ಆಘಾತಕಾರಿ ದೃಶ್ಯ: 270 ಕೆಜಿ ತೂಕದ ಬಾರ್ ಕುತ್ತಿಗೆ ಮೇಲೆ ಬಿದ್ದು ಚಿನ್ನದ ಪದಕ ವಿಜೇತೆ 17 ವರ್ಷದ ಪವರ್ಲಿಫ್ಟರ್ ಸಾವು!
ಇಡೀ ಘಟನೆಯ ವೀಡಿಯೊ ವೈರಲ್ ಆಗಿದ್ದು, ವೀಡಿಯೊದಲ್ಲಿ ಕ್ರೀಡಾಪಟು ವೇಟ್ಲಿಫ್ಟಿಂಗ್ ಮಾಡುತ್ತಿರುವುದು ಕಾಣಬಹುದು. ಈ ವೇಳೆ ಬೋಧಕ ಕೂಡ ಹಿಂದೆ ನಿಂತಿದ್ದರು.

ಜಿಮ್ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ 270 ಕೆಜಿ ತೂಕದ ಬಾರ್ ಬಿದ್ದಿದ್ದರಿಂದ ಕುತ್ತಿಗೆ ಮುರಿದು ಬಿಕಾನೆರ್ನ ಚಿನ್ನದ ಪದಕ ವಿಜೇತ ಮಹಿಳಾ ಪವರ್ಲಿಫ್ಟರ್ ಮೃತಪಟ್ಟಿದ್ದಾರೆ. 17 ವರ್ಷದ ಯಾಷ್ಟಿಕಾ ಆಚಾರ್ಯ ಜಿಮ್ನಲ್ಲಿ ಈ ಸಾಹಸ ಮಾಡುತ್ತಿದ್ದಾಗ ಘಟನೆ ನಡೆದಿತ್ತು. ಕೂಡಲೇ ಆಕೆಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಇಡೀ ಘಟನೆಯ ವೀಡಿಯೊ ವೈರಲ್ ಆಗಿದ್ದು, ವೀಡಿಯೊದಲ್ಲಿ ಕ್ರೀಡಾಪಟು ವೇಟ್ಲಿಫ್ಟಿಂಗ್ ಮಾಡುತ್ತಿರುವುದು ಕಾಣಬಹುದು. ಈ ವೇಳೆ ಬೋಧಕ ಕೂಡ ಹಿಂದೆ ನಿಂತಿದ್ದರು. ಅಷ್ಟರಲ್ಲಿ, ಭಾರ ಎತ್ತುವಾಗ, ಅವಳು ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದ್ದು ಸ್ಕ್ವಾಟ್ ಬಾರ್ಗಳು ಆಕೆಯ ಕುತ್ತಿಗೆಯ ಮೇಲೆ ಬಿದ್ದವು. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ನಯಾ ಶಹರ್ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಜಿಮ್ನಲ್ಲಿ ಈ ಅಪಘಾತ ಸಂಭವಿಸಿದೆ.
ವರದಿಗಳ ಪ್ರಕಾರ, ಆಚಾರ್ಯ ಚೌಕ್ ನಿವಾಸಿಯಾದ ಯಸ್ತಿಕಾ, ತರಬೇತುದಾರರ ಉಪಸ್ಥಿತಿಯಲ್ಲಿ ಪ್ರತಿ ದಿನ ಅಭ್ಯಾಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ, ಆಕೆಯ ಕುತ್ತಿಗೆಯ ಮೇಲೆ ಒಂದು ಬಾರ್ ಬಿದ್ದಿತು. ಅಲ್ಲಿದ್ದ ಇತರ ಕ್ರೀಡಾಪಟುಗಳು ಆಕೆಯ ನೆರವಿಗೆ ಧಾವಿಸಿದರು. ಘಟನೆ ನಡೆದ ತಕ್ಷಣ ಯಷ್ಟಿಕಾ ಪ್ರಜ್ಞೆ ತಪ್ಪಿ ಬಿದ್ದಳು. ತರಬೇತುದಾರ ಅವರಿಗೆ ಸಿಪಿಆರ್ ಕೂಡ ನೀಡಿದರು. ಆದರೆ ಯಾವುದೇ ಚಲನೆ ಇರಲಿಲ್ಲ.
ಒಂದೇ ಸ್ಪರ್ಧೆಯಲ್ಲಿ 2 ಪದಕಗಳು
ಇತ್ತೀಚೆಗೆ ಗೋವಾದಲ್ಲಿ ನಡೆದ 33ನೇ ರಾಷ್ಟ್ರೀಯ ಬೆಂಚ್ ಪ್ರೆಸ್ ಚಾಂಪಿಯನ್ಶಿಪ್ನಲ್ಲಿ ಯಷ್ಟಿಕಾ ಚಿನ್ನ ಮತ್ತು ಕ್ಲಾಸಿಕ್ ವಿಭಾಗದಲ್ಲಿ ಬೆಳ್ಳಿ ಗೆದ್ದರು. ಯಷ್ಟಿಕಾ ಅವರ ತಂದೆ ಐಶ್ವರ್ಯ ಆಚಾರ್ಯ (50) ಗುತ್ತಿಗೆದಾರರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



