ಏಷ್ಯನ್ ಗೇಮ್ಸ್ 2023

ಏಷ್ಯನ್ ಗೇಮ್ಸ್ 2023: ಜ್ಯೋತಿ, ಓಜಾಸ್ ಗೆ ಚಿನ್ನ, ಅಭಿಷೇಕ್ ವರ್ಮಾಗೆ ಬೆಳ್ಳಿ, ಅರ್ಚರಿಯಲ್ಲಿ ದಾಖಲೆಯ ಪದಕ!
ಚೀನಾದ ಹ್ಯಾಂಗ್ ಝೌ ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರಲ್ಲಿ ಶನಿವಾರ ಕಂಪೌಂಡ್ ಅರ್ಚರಿಯಲ್ಲಿ ಭಾರತದ ಜ್ಯೋತಿ ಸುರೇಖಾ ವೆನ್ನಮ್ ಅವರು ಹ್ಯಾಟ್ರಿಕ್ ಚಿನ್ನ ಗೆದ್ದರೆ, ಅದಿತಿ ಸ್ವಾಮಿ ಕಂಚು ಪದಕ ಗೆಲ್ಲುವುದರೊಂದಿಗೆ ದೇಶದ ಅರ್ಚರಿ ಆಟಗಾರರು ದಾಖಲೆಯ 9 ಪದಕಗಳನ್ನು ಖಚಿತಪಡಿಸಿದ್ದಾರೆ.

ಏಷ್ಯನ್ ಗೇಮ್ಸ್ 2023: ಮುಂದುವರೆದ ಪದಕ ಬೇಟೆ, ಶತಕದ ಗಡಿಯಲ್ಲಿ ಭಾರತ
2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು 72 ವರ್ಷಗಳ ಬಳಿಕ ಮತ್ತೆ ಪದಕ ಗಳಿಕೆಯಲ್ಲಿ ಶತಕ ಸಿಡಿಸುವ ಹಾದಿಯಲ್ಲಿದೆ.

ಏಷ್ಯನ್ ಗೇಮ್ಸ್ 2023: ಇಂದು ಮೂರು ಚಿನ್ನ, ಒಟ್ಟಾರೆ ದಾಖಲೆಯ 86 ಪದಕ ಭಾರತದ ಮುಡಿಗೆ!
2023ರ ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದು ಪದಕ ಬೇಟೆ ಮುಂದುವರೆದಿದೆ. ಇಂದು ಭಾರತಕ್ಕೆ ಮೂರು ಚಿನ್ನದ ಪದಕ ಬಂದಿದೆ.

ಏಷ್ಯನ್ ಗೇಮ್ಸ್ 2023: ಸ್ಕ್ವಾಷ್ ಮಿಕ್ಸೆಡ್ ಡಬಲ್ಸ್ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ದೀಪಿಕಾ-ಹರಿಂದರ್!
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕದ ಬೇಟೆ ಗುರುವಾರ ಕೂಡ ಮುಂದುವರಿದಿದೆ. 12 ದಿನವಾದ ಇಂದು ಭಾರತ ಎರಡು ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ.

ಏಷ್ಯನ್ ಗೇಮ್ಸ್ 2023: ಚಿನ್ನ ಗೆದ್ದ ನೀರಜ್ ಚೋಪ್ರಾ, ಪುರುಷರ ರಿಲೇ ತಂಡ; ಹಾಕಿ ಫೈನಲ್ ಗೆ ಭಾರತ ಪುರುಷರ ತಂಡ ಲಗ್ಗೆ!
2023ರ ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದು ಪದಕ ಬೇಟೆ ಮುಂದುವರೆದಿದೆ. ಜಾವೆಲಿನ್ ಥ್ರೋ ಪುರುಷರ ವಿಭಾಗದಲ್ಲಿ ಭಾರತಕ್ಕೆ ಎರಡು ಪದಕ ಸಿಕ್ಕಿದೆ. ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದರೆ ಕಿಶೋರ್ ಜೆನಾ ಬೆಳ್ಳಿ ಪದಕ ಗೆದ್ದಿದ್ದಾರೆ.

ಏಷ್ಯನ್ ಗೇಮ್ಸ್: ಮುಂದುವರೆದ ಭಾರತದ ಪದಕ ಬೇಟೆ; ಇಂದು 2 ಚಿನ್ನ, 2 ಬೆಳ್ಳಿ, 2 ಕಂಚು; 69ಕ್ಕೇರಿದ ಪದಕ ಸಂಖ್ಯೆ!
2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್ ಪಾರುಲ್ ಚೌಧರಿ ಹಾಗೂ ಜಾವೆಲಿನ್ ಥ್ರೋನಲ್ಲಿ ಅನ್ನು ರಾಣಿ ಚಿನ್ನದ ಪದಕ ಗೆದ್ದಿದ್ದಾರೆ.

ಏಷ್ಯನ್ ಗೇಮ್ಸ್ 2023: ಟ್ರ್ಯಾಪ್ ಶೂಟಿಂಗ್ ಪುರುಷರ ವಿಭಾಗದಲ್ಲಿ ಭಾರತದ ತಂಡಕ್ಕೆ ಚಿನ್ನದ ಪದಕ!
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಅದ್ಭುತ ಪ್ರದರ್ಶನ ಭಾನುವಾರವೂ ಮುಂದುವರಿದಿದೆ. ಭಾನುವಾರ ನಡೆದ 50 ಮೀಟರ್ ಟ್ರ್ಯಾಪ್ ಶೂಟಿಂಗ್ ಪುರುಷರ ವಿಭಾಗದಲ್ಲಿ ಭಾರತದ ತಂಡ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.

ಏಷ್ಯನ್ ಗೇಮ್ಸ್ 2023 ಸೆಮೀಸ್ ಗೆ ಭಾರತ ಲಗ್ಗೆ: ನೇಪಾಳ ವಿರುದ್ಧ ಭರ್ಜರಿ ಶತಕ; ಗಿಲ್ ದಾಖಲೆ ಮುರಿದ ಜೈಸ್ವಾಲ್
ಏಷ್ಯನ್ ಗೇಮ್ಸ್ 2023 ಕ್ರೀಡಾಕೂಟದ ಪುರುಷರ ಕ್ರಿಕೆಟ್ ವಿಭಾಗದಲ್ಲಿ ನೇಪಾಳ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿರುವ ಭಾರತ ತಂಡದ ಬ್ಯಾಟರ್ ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿದ್ದಾರೆ.

ಏಷ್ಯನ್ ಗೇಮ್ಸ್ 2023: ತಜಿಂದರ್ ಪಾಲ್ ಸಿಂಗ್ ತೂರ್, ಅವಿನಾಶ್ ಸೇಬಲ್ ಚಿನ್ನ ಸಾಧನೆ
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತದ ಪದಕಗಳ ಭೇಟೆ ಮುಂದುವರೆದಿದ್ದು, ಷಾಟ್ ಪಟ್ ಪಟು ತಜಿಂದರ್ ಪಾಲ್ ಸಿಂಗ್ ತೂರ್ ಹಾಗೂ ಪುರುಷರ 3,000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಅವಿನಾಶ್ ಸೇಬಲ್ ಚಿನ್ನದ ಪದಕ ಗೆದ್ದಿದ್ದಾರೆ.

