊಳಿಸಿದರು. ಮಹಿಳೆಯರ 10,000 ಮೀಟರ್ ಫೈನಲ್ ಮಿಜುಹೊ ಪಾರ್ಕ್ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆಯಿತು. ಅಲ್ಲಿ ಸೀಮಾ ಕುಮಾರಿ 32:50.05 ಸೆಕೆಂಡುಗಳ ಸಮಯದೊಂದಿಗೆ ಮೂರನೇ ಸ್ಥಾನ ಪಡೆದರು. ಇದಕ್ಕೂ ಮೊದಲು, 2010ರಲ್ಲಿ ಭಾರತದ ಪ್ರೀಜಾ ಶ್ರೀಧರನ್ ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದು ಕವಿತಾ ರಾವುತ್ ಬೆಳ್ಳಿ ಪದಕ ಗೆದ್ದಿದ್ದರು. ಇದೀಗ ಸೀಮಾ ಈ ಓಟದಲ್ಲಿ ಪದಕ ಗೆದ್ದ ಮೂರನೇ ಭಾರತೀಯ ಅಥ್ಲೀಟ್ ಆಗಿದ್ದಾರೆ. ಬಹ್ರೇನ್‌ನ ವಿನ್‌ಫ್ರೆಡ್ ಯಾವಿ 32:39.18 ಸೆಕೆಂಡುಗಳಲ್ಲಿ ಚಿನ್ನದ ಪದಕ ಗೆದ್ದರೇ ಜಪಾನ್‌ನ ನೊಜೊಮಿ ತನಕಾ 32:41.54 ಸೆಕೆಂಡುಗಳ ಸಮಯದೊಂದಿಗೆ ಬೆಳ್ಳಿ ಪದಕ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.