ಫುಟ್ಬಾಲ್: ಛೆಟ್ರಿ ಡಬಲ್ ಸ್ಟ್ರೈಕ್; ಮಾಲ್ಡೀವ್ಸ್ ಮಣಿಸಿ ಎಸ್ಎಎಫ್ಎಫ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ಪ್ರವೇಶ
ನಾಯಕ ಸುನಿಲ್ ಛೆಟ್ರಿ ಬಾರಿಸಿದ ಎರಡು ಗೋಲುಗಳ ಸಹಾಯದೊಂದಿಗೆ ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ಮಾಲ್ಡೀವ್ಸ್ ವಿರುದ್ಧ ಭಾರತ 3-1 ಗೆಲುವು ಸಾಧಿಸಿದ್ದು ಎಸ್ಎಎಫ್ಎಫ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಿತು.

ನಾಯಕ ಸುನಿಲ್ ಛೆಟ್ರಿ ಬಾರಿಸಿದ ಎರಡು ಗೋಲುಗಳ ಸಹಾಯದೊಂದಿಗೆ ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ಮಾಲ್ಡೀವ್ಸ್ ವಿರುದ್ಧ ಭಾರತ 3-1 ಗೆಲುವು ಸಾಧಿಸಿದ್ದು ಎಸ್ಎಎಫ್ಎಫ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಿತು.
ಭಾರತ ಗೆಲ್ಲಲೇಬೇಕಾದ ಪಂದ್ಯದಲ್ಲಿ ಮನ್ವೀರ್ ಸಿಂಗ್ 33ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಭಾರತಕ್ಕೆ ಮುನ್ನಡೆ ನೀಡಿದರು. ನಂತರ 62 ಮತ್ತು 71ನೇ ನಿಮಿಷದಲ್ಲಿ ಛೆಟ್ರಿ ಎರಡು ಗೋಲು ಬಾರಿಸಿದರು. ಇದು ಮಾಲ್ಡೀವ್ಸ್ ವಿರುದ್ಧ ಭಾರತದ ಗೆಲುವಿಗೆ ಕಾರಣವಾಯಿತು.
ತನ್ನ 124ನೇ ಪಂದ್ಯವನ್ನು ಆಡುತ್ತಿರುವ 37 ವರ್ಷದ ಛೆಟ್ರಿ ಪೋರ್ಚುಗಲ್ ಸೂಪರ್ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ(115)ರ ನಂತರ ಸಕ್ರಿಯ ಆಟಗಾರರಲ್ಲಿ ಎರಡನೇ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲು ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ಎಂಟು ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಏಳು ಬಾರಿಯ ಚಾಂಪಿಯನ್ ಭಾರತ, ಅಕ್ಟೋಬರ್ 16ರಂದು ನಡೆಯುವ ಫೈನಲ್‌ನಲ್ಲಿ ನೇಪಾಳವನ್ನು ಎದುರಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


