ಫುಟ್ಬಾಲ್ ಪಂದ್ಯದ ವೇಳೆ ಸ್ಪೈಡರ್ಕ್ಯಾಮ್ ಗೆ ಬೆಂಕಿ, ಸ್ವಲ್ಪದರಲ್ಲೇ ಕ್ಯಾಮೆರಾಮನ್ ಬಚಾವ್! Video
ಹಂಗೇರಿಯ ಡೆಬ್ರೆಸೆನ್ ನಗರದ Nagyerdei Stadium ನಲ್ಲಿ ಹಂಗೇರಿ ಮತ್ತು ಕಝಾಕಿಸ್ತಾನ್ ನಡುವಿನ ಫ್ರೆಂಡ್ಲಿ ಫುಟ್ಬಾಲ್ ಪಂದ್ಯದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬೆಂಕಿ ತಗುಲಿ ಸ್ಪೈಡರ್ಕ್ಯಾಮ್ ಮೈದಾನಕ್ಕೆ ಬಿದ್ದಿದೆ.

ಡೆಬ್ರೆಸನ್: ಫುಟ್ಬಾಲ್ ಪಂದ್ಯದ ವೇಳೆ ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದ್ದು, ಪಂದ್ಯದ ಲೈವ್ ಸ್ಟ್ರೀಮ್ ಮಾಡುತ್ತಿದ್ದ ಸ್ಪೈಡರ್ ಕ್ಯಾಮೆರಾವೊಂದು ಬೆಂಕಿ ತಗುಲಿ ಮೈದಾನದಲ್ಲಿ ಬಿದ್ದ ಘಟನೆ ವರದಿಯಾಗಿದೆ.
ಹಂಗೇರಿಯ ಡೆಬ್ರೆಸೆನ್ ನಗರದ Nagyerdei Stadium ನಲ್ಲಿ ಹಂಗೇರಿ ಮತ್ತು ಕಝಾಕಿಸ್ತಾನ್ ನಡುವಿನ ಫ್ರೆಂಡ್ಲಿ ಫುಟ್ಬಾಲ್ ಪಂದ್ಯದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬೆಂಕಿ ತಗುಲಿ ಸ್ಪೈಡರ್ಕ್ಯಾಮ್ (Spidercam) ಮೈದಾನಕ್ಕೆ ಬಿದ್ದಿದೆ.
ಪಂದ್ಯದ ವೇಳೆ ಮೈದಾನದ ಹಲವು ಮೀಟರ್ ಎತ್ತರದಲ್ಲಿ ತೂಗಾಡುತ್ತಿದ್ದ ಕ್ಯಾಮೆರಾದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅದರಿಂದ ಬೆಂಕಿಯ ಕಿಡಿಗಳು ಹೊರಬರುತ್ತಿರುವ ದೃಶ್ಯಗಳು ವೈರಲ್ ಆಗುತ್ತಿವೆ.
ಕ್ಯಾಮೆರಾಮನ್ ಬಚಾವ್
ಇನ್ನು ಪಂದ್ಯದ ವೇಳೆ ಟಚ್ಲೈನ್ ಸಮೀಪ ಕರ್ತವ್ಯ ನಿರ್ವಹಿಸುತ್ತಿದ್ದ ಕ್ಯಾಮೆರಾಮ್ಯಾನ್ ಮೇಲೆ ಸ್ಪೈಡರ್ ಕ್ಯಾಮ್ ಬೀಳುವ ಸಾಧ್ಯತೆ ಇತ್ತು. ಸ್ಪೈಡರ್ಕ್ಯಾಮ್ ಅವರು ನಿಂತಿದ್ದ ಸ್ಥಳದಿಂದ ಕೇವಲ ಕೆಲ ಮೀಟರ್ ದೂರದಲ್ಲಿ ನೆಲಕ್ಕೆ ಬಿದ್ದಿತು. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಲಿಲ್ಲ.
ಘಟನೆಯ ನಂತರ ಪಂದ್ಯವನ್ನು ಕೆಲಕಾಲ ಸ್ಥಗಿತಗೊಳಿಸಿ, ಮೈದಾನದಲ್ಲಿದ್ದ ಅವಶೇಷಗಳನ್ನು ತೆರವುಗೊಳಿಸಲಾಯಿತು.
ಬಳಿಕ ಪಂದ್ಯವನ್ನು ಪುನರಾರಂಭಿಸಲಾಯಿತು. ಪಂದ್ಯದಲ್ಲಿ ಹಂಗೇರಿ 3-1 ಅಂತರದಲ್ಲಿ ಜಯ ಸಾಧಿಸಿತು.
ನಾಯಕ ಡೊಮಿನಿಕ್ ಸ್ಜೋಬೋಸ್ಜ್ಲೈ, ಆಂಡ್ರಾಸ್ ಸ್ಕಾಫರ್ ಮತ್ತು ರಾಜ್ಮಂಡ್ ಟೋಥ್ ಹಂಗೇರಿಯ ಪರ ಗೋಲುಗಳನ್ನು ದಾಖಲಿಸಿದರು.
ಅಂದಹಾಗೆ ಹಂಗೇರಿ ಮತ್ತು ಕಝಾಕಿಸ್ತಾನ್ ಎರಡೂ ತಂಡಗಳು ಜೂನ್ 11ರಿಂದ ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಮೆಕ್ಸಿಕೋ ದೇಶಗಳಲ್ಲಿ ಆರಂಭವಾಗಲಿರುವ FIFA ವಿಶ್ವಕಪ್ಗೆ ಅರ್ಹತೆ ಪಡೆಯಲು ವಿಫಲವಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



