ಕ್ರೀಡೆ

FIFA World Cup 2026: ಸೋಲಿನ ಆಘಾತದೊಂದಿಗೆ ಬ್ರೆಜಿಲ್ ನಿರ್ಗಮನ; ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ ನೆಯ್ಮಾರ್ ಕಣ್ಣೀರ ವಿದಾಯ!

ಬಾರ್ಸಿಲೋನಾ ಮತ್ತು ಪ್ಯಾರಿಸ್ ಸೇಂಟ್-ಜರ್ಮೈನ್ ತಂಡದ ಮಾಜಿ ಆಟಗಾರರಾದ ನೆಯ್ಮಾರ್ ಜ್ಯೂನಿಯರ್ ನಾರ್ವೆ ವಿರುದ್ಧ ಪೆನಾಲ್ಟಿ ಗಳಿಸಿದರು. ಆದರೆ ಬ್ರೆಜಿಲ್ ಪಂದ್ಯಾವಳಿಯಿಂದ ಹೊರಗುಳಿಯುವುದನ್ನು ತಡೆಯಲು ಸಾಧ್ಯವಾಗಲಿಲ್ಲ.

FIFA World Cup 2026: ಸೋಲಿನ ಆಘಾತದೊಂದಿಗೆ ಬ್ರೆಜಿಲ್ ನಿರ್ಗಮನ; ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ  ನೆಯ್ಮಾರ್ ಕಣ್ಣೀರ ವಿದಾಯ!
ನೆಯ್ಮಾರ್ ಜ್ಯೂನಿಯರ್
Published On :

2026 ರ ಫಿಫಾ ವಿಶ್ವಕಪ್‌ನಿಂದ ತಮ್ಮ ತಂಡವನ್ನು ಹೊರಗಿಡಲು ಕಾರಣವಾದ ನಾರ್ವೆ ವಿರುದ್ಧದ ಆಘಾತಕಾರಿ ಸೋಲಿನ ನಂತರ ಬ್ರೆಜಿಲ್ ನ ಪ್ರಸಿದ್ಧ ಆಟಗಾರರಲ್ಲಿ ಒಬ್ಬರಾದ ನೆಯ್ಮಾರ್ ಜ್ಯೂನಿಯರ್ ಅಂತಾರಾಷ್ಟ್ರೀಯ ಫುಟ್‌ಬಾಲ್‌ ನಿಂದ ನಿವೃತ್ತರಾಗಲು ನಿರ್ಧರಿಸಿದ್ದಾರೆ.

ಬ್ರೆಜಿಲ್ ನ ಸಾರ್ವಕಾಲಿಕ ಪ್ರಮುಖ ಸ್ಕೋರರ್ ಆಗಿರುವ ನೆಯ್ಮಾರ್ ಜ್ಯೂನಿಯರ್ 129 ಪಂದ್ಯಗಳನ್ನಾಡಿದ್ದು, 80 ಗೋಲುಗಳನ್ನು ಗಳಿಸಿದ್ದಾರೆ. 2010 ರ ಚೊಚ್ಚಲ ಪಂದ್ಯವನ್ನಾಡಿದ ಮೆಟ್‌ಲೈಫ್ ಕ್ರೀಡಾಂಗಣವೇ ನೆಯ್ಮಾರ್ ಜ್ಯೂನಿಯರ್ ಅವರ ವಿದಾಯದ ಪಂದ್ಯವಾಗಿತ್ತು.

ಬಾರ್ಸಿಲೋನಾ ಮತ್ತು ಪ್ಯಾರಿಸ್ ಸೇಂಟ್-ಜರ್ಮೈನ್ ತಂಡದ ಮಾಜಿ ಆಟಗಾರರಾದ ನೆಯ್ಮಾರ್ ಜ್ಯೂನಿಯರ್ ನಾರ್ವೆ ವಿರುದ್ಧ ಪೆನಾಲ್ಟಿ ಗಳಿಸಿದರು. ಆದರೆ ಬ್ರೆಜಿಲ್ ಪಂದ್ಯಾವಳಿಯಿಂದ ಹೊರಗುಳಿಯುವುದನ್ನು ತಡೆಯಲು ಸಾಧ್ಯವಾಗಲಿಲ್ಲ.

ನಾರ್ವೆಯಿಂದ ಬ್ರೆಜಿಲ್ ಟೂರ್ನಿಯಿಂದ ಹೊರಬಿದ್ದ ಕಾರಣ ನೆಯ್ಮಾರ್ ಜ್ಯೂನಿಯರ್ ಹೃದಯ ಹೊಡೆದಿತ್ತು.ಇದರಿಂದಾಗಿ ನಿರಂತರವಾಗಿ ಅಳುತ್ತಿರುವ ದೃಶ್ಯಗಳು ಅಭಿಮಾನಿಗಳ ಮನಸ್ಸನ್ನು ಕಲಕುವಂತೆ ಮಾಡಿತು.

ಪಂದ್ಯದ ನಂತರದ ಮಾತನಾಡಿದ ಅವರು, ನಾನು ಇಲ್ಲಿಂದ ಪ್ರಾರಂಭಿಸಿದೆ. ಇಲ್ಲಿಯೇ ಮುಗಿದಿದೆ. ಸೆಲೆಕಾವೊ ಜೊತೆಗಿನ ನೆಯ್ಮಾರ್ ಅವಧಿ ಮುಗಿದಿದ್ದರೂ, ಸ್ಯಾಂಟೋಸ್ ಎಫ್‌ಸಿಯೊಂದಿಗೆ ತಮ್ಮ ಕ್ಲಬ್ ವೃತ್ತಿಜೀವನವನ್ನು ಮುಂದುವರೆಸುತ್ತಾರೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.