ಟೆನ್ನಿಸ್ ನಿಂದ ನಾನು ಇನ್ನೂ ನಿವೃತ್ತಿಯಾಗಿಲ್ಲ, ಮರಳುವ ಸಾಧ್ಯತೆಗಳು ಹೆಚ್ಚಿವೆ: ಸೆರೆನಾ ವಿಲಿಯಮ್ಸ್
ನಾನು ಟೆನಿಸ್‌ನಿಂದ ನಿವೃತ್ತಿಯಾಗಿಲ್ಲ ಎನ್ನುವ ಮೂಲಕ ಅಚ್ಚರಿಸಿ ಮೂಡಿಸಿರುವ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್, ಮತ್ತೆ ಕ್ರೀಡೆಗೆ ಮರಳುವ ಸಾಧ್ಯತೆ ಇದೆ ಎಂಬ ಸೂಚನೆ ನೀಡಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋ: ನಾನು ಟೆನಿಸ್‌ನಿಂದ ನಿವೃತ್ತಿಯಾಗಿಲ್ಲ ಎನ್ನುವ ಮೂಲಕ ಅಚ್ಚರಿಸಿ ಮೂಡಿಸಿರುವ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್, ಮತ್ತೆ ಕ್ರೀಡೆಗೆ ಮರಳುವ ಸಾಧ್ಯತೆ ಇದೆ ಎಂಬ ಸೂಚನೆ ನೀಡಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಸಮ್ಮೇಳನವೊಂದರಲ್ಲಿ ತಮ್ಮ ಸಂಸ್ಥೆ ‘ಸೆರೆನಾ ವೆಂಚರ್ಸ್’ ಪ್ರಚಾರ ಮಾಡುವ ವೇಳೆ ಮಾತನಾಡಿದ ಸೆರೆನಾ, ಟನಾನು ನಿವೃತ್ತಿಯಾಗಿಲ್ಲ’ ಎಂದಿದ್ದಾರೆ. ವಾಪಸ್ ಹಿಂದಿರುಗುವ ಸಾಧ್ಯತೆಗಳು ತುಂಬಾ ಹೆಚ್ಚಿವೆ ಎಂದಿದ್ದಾರೆ
ಟೆನಿಸ್‌ನಿಂದ ದೂರವಾಗುತ್ತಿರುವುದಾಗಿ 41 ವರ್ಷದ ವಿಲಿಯಮ್ಸ್ ಅವರು ಆಗಸ್ಟ್‌ನಲ್ಲಿ ಹೇಳಿದ್ದರು. ಮೂರನೇ ಸುತ್ತಿನಲ್ಲಿ ಸೋತ ನಂತರ ಅವರಿಗೆ ಭಾವನಾತ್ಮಕ ವಿದಾಯವನ್ನು ನೀಡಲಾಗಿತ್ತು. ಕಳೆದ ತಿಂಗಳು ನಡೆದಿದ್ದ ಅಮೆರಿಕನ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ನಂತರ ಸೆರೆನಾ ಕ್ರೀಡೆಗೆ ವಿದಾಯ ಘೋಷಣೆ ಮಾಡಿದ್ದರು.
ಇದು ನನ್ನ ಉಳಿದ ಜೀವನದ ಆರಂಭಿಕ ದಿನದಂತೆ ಭಾಸವಾಗುತ್ತಿದೆ. ನಾನು ಅದನ್ನು ಆನಂದಿಸುತ್ತಿದ್ದೇನೆ. ಆದರೆ ನಾನು ಈಗಲೂ ಆ ದಿನಗಳಂಥ ಸಮತೋಲನ ಕಾಪಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಸೆರೆನಾ ಹೇಳಿದ್ದಾರೆ.
ನಿವೃತ್ತಿ ಎಂಬ ಪದವನ್ನು ನಾನು ಎಂದಿಗೂ ಇಷ್ಟಪಟ್ಟಿಲ್ಲ. ಇದು ನನಗೆ ಆಧುನಿಕ ಪದದಂತೆ ಭಾಸವಾಗುವುದಿಲ್ಲ. ನಾನು ಇದನ್ನು ಪರಿವರ್ತನೆ ಎಂದು ಭಾವಿಸುತ್ತೇನೆ, ಆದರೆ ನಾನು ಆ ಪದವನ್ನು ಹೇಗೆ ಬಳಸುತ್ತೇನೆ ಎಂಬುದರ ಕುರಿತು ಸೂಕ್ಷ್ಮವಾಗಿರಲು ಬಯಸುತ್ತೇನೆ, ಅಂದರೆ ಬಹಳ ನಿರ್ದಿಷ್ಟವಾದ ವಿಷಯ ಮತ್ತು ಜನರ ಸಮುದಾಯಕ್ಕೆ ಮುಖ್ಯವಾಗಿದೆ" ಎಂದು ಸೆರೆನಾ ವೋಗ್ ಮ್ಯಾಗಜೀನ್‌ಗೆ ಬರೆದ ಲೇಖನದಲ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


