ವಿಚ್ಛೇದನದ ವದಂತಿ ನಡುವೆ ಸಾನಿಯಾ ಮಿರ್ಜಾ ಪೋಸ್ಟ್ ವೈರಲ್: 'ಯೂ ಕಾಂಟ್ ಹ್ಯಾಂಡಲ್ ದ ಟ್ರೂತ್' ಎಂದು ಬರೆದಿದ್ದೇಕೆ ಮೂಗುತಿ ಸುಂದರಿ?
ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ಥಾನದ ಕ್ರಿಕೆಟರ್ ಶೋಯೆಬ್ ಮಲಿಕ್ ಅವರು ವಿಚ್ಛೇದನ ಪಡೆಯುತ್ತಾರೆ ಎಂಬ ವಿಚಾರಗಳು ಕೂಡ ಮಾಧ್ಯಮಗಳಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದವು.

ಮುಂಬಯಿ: ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ಥಾನದ ಕ್ರಿಕೆಟರ್ ಶೋಯೆಬ್ ಮಲಿಕ್ ಅವರು ವಿಚ್ಛೇದನ ಪಡೆಯುತ್ತಾರೆ ಎಂಬ ವಿಚಾರಗಳು ಕೂಡ ಮಾಧ್ಯಮಗಳಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದವು.
ವಿಚ್ಛೇದನದ ವದಂತಿ ನಡುವೆಯೇ ಸಾನಿಯಾ ಮಿರ್ಜಾ ಹುಟ್ಟುಹಬ್ಬ ಬಂದಿತ್ತು. ಈ ವೇಳೆ ಶೋಯೆಬ್ ಅವರು ಮುದ್ದಾಗಿ ವಿಶ್ ಮಾಡಿದ್ದರು. ಇದಾದ ಬಳಿಕ ಈ ರೂಮರ್ಸ್ಗೆ ಸ್ವಲ್ಪ ಕಾಲ ತೆರೆ ಬಿದ್ದಿತ್ತು. ಈಗ ಮತ್ತೆ ಈ ದಂಪತಿ ಪ್ರತ್ಯೇಕಗೊಳ್ಳುತ್ತಿದ್ದಾರೆ ಎಂಬ ರೂಮರ್ಸ್ ಹೊರಬಿದ್ದಿದೆ.
ಇತ್ತೀಚೆಗೆ ಫೋಟೋವೊಂದನ್ನು ಪೋಸ್ಟ್ ಮಾಡಿದ ಸಾನಿಯಾ ಮಿರ್ಜಾ 2022ರ ವರ್ಷಕ್ಕೆ ಗುಡ್ ಬಾಯ್ ಹೇಳಿ ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದರು. ಈ ಪೋಸ್ಟ್ ಈಗ ವೈರಲ್ ಆಗಿದ್ದು, ಮತ್ತೆ ಡಿವೋರ್ಸ್ ಊಹಾಪೋಹಾ ಕೇಳಿ ಬಂದಿದೆ. 2022ಕ್ಕೆ ನನ್ನ ಬಳಿ ಕ್ಯಾಪ್ಷನ್ ಇಲ್ಲ, ಆದರೆ ನನ್ನ ಬಳಿ ಕೆಲವು ಮುದ್ದಾದ ಸೆಲ್ಫಿಗಳಿವೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಪಿಎಸ್: 2022 ನೀನು ನಿಜವಾಗಿಯೂ ನನ್ನ ಬುಡಕ್ಕೆ ಒದ್ದಿದ್ದೀಯಾ? ಆದರೆ ನಾನೀಗ ಕೃತಜ್ಞನಾಗಿರಬೇಕು ಎಂದು ಬರೆದು ಎಂಬ ಹ್ಯಾಷ್ ಟ್ಯಾಗ್ ಜೊತೆ ಟ್ಯಾಗ್ ಮಾಡಿದ್ದಾರೆ. ಯೂ ಕಾಂಟ್ ಹ್ಯಾಂಡಲ್ ದ ಟ್ರೂತ್ ಎಂದು ಬರೆದಿರುವುದು ಗೊಂದಲ ಮೂಡಿಸುತ್ತಿದೆ.
ಕಳೆದ ಕೆಲ ತಿಂಗಳಿನಿಂದ ಈ ಜೋಡಿ ವಿಚ್ಛೇದನಕ್ಕೊಳಗಾಗುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಸಾನಿಯಾ ಮತ್ತು ಶೋಯೆಬ್ ಈಗಾಗಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಮತ್ತು ಅವರ ವಿಚ್ಛೇದನವನ್ನು ಮಾನ್ಯಗೊಳಿಸಲು ಕಾನೂನು ಮಾರ್ಗವನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


