ಫ್ರೆಂಚ್ ಓಪನ್ ಫೈನಲ್: 19 ನೇ ಗ್ರ್ಯಾನ್ ಸ್ಲಾಮ್ ಗೆದ್ದ ನೋವಾಕ್ ಜೊಕೋವಿಚ್
ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಫೈನಲ್ಸ್ ನಲ್ಲಿ ಅಗ್ರ ಶ್ರೇಯಾಂಕ ಆಟಗಾರ ನೋವಾಕ್ ಜೊಕೋವಿಚ್ ತಮ್ಮ ಎದುರಾಳಿ ಸ್ಟೆಫಾನೋಸ್ ಸಿಟ್ಸಿಪಾಸ್ ಅವರನ್ನು ಮಣಿಸಿದ್ದಾರೆ.

ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಫೈನಲ್ಸ್ ನಲ್ಲಿ ಅಗ್ರ ಶ್ರೇಯಾಂಕ ಆಟಗಾರ ನೋವಾಕ್ ಜೊಕೋವಿಚ್ ತಮ್ಮ ಎದುರಾಳಿ ಸ್ಟೆಫಾನೋಸ್ ಸಿಸಿಪಾಸ್ ಅವರನ್ನು ಮಣಿಸಿದ್ದಾರೆ.
ಭಾನುವಾರ (ಜೂ.13) ರಂದು ನಡೆದ ಪಂದ್ಯದಲ್ಲಿ 6-7 (6), 2-6, 6-3, 6-2, 6-4 ಸೆಟ್ ಗಳಿಂದ ಸಿಸಿಪಾಸ್ ಅವರ ವಿರುದ್ಧ ಗೆದ್ದಿರುವ ನೋವಾಕ್ ಜೊಕೋವಿಚ್ 19 ನೇ ಗ್ರ್ಯಾನ್ ಸ್ಲಾಮ್ ಗೆದ್ದಿದ್ದಾರೆ.
ಈ ಗೆಲುವಿನ ಮೂಲಕ ನೋವಾಕ್ ಜೊಕೋವಿಚ್ ದಾಖಲೆ ನಿರ್ಮಿಸಿದ್ದು, ರಫೆಲ್ ನಾಡಲ್ ಹಾಗೂ ರೋಜರ್ ಫೆಡರರ್ ಅವರು ಹಂಚಿಕೊಂಡಿರುವ 20 ನೇ ಗ್ರ್ಯಾನ್ ಸ್ಲಾಮ್ ಗೆದ್ದಿರುವ ಪುರುಷರ ವಿಭಾಗದ ದಾಖಲೆಯನ್ನು ಮುರಿಯುವುದಕ್ಕೆ ನೋವಾಕ್ ಜೊಕೋವಿಚ್ ಗೆ ಇನ್ನೊಂದೇ ಹಂತ ಬಾಕಿ ಇದೆ.
ಇದಷ್ಟೇ ಅಲ್ಲದೇ ನೋವಾಕ್ ಜೊಕೋವಿಚ್ ಅವರ ಕ್ಯಾಲೆಂಡರ್ ವರ್ಷದ ಗ್ರ್ಯಾನ್ ಸ್ಲಾಮ್ ಕನಸಿನ ಅರ್ಧ ದಾರಿಯನ್ನು ಈ ಗೆಲುವು ಸುಗಮವಾಗಿಸಿದೆ. 1969 ರಲ್ಲಿ ರಾಡ್ ಲಾವರ್ ನಲ್ಲಿ ಹೊರತುಪಡಿಸಿದರೆ ಇಂತಹ ದಾಖಲೆಯನ್ನು ಈವರೆಗೂ ಯಾರೂ ನಿರ್ಮಿಸಿಲ್ಲ.
ಶುಕ್ರವಾರ ತಡ ರಾತ್ರಿ ನಡೆದ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕ ಆಟಗಾರ ನೋವಾಕ್ ಜೊಕೋವಿಚ್, ರಫೆಲ್ ನಡಾಲ್ ಅವರನ್ನು ನಾಲ್ಕು ಸೆಟ್‌ಗಳ ಸೆಣಸಾಟದಲ್ಲಿ ಸೋಲಿಸಿ ಅಂತಿಮ ಹಂತ ತಲುಪಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


