2036 Olympics: ಒಲಿಂಪಿಕ್ಸ್ ಆತಿಥ್ಯ ಕೋರಿ IOC ಗೆ ಭಾರತ ಪತ್ರ
ಅಕ್ಟೋಬರ್ 1ರಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ಭವಿಷ್ಯದ ಆತಿಥ್ಯ ಆಯೋಗಕ್ಕೆ ಔಪಚಾರಿಕವಾಗಿ ಪತ್ರ ಬರೆದಿದ್ದು, 2036 ರಲ್ಲಿ ಭಾರತದಲ್ಲಿ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವು ಮಹತ್ವದ ಹೆಜ್ಜೆಯಾಗಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ 2036ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸಲು ಆಸಕ್ತಿಯನ್ನು ವ್ಯಕ್ತಪಡಿಸಿ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಗೆ ಪತ್ರ ಬರೆದಿದೆ.
ಅಕ್ಟೋಬರ್ 1ರಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ಭವಿಷ್ಯದ ಆತಿಥ್ಯ ಆಯೋಗಕ್ಕೆ ಔಪಚಾರಿಕವಾಗಿ ಪತ್ರ ಬರೆದಿದ್ದು, 2036 ರಲ್ಲಿ ಭಾರತದಲ್ಲಿ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದೆ ಎಂದು ಮೂಲಗಳು ಹೇಳಿವೆ.
2036ರ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸಲು ಆಸಕ್ತಿ ತೋರಿದ 10 ದೇಶಗಳಲ್ಲಿ ಭಾರತವೂ ಸೇರಿದೆ. ನವೆಂಬರ್ 2022 ರಲ್ಲಿ, ಐಒಸಿ ಭಾರತ ಸೇರಿದಂತೆ ಈ ದೇಶಗಳೊಂದಿಗೆ ಚರ್ಚೆಗಳನ್ನು ಪ್ರಾರಂಭಿಸಿದೆ.
ಮೆಕ್ಸಿಕೊ (ಮೆಕ್ಸಿಕೊ ನಗರ, ಗ್ವಾಡಲಜರ-ಮಾಂಟೆರಿ-ಟಿಜುವಾನಾ), ಇಂಡೋನೇಷ್ಯಾ (ನುಸಂತರಾ), ಟರ್ಕಿ (ಇಸ್ತಾಂಬುಲ್), ಭಾರತ (ಅಹ್ಮದಾಬಾದ್), ಪೋಲೆಂಡ್ (ವಾರ್ಸಾ, ಕ್ರಾಕೊವ್), ಈಜಿಪ್ಟ್ (ಹೊಸ ಆಡಳಿತ ರಾಜಧಾನಿ) ಮತ್ತು ದಕ್ಷಿಣ ಕೊರಿಯಾ (ಸಿಯೋಲ್-ಇಂಚಿಯಾನ್) 2036 ರ ಕ್ರೀಡಾಕೂಟದ ಆತಿಥ್ಯ ವಹಿಸಲು ಆರಂಭಿಕ ಆಸಕ್ತಿಯನ್ನು ತೋರಿಸಿದ ಇತರೆ 10 ದೇಶಗಳಾಗಿವೆ.
ಒಲಿಂಪಿಕ್ಸ್ ಆತಿಥ್ಯಕ್ಕೆ ಪ್ರಧಾನಿ ಮೋದಿ ಇಂಗಿತ
ಇನ್ನು 2036ರ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸುವ ಭಾರತದ ಆಸಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅನೇಕ ಸಂದರ್ಭಗಳಲ್ಲಿ ವ್ಯಕ್ತಪಡಿಸಿದ್ದಾರೆ. ನವದೆಹಲಿಯ ತಮ್ಮ ನಿವಾಸದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, 2036 ರಲ್ಲಿ ಒಲಿಂಪಕ್ಸ್ ಕ್ರೀಡಾಕೂಟವನ್ನು ಆಯೋಜಿಸುವ ಸಿದ್ಧತೆಗಳಿಗೆ ಸಲಹೆಗಳನ್ನು ನೀಡುವಂತೆ ಅವರಿಗೆ ಕೇಳಿಕೊಂಡಿದ್ದರು.
ಕಳೆದ ವರ್ಷ ಮುಂಬೈನಲ್ಲಿ ನಡೆದ 141 ನೇ ಐಒಸಿ ಅಧಿವೇಶನದಲ್ಲಿ, ಪಿಎಂ ಮೋದಿ 2036 ರಲ್ಲಿ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸುವ ಭಾರತದ ಆಸಕ್ತಿಯನ್ನು ದೃಢಪಡಿಸಿದ್ದರು. 140 ಕೋಟಿ ಭಾರತೀಯರು ಕ್ರೀಡಾಕೂಟವನ್ನು ನಡೆಸಲು ಉತ್ಸುಕರಾಗಿದ್ದಾರೆ ಎಂದು ಆಗ ಅವರು ಹೇಳಿದ್ದರು. "ಈ ಸ್ಮರಣೀಯ ಅವಕಾಶವು ದೇಶಕ್ಕೆ ಗಣನೀಯ ಪ್ರಯೋಜನಗಳನ್ನು ಒದಗಿಸಬಹುದು. ದೇಶಾದ್ಯಂತ ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ ಮತ್ತು ಯುವ ಸಬಲೀಕರಣವನ್ನು ಈ ಕ್ರೀಡಾಕೂಟವು ಉತ್ತೇಜಿಸಬಹುದು ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದರು.
2036ರಲ್ಲಿ ಭಾರತದ ನೆಲದಲ್ಲಿ ಒಲಿಂಪಿಕ್ಸ್ ಆಯೋಜಿಸುವ ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ. ಇದು 140 ಕೋಟಿ ಭಾರತೀಯರ ಹಳೆಯ ಕನಸು ಮತ್ತು ಆಕಾಂಕ್ಷೆಯಾಗಿದೆ. ಈ ಕನಸನ್ನು ನಿಮ್ಮ ಸಹಕಾರ ಮತ್ತು ಬೆಂಬಲದೊಂದಿಗೆ ಸಾಕಾರಗೊಳಿಸಬೇಕಿದೆ. ನೀವೆಲ್ಲರೂ ಅನೇಕ ವಿಷಯಗಳನ್ನು ಗಮನಿಸಿರುತ್ತೀರಿ ಮತ್ತು ಸಾಕಷ್ಟು ವಿಷಯಗಳು ನಿಮ್ಮ ಅನುಭವಕ್ಕೆ ಬಂದಿರುತ್ತವೆ. ನೀವು ಈ ಎಲ್ಲ ಮಾಹಿತಿಗಳನ್ನು ದಾಖಲಿಸಿ, ಸರ್ಕಾರಕ್ಕೆ ನೀಡಿ ಎಂದು ಕೇಳಿಕೊಳ್ಳುತ್ತಿದ್ದೇವೆ. ಇದರಿಂದ ಯಾವುದೇ ಕುಂದು ಕೊರತೆಗಳಾಗದಂತೆ 2036 ರ ಒಲಿಂಪಿಕ್ಸ್ಗೆ ನಾವು ಸಿದ್ಧತೆ ಮಾಡಿಕೊಳ್ಳಬಹುದು" ಎಂದು ಮೋದಿ ಕ್ರೀಡಾಪಟುಗಳಿಗೆ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



