ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಪಿ.ವಿ. ಸಿಂಧು ಸೇರಿ 25 ಭಾರತೀಯ ಆಟಗಾರರು ಭಾಗಿ
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಇಂದು ಹುಯೆಲ್ವಾದಲ್ಲಿರುವ ಕ್ಯಾರೊಲಿನಾ ಮರಿನ್ ಸ್ಪೋರ್ಟ್ಸ್ ಪ್ಯಾಲೇಸ್ ನಲ್ಲಿ ಪ್ರಾರಂಭವಾಗಲಿದೆ. ಇದರಲ್ಲಿ ಪಿ. ವಿ. ಸಿಂಧು ನಾಯಕತ್ವದಲ್ಲಿ ಭಾರತದ 25 ಆಟಗಾರರು ಭಾಗವಹಿಸುತ್ತಿದ್ದಾರೆ.

ಹುಯೆಲ್ವಾ/ ಸ್ಪೇನ್: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಇಂದು ಹುಯೆಲ್ವಾದಲ್ಲಿರುವ ಕ್ಯಾರೊಲಿನಾ ಮರಿನ್ ಸ್ಪೋರ್ಟ್ಸ್ ಪ್ಯಾಲೇಸ್ ನಲ್ಲಿ ಪ್ರಾರಂಭವಾಗಲಿದೆ. ಇದರಲ್ಲಿ ಪಿ.ವಿ. ಸಿಂಧು ನಾಯಕತ್ವದಲ್ಲಿ ಭಾರತದ 25 ಆಟಗಾರರು ಭಾಗವಹಿಸುತ್ತಿದ್ದಾರೆ.
ಎರಡು ಬಾರಿ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿರುವ ಪಿ.ವಿ. ಸಿಂಧು ಹಾಲಿ ಚಾಂಪಿಯನ್ ಕೂಡಾ ಆಗಿದ್ದಾರೆ. 2019ರಲ್ಲಿ ಇವರು ಬಾಸೆಲ್ ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ನಂತರ ಅವರು ಭಾರತದ ಮೊದಲ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದರು. ಈ ಸ್ಪರ್ಧೆಯಲ್ಲಿ ಭಾಗವಹಿಸುವುದರ ಮೂಲಕ ಸಿಂಧು ಗರಿಷ್ಠ 6 ಪದಕಗಳನ್ನು ಗೆಲ್ಲುವ ಮೊದಲ ಮಹಿಳಾ ಆಟಗಾರ್ತಿಯಾಗುವ ಅವಕಾಶ ಪಡೆದಿದ್ದಾರೆ. ಪಿ. ವಿ. ಸಿಂಧು ಹಾಗೂ ಚೀನಾದ ಜೆಂಗ್ ನಿಂಗ್ 5-5 ಪದಕಗಳನ್ನು ಹೊಂದಿರುವ ಹಿರಿಮೆಯಿದೆ.
ಈ ಮಧ್ಯೆ ಮೂರು ಬಾರಿಯ ಚಾಂಪಿಯನ್ ಮತ್ತು ಸ್ಥಳೀಯ ಆಟಗಾರ್ತಿ ಕೆರೂಲಿನಾ ಮರಿನ್ ಹಾಗೂ 2017ರ ವಿಜೇತ ನೊಜೊಮಿ ಒಕುಹರಾ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಅಲ್ಲದೇ, ಭಾರತದ ಸೈನಾ ನೆಹ್ವಾಲ್ ಗಾಯದ ಸಮಸ್ಯೆಯಿಂದ ಮೊದಲ ಬಾರಿಗೆ ಚಾಂಪಿಯನ್ ಶಿಪ್ ನಿಂದ ಹೊರಗುಳಿಯುತ್ತಿದ್ದಾರೆ. ಈ ಟೂರ್ನಿಯಲ್ಲಿ ಪಿ. ವಿ. ಸಿಂಧು ಮೊದಲ ಸುತ್ತಿನಲ್ಲಿ ಬೈ ಪಡೆದುಕೊಂಡಿದ್ದು, ಎರಡನೇ ಸುತ್ತಿನಲ್ಲಿ ಮಾರ್ಟಿನಾ ರೆಪಿಸ್ಕಾ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ ನಲ್ಲಿ 12ನೇ ಶ್ರೇಯಾಂಕದ ಕಿಡಂಬಿ ಶ್ರೀಕಾಂತ್ ಅವರು ಮೊದಲ ಪಂದ್ಯದಲ್ಲಿ ಸ್ಪೇನ್ ನ ಪಾಬ್ಲೊ ಅಬಿಯಾನ್ ಮತ್ತು ಕಂಚಿನ ಪದಕ ವಿಜೇತ ಬಿ ಸಾಯಿ ಪ್ರಣೀತ್, ನೆದರ್ ಲ್ಯಾಂಡ್ಸ್ ನ ಮಾರ್ಕ್ ಕೆಲ್ಜೊ ವಿರುದ್ಧ ಸೆಣಸಲಿದ್ದಾರೆ. ಮಾಜಿ ನಂಬರ್ 10 ಆಟಗಾರ ಎಚ್ ಎಸ್ ಪ್ರಣಯ್ ಅವರು ಲಾಂಗ್ ಆಂಗಸ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಭಾರತದ 11 ಜೋಡಿಗಳು ಡಬಲ್ಸ್ ನಲ್ಲಿ ಭಾಗವಹಿಸುತ್ತಿವೆ. 50 ದೇಶಗಳ ಒಟ್ಟು 337 ಆಟಗಾರರು ಈ ಚಾಂಪಿಯನ್ ಶಿಪ್ ನಲ್ಲಿ ಸ್ಪರ್ಧಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


