ಟೋಕಿಯೊ ಒಲಂಪಿಕ್ಸ್: ಭಾರತಕ್ಕೆ ಆಘಾತ, ಸೆಮಿಫೈನಲ್ಸ್ ನಲ್ಲಿ ಪಿವಿ ಸಿಂಧು ಸೋಲು
ಒಲಂಪಿಕ್ಸ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಕನಸು ಕಂಡಿದ್ದ ಭಾರತದ ಸ್ಟಾರ್ ಪಿ.ವಿ ಸಿಂಧು ಅವರ ಕನಸು ನುಚ್ಚುನೂರಾಗಿದೆ.

ಟೋಕಿಯೊ: ಒಲಂಪಿಕ್ಸ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಕನಸು ಕಂಡಿದ್ದ ಭಾರತದ ಸ್ಟಾರ್ ಪಿ.ವಿ ಸಿಂಧು ಅವರ ಕನಸು ನುಚ್ಚುನೂರಾಗಿದೆ.
ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ಸ್ ಪಂದ್ಯದಲ್ಲಿ ಸಿಂಧು ಸೋತು, ಫೈನಲ್ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ. ಇನ್ನು ಸಿಂಧು ಕಂಚಿನ ಪದಕಕ್ಕಾಗಿ ಕಾದಾಟ ನಡೆಸಬೇಕಿದೆ.
ಎರಡು ನೇರ ಸೆಟ್ ಗಳಲ್ಲಿ ಪಂದ್ಯವನ್ನು ಕೈ ಚೆಲ್ಲಿದ ಸಿಂಧು, ಬಂಗಾರ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು. 40 ನಿಮಿಷ ನಡೆದ ಆಟದಲ್ಲಿ ಸಿಂಧು 18-21, 12-21ರಿಂದ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದ ತೈ ಜು ಯಿಂಗ್ ವಿರುದ್ಧ ಆಘಾತ ಅನುಭವಿಸಿದರು. ತಮ್ಮ ಮೂರನೇ ಒಲಿಂಪಿಕ್ಸ್ ಆಡುತ್ತಿರುವ ತೈ ಜು ಯಿಂಗ್ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಪದಕ ಪಡೆಯಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


