ಕ್ರೀಡೆ

ಫಿಫಾ ವಿಶ್ವಕಪ್: ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು; ನೆದರ್ಲ್ಯಾಂಡ್ ನ್ನು ಮಣಿಸಿದ ಅರ್ಜೆಂಟೀನಾ ಸೆಮೀಸ್ ಗೆ

ಫಿಫಾ ವಿಶ್ವಕಪ್-2022 ರಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅರ್ಜೆಂಟಿನಾ ನೆದರ್ಲ್ಯಾಂಡ್ ತಂಡವನ್ನು ಮಣಿಸಿ ಸೆಮಿಫೈನಲ್ಸ್ ಗೆ ತಲುಪಿದೆ.

ಫಿಫಾ ವಿಶ್ವಕಪ್: ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು; ನೆದರ್ಲ್ಯಾಂಡ್ ನ್ನು ಮಣಿಸಿದ ಅರ್ಜೆಂಟೀನಾ ಸೆಮೀಸ್ ಗೆ
ಅರ್ಜೆಂಟೀನಾ ಸೆಮೀಸ್ ಗೆ
Published On :

ದೊಹಾ: ಫಿಫಾ ವಿಶ್ವಕಪ್-2022 ರಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅರ್ಜೆಂಟಿನಾ ನೆದರ್ಲ್ಯಾಂಡ್ ತಂಡವನ್ನು ಮಣಿಸಿ ಸೆಮಿಫೈನಲ್ಸ್ ಗೆ ತಲುಪಿದೆ.

ಅಲ್ ದಯೆನ್‌ ನ ಲೌಸನ್ನೆ ಸ್ಟೇಡಿಯಂನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಕೋರ್ 2-2 ಆಗಿ ಸಮಬಲವಾಗಿತ್ತು. ಆದರೆ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು ಸಾಧಿಸಿ, ನೆದರ್ಲ್ಯಾಂಡ್ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ. 

ಅರ್ಜೆಂಟೀನಾದ ಗೋಲ್ ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಶೂಟ್ ಔಟ್ ನಲ್ಲಿ ಹಿರೋ ಆದರು.  ಪಂದ್ಯದಲ್ಲಿ ಅರ್ಜೆಂಟೀನಾ 80 ನಿಮಿಷಗಳವರೆಗೆ 2-0 ಮುನ್ನಡೆ ಸಾಧಿಸಿತ್ತು. ಆದರೆ ನೆದರ್ಲ್ಯಾಂಡ್ಸ್ ನ ವೂಟ್ ವೆಗೋರ್ಸ್ಟ್ ಸತತ 2 ಗೋಲುಗಳನ್ನು ಗಳಿಸಿ ಸ್ಕೋರ್ ಅನ್ನು ಸಮಗೊಳಿಸಿದರು. 83ನೇ ನಿಮಿಷದಲ್ಲಿ ಮೊದಲ ಗೋಲು ಮತ್ತು ನಂತರ ಹೆಚ್ಚುವರಿ ಸಮಯದಲ್ಲಿ (90+11) ಸ್ಕೋರ್ ನ್ನು 2-2 ಮಾಡಿದರು.

ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ 4-3 ಅಂತರದಲ್ಲಿ ಜಯ ಸಾಧಿಸಿ ಸೆಮಿಫೈನಲ್ಸ್ ಪ್ರವೇಶಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.