ಕ್ರೀಡೆ

ಸಾನಿಯಾ ಮಿರ್ಜಾ 'ಡ್ಯಾನ್ಸ್ ವಿಡಿಯೋ' ಇಂಟರ್ ನೆಟ್ ನಲ್ಲಿ ಭಾರೀ ವೈರಲ್

ಆರು ಬಾರಿ ಗ್ರಾಂಡ್ ಸ್ಲಾಮ್ ಚಾಂಪಿಯನ್ ಸಾನಿಯಾ ಮಿರ್ಜಾ 'ಡ್ಯಾನ್ಸ್ ವಿಡಿಯೋ' ಇಂಟರ್ ನೆಟ್ ನಲ್ಲಿ ಸಖತ್ ವೈರಲ್ ಆಗಿದ್ದು, ವಿಶ್ವದಾದ್ಯಂತ ಸಾವಿರಾರು ಅಭಿಮಾನಿಗಳು ಇಷ್ಟಪಟಿದ್ದಾರೆ.

ಸಾನಿಯಾ ಮಿರ್ಜಾ 'ಡ್ಯಾನ್ಸ್ ವಿಡಿಯೋ' ಇಂಟರ್ ನೆಟ್ ನಲ್ಲಿ ಭಾರೀ ವೈರಲ್
ಸಾನಿಯಾ ಮಿರ್ಜಾ
Published On :

ಲಂಡನ್: ಆರು ಬಾರಿ ಗ್ರಾಂಡ್ ಸ್ಲಾಮ್ ಚಾಂಪಿಯನ್ ಸಾನಿಯಾ ಮಿರ್ಜಾ  'ಡ್ಯಾನ್ಸ್ ವಿಡಿಯೋ' ಇಂಟರ್ ನೆಟ್ ನಲ್ಲಿ ಸಖತ್ ವೈರಲ್ ಆಗಿದ್ದು, ವಿಶ್ವದಾದ್ಯಂತ ಸಾವಿರಾರು ಅಭಿಮಾನಿಗಳು ಇಷ್ಟಪಟಿದ್ದಾರೆ.

ಅಮೆರಿಕದ ರಾಪರ್ ಡೊಜಾ ಕ್ಯಾಟ್ ಅವರ 'ಕಿಸ್ ಮಿ ಮೊರ್ ' ಗೀತೆಗೆ ಸಾನಿಯಾ ಮಿರ್ಜಾ ಸಖತ್ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಅವರು ಹಂಚಿಕೊಂಡಿದ್ದಾರೆ.

ನನ್ನ ಹೆಸರಿನಲ್ಲಿರುವ 'ಎ' ನನ್ನ ಜೀವನದಲ್ಲಿ ತುಂಬಾ ಪ್ರಮುಖವಾದದ್ದು ಎಂದು ಬರೆದು ಡ್ಯಾನ್ಸ್ ವಿಡಿಯೋವನ್ನು ಫೋಸ್ಟ್ ಮಾಡಿದ್ದಾರೆ. ನಂತರ ಆಕೆಯ ಹೆಸರಿನಲ್ಲಿರುವ ಎ ಆಕ್ರಮಣಶೀಲತೆ, ಮಹತ್ವಾಕಾಂಕ್ಷೆ, ಸಾಧನೆ ಮತ್ತು ವಾತ್ಸಲ್ಯದ ಮೇಲೆ ನಿಂತಿದೆ ಎಂಬುದನ್ನು ವಿವರಿಸಿದ್ದಾರೆ. ಈ ವಿಡಿಯೋಗೆ ಇದೀಗ 135,937  ಮಂದಿ ಲೈಕ್ ಮಾಡಿದ್ದು, 695 ಕಾಮೆಂಟ್ ಬಂದಿವೆ. 

ಖ್ಯಾತ ಸಂಗೀತಗಾರ ಎಆರ್ ರೆಹಮಾನ್, ಗಾಯಕಿ ಅನನ್ಯ ಬಿರ್ಲಾ ಸೇರಿದಂತೆ ಹಲವು ಮಂದಿ ಈ ವಿಡಿಯೋ ಲೈಕ್ ಮಾಡಿದ್ದು, ಸಾನಿಯಾ ಮಿರ್ಜಾ ಅವರಿಗೆ ಶುಭ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.