ಏಷ್ಯನ್ ಗೇಮ್ಸ್ 2023: ಜ್ಯೋತಿ, ಓಜಾಸ್ ಗೆ ಚಿನ್ನ, ಅಭಿಷೇಕ್ ವರ್ಮಾಗೆ ಬೆಳ್ಳಿ, ಅರ್ಚರಿಯಲ್ಲಿ ದಾಖಲೆಯ ಪದಕ!
ಚೀನಾದ ಹ್ಯಾಂಗ್ ಝೌ ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರಲ್ಲಿ ಶನಿವಾರ ಕಂಪೌಂಡ್ ಅರ್ಚರಿಯಲ್ಲಿ ಭಾರತದ ಜ್ಯೋತಿ ಸುರೇಖಾ ವೆನ್ನಮ್ ಅವರು ಹ್ಯಾಟ್ರಿಕ್ ಚಿನ್ನ ಗೆದ್ದರೆ, ಅದಿತಿ ಸ್ವಾಮಿ ಕಂಚು ಪದಕ ಗೆಲ್ಲುವುದರೊಂದಿಗೆ ದೇಶದ ಅರ್ಚರಿ ಆಟಗಾರರು ದಾಖಲೆಯ 9 ಪದಕಗಳನ್ನು ಖಚಿತಪಡಿಸಿದ್ದಾರೆ.

ಹ್ಯಾಂಗ್ಝೌ: ಚೀನಾದ ಹ್ಯಾಂಗ್ ಝೌ ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರಲ್ಲಿ ಶನಿವಾರ ಕಂಪೌಂಡ್ ಅರ್ಚರಿಯಲ್ಲಿ ಭಾರತದ ಜ್ಯೋತಿ ಸುರೇಖಾ ವೆನ್ನಮ್ ಅವರು ಹ್ಯಾಟ್ರಿಕ್ ಚಿನ್ನ ಗೆದ್ದರೆ, ಅದಿತಿ ಸ್ವಾಮಿ ಕಂಚು ಪದಕ ಗೆಲ್ಲುವುದರೊಂದಿಗೆ ದೇಶದ ಅರ್ಚರಿ ಆಟಗಾರರು ದಾಖಲೆಯ 9 ಪದಕಗಳನ್ನು ಖಚಿತಪಡಿಸಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಅದಿತಿ ಸ್ವಾಮಿ ಇಂಡೋನೇಷ್ಯಾದ ರಾತಿಹ್ ಝಿಲಿಜಾಟಿ ಫಡ್ಲಿ ವಿರುದ್ಧ ಕಂಚಿನ ಪದಕ ಗೆಲುವುದರೊಂದಿಗೆ ಅರ್ಚರಿಯಲ್ಲಿ ದೇಶಕ್ಕೆ ದಾಖಲೆಯ 9 ನೇ ಪದಕ ತಂದುಕೊಟ್ಟರು.
ಎರಡು ತಿಂಗಳ ಹಿಂದೆ ಬರ್ಲಿನ್ನಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ 17 ವರ್ಷದ ಭಾರತೀಯ ಆಟಗಾರ್ತಿ 146-140 ರಲ್ಲಿ ಪಂದ್ಯ ಗೆದ್ದರು. ನಂತರ ಮಿಶ್ರ ಜೋಡಿಯಲ್ಲಿ ಈಗಾಗಲೇ ಚಿನ್ನ ಗೆದ್ದಿದ್ದ ಜ್ಯೋತಿ, ತನ್ನ ದಕ್ಷಿಣ ಕೊರಿಯಾದ ಅಸಾಧಾರಣ ಎದುರಾಳಿ ಸೊ ಚೆವೊನ್ರನ್ನು 149-145 ರಿಂದ ಸೋಲಿಸುವುದರೊಂದಿಗೆ ಮೂರು ಬಾರಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು.
ಪಂದ್ಯ ಗೆದ್ದ ನಂತರ ಮಾತನಾಡಿದ ಜ್ಯೋತಿ, ಭಾವನೆ ಹಂಚಿಕೊಳ್ಳಲು ಪದಗಳೇ ಸಿಗುತ್ತಿಲ್ಲ. ಇದನ್ನು ಯೋಚಿಸಲು ನನಗೆ ಸ್ವಲ್ಪ ಸಮಯ ಬೇಕು ಎಂದರು. ಮತ್ತೊಂದೆಡೆ ಪುರುಷರ ಕಾಂಪೌಂಡ್ ವೈಯಕ್ತಿಕ ಫೈನಲ್ನಲ್ಲಿ ಅಭಿಷೇಕ್ ವರ್ಮಾ ಅವರು ಚಿನ್ನ ಗೆದ್ದರೆ, ಅಭಿಷೇಕ್ ವರ್ಮಾ ಬೆಳ್ಳಿ ಪದಕ ಜಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


