ಕ್ರೀಡೆ

BWF ಶ್ರೇಯಾಂಕ: ವೃತ್ತಿಜೀವನದ ಅತ್ಯುತ್ತಮ 8ನೇ ಶ್ರೇಯಾಂಕಕ್ಕೆ ತಲುಪಿದ ಭಾರತದ ಪ್ರಣಯ್

ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್(BWF) ವಿಶ್ವ ಶ್ರೇಯಾಂಕದಲ್ಲಿ ಭಾರತದ ಸ್ಟಾರ್ ಷಟ್ಲರ್ ಎಚ್‌ಎಸ್ ಪ್ರಣಯ್ ಅವರು ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕದಲ್ಲಿ ಎಂಟನೇ ಸ್ಥಾನಕ್ಕೆ ಏರಿದ್ದಾರೆ.

BWF ಶ್ರೇಯಾಂಕ: ವೃತ್ತಿಜೀವನದ ಅತ್ಯುತ್ತಮ 8ನೇ ಶ್ರೇಯಾಂಕಕ್ಕೆ ತಲುಪಿದ ಭಾರತದ ಪ್ರಣಯ್
ಎಚ್ ಎಸ್ ಪ್ರಣಯ್
Published On :

ನವದೆಹಲಿ: ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್(BWF) ವಿಶ್ವ ಶ್ರೇಯಾಂಕದಲ್ಲಿ ಭಾರತದ ಸ್ಟಾರ್ ಷಟ್ಲರ್ ಎಚ್‌ಎಸ್ ಪ್ರಣಯ್ ಅವರು ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕದಲ್ಲಿ ಎಂಟನೇ ಸ್ಥಾನಕ್ಕೆ ಏರಿದ್ದಾರೆ. 

30 ವರ್ಷದ ಕೇರಳದ ಆಟಗಾರ ಈ ವರ್ಷ ಅಮೋಘ ಫಾರ್ಮ್‌ನಲ್ಲಿದ್ದಾರೆ. ಪ್ರಣಯ್ ಈ ವರ್ಷ ಸ್ಮರಣೀಯ ಪ್ರದರ್ಶನ ನೀಡಿದರು. ಅವರು ಏಳು ಪಂದ್ಯಾವಳಿಗಳಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದರು. ಸ್ವಿಸ್ ಓಪನ್‌ನಲ್ಲಿ ರನ್ನರ್‌ಅಪ್‌ ಸ್ಥಾನವನ್ನು ಗಳಿಸುವ ಸಂದರ್ಭದಲ್ಲಿ ಎರಡರಲ್ಲಿ ಸೆಮಿಫೈನಲ್‌ಗೆ ತಲುಪಿದರು.

ಈ ಹಿಂದೆ 2018ರಲ್ಲಿ ಎಂಟನೇ ಶ್ರೇಯಾಂಕವನ್ನು ಸಾಧಿಸಿದ್ದರು. ಆದರೆ ನಂತರ ಅವರು 2019ರಲ್ಲಿ 34ನೇ ಸ್ಥಾನಕ್ಕೆ ಕುಸಿದರು. ಪ್ರಯಣ್ ವೈಯಕ್ತಿಕವಾಗಿ ಯಾವುದೇ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿಲ್ಲ. ಆದರೆ ಭಾರತದ ಥಾಮಸ್ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇತರ ಭಾರತೀಯ ಪುರುಷರ ಆಟಗಾರರ ಪೈಕಿ ಲಕ್ಷ್ಯ ಸೇನ್ ಏಳನೇ ಸ್ಥಾನದಲ್ಲಿ ಉಳಿದಿದ್ದರೆ ಕಿಡಂಬಿ ಶ್ರೀಕಾಂತ್ 12ನೇ ಸ್ಥಾನಕ್ಕೆ ಕುಸಿದಿದ್ದಾರೆ. ಪುರುಷರ ಡಬಲ್ಸ್ ಶ್ರೇಯಾಂಕದಲ್ಲಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಸೇನ್ ಐದನೇ ಸ್ಥಾನದಲ್ಲೇ ಉಳಿದಿದ್ದಾರೆ. ವೇಗವಾಗಿ ಬೆಳೆಯುತ್ತಿರುವ ಎಂಆರ್ ಅರ್ಜುನ್ ಮತ್ತು ಧ್ರುವ ಕಪಿಲ ಜೋಡಿ ಮೂರು ಸ್ಥಾನ ಮೇಲೇರಿ ನಂ.21ಕ್ಕೆ ತಲುಪಿದ್ದಾರೆ. 

ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ಗೆದ್ದ ನಂತರ ಗಾಯದ ಸಮಸ್ಯೆಯಿಂದ ಯಾವುದೇ ಟೂರ್ನಿಯಿಂದ ಹೊರಗುಳಿದಿರುವ ಪಿವಿ ಸಿಂಧು, ಮಹಿಳೆಯರ ಸಿಂಗಲ್ಸ್ ಶ್ರೇಯಾಂಕದಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಮಹಿಳೆಯರ ಡಬಲ್ಸ್ ಶ್ರೇಯಾಂಕದಲ್ಲಿ ಗಾಯತ್ರಿ ಗೋಪಿಚಂದ್ ಮತ್ತು ತ್ರಿಸಾ ಜಾಲಿ ಜೋಡಿ ಒಂದು ಸ್ಥಾನ ಏರಿಕೆ ಕಂಡು 17ನೇ ಸ್ಥಾನಕ್ಕೆ ತಲುಪಿದೆ. ಮಿಶ್ರ ಡಬಲ್ಸ್‌ನಲ್ಲಿ ಇಶಾನ್ ಭಟ್ನಾಗರ್ ಮತ್ತು ತನಿಶಾ ಕ್ರಾಸ್ಟೊ ಎರಡು ಸ್ಥಾನ ಮೇಲೇರಿ 18ನೇ ಸ್ಥಾನಕ್ಕೆ ತಲುಪಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.