ಬೆಳ್ಳಿ ಗೆದ್ದ ಚಾನುಗೆ ಮಹಿಳಾ ನಕ್ಸಲ್ ವಿರೋಧಿ ಕಮಾಂಡೋ ಪಡೆ 'ದಂತೇಶ್ವರಿ ಫೈಟರ್ಸ್' ಶ್ಲಾಘನೆ
ಟೋಕಿಯೊ ಒಲಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನುರನ್ನು ಛತ್ತೀಸ್ಗಢದ ದಂತೇವಾಡಾದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಘಟಕ ದಂತೇಶ್ವರಿ ಫೈಟರ್ಸ್ ಶ್ಲಾಘಿಸಿದ್ದಾರೆ.

ರಾಯಪುರ: ಟೋಕಿಯೊ ಒಲಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನುರನ್ನು ಛತ್ತೀಸ್ಗಢದ ದಂತೇವಾಡಾದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಘಟಕ ದಂತೇಶ್ವರಿ ಫೈಟರ್ಸ್ ಶ್ಲಾಘಿಸಿದ್ದಾರೆ.
ಭಾರತಕ್ಕೆ ಎಂತಹ ಅದ್ಭುತ ಆರಂಭ. ಅವರ ಸಾಧನೆ ನಮಗೂ ಸ್ಫೂರ್ತಿ ನೀಡುತ್ತದೆ. ಇದು ಭಾರತೀಯರಿಗೆ ಮಹಿಳಾ ಸಬಲೀಕರಣದ ಸಂಕೇತವಾಗಿದೆ ಎಂದು ಸಮವಸ್ತ್ರದಲ್ಲಿರುವ ಮಹಿಳಾ ಫೈಟರ್ಸ್ ಶ್ಲಾಘಿಸಿದರು.
ಟೋಕಿಯೊದಲ್ಲಿ ಪದಕ ಗೆಲ್ಲುವ ಮೂಲಕ ಭಾರತದ ಪರ ಖಾತೆ ತೆರೆದಿರುವುದಕ್ಕೆ ದಂತೇಶ್ವರಿ ಫೈಟರ್ಸ್ ಹೆಚ್ಚು ಖುಷಿಪಟ್ಟರು ಎಂದು ದಂತೇವಾಡ ಎಸ್ಪಿ ಅಭಿಷೇಕ್ ಪಲ್ಲವ ಹೇಳಿದರು.
2000ನೇ ಇಸವಿಯಲ್ಲಿ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕವನ್ನು ದೇಶಕ್ಕೆ ಗೆದ್ದು ತಂದಿದ್ದರು. ಆ ಬಳಿಕ ಒಲಿಂಪಿಕ್ಸ್ ನಲ್ಲಿ ಪದಕ ತಂದ ಎರಡನೇ ಮಹಿಳಾ ಸ್ಪರ್ಧಿ ಈ ಮೀರಾಬಾಯಿ ಚಾನು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


