ಕ್ರೀಡೆ

3000 ಮೀಟರ್‌ ಓಟದಲ್ಲಿ ಹೊಸ ರಾಷ್ಟ್ರೀಯ ದಾಖಲೆ ಸೃಷ್ಟಿಸಿದ ಪಾರುಲ್ ಚೌಧರಿ

ಭಾರತದ ಮಹಿಳಾ ಟ್ರ್ಯಾಕ್ ಅಥ್ಲೀಟ್ ಪಾರುಲ್ ಚೌಧರಿ ಅವರು ಭಾನುವಾರ ಯುಎ ಸನ್‌ಸೆಟ್ ಟೂರ್‌ನ 3000 ಮೀಟರ್ ಸ್ಪರ್ಧೆಯಲ್ಲಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.

3000 ಮೀಟರ್‌ ಓಟದಲ್ಲಿ ಹೊಸ ರಾಷ್ಟ್ರೀಯ ದಾಖಲೆ ಸೃಷ್ಟಿಸಿದ ಪಾರುಲ್ ಚೌಧರಿ
ಪಾರುಲ್ ಚೌಧರಿ
Published On :

ಲಾಸ್ ಏಂಜಲೀಸ್: ಭಾರತದ ಮಹಿಳಾ ಟ್ರ್ಯಾಕ್ ಅಥ್ಲೀಟ್ ಪಾರುಲ್ ಚೌಧರಿ ಅವರು ಭಾನುವಾರ ಯುಎ ಸನ್‌ಸೆಟ್ ಟೂರ್‌ನ 3000 ಮೀಟರ್ ಸ್ಪರ್ಧೆಯಲ್ಲಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.

27 ವರ್ಷದ ಚೌಧರಿ ಅವರು ಮಹಿಳೆಯರ 3000 ಮೀ ಓಟವನ್ನು 8:57.19 ರಲ್ಲಿ ಪೂರ್ಣಗೊಳಿಸುವ ಮೂಲಕ ಸೂರಿಯಾ ಲೋಗನಾಥನ್ ಅವರ ಆರು ವರ್ಷಗಳ ಹಳೆಯ 9:04.5 ರ ದಾಖಲೆಯನ್ನು ಮುರಿದರು.

ಓಟದ ಆರಂಭಿಕ ಹಂತದಲ್ಲಿ ಅವರು ಐದನೇ ಸ್ಥಾನದಲ್ಲಿದ್ದರು. ಆದರೆ ಕೊನೆಯ ಎರಡು ಲ್ಯಾಪ್‌ಗಳಲ್ಲಿ ಅವರು ತಮ್ಮ ವೇಗವನ್ನು ಹೆಚ್ಚಿಸಿಕೊಂಡು ಮೂರನೇ ಸ್ಥಾನ ಆಕ್ರಮಿಸಿದರು.

ಜುಲೈ 15 ರಿಂದ ಚೌಧರಿ ಅವರು ಯುಎಸ್ಎನ ಒರೆಗಾನ್‌ನಲ್ಲಿ 2022 ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 3000m ಸ್ಟೀಪಲ್‌ಚೇಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.