ನಕಲಿ ಪಾಸ್‌ಪೋರ್ಟ್ ಬಳಕೆ ಆರೋಪ: ಪೆರಗ್ವೆಯಲ್ಲಿ ಖ್ಯಾತ ಫುಟ್ಬಾಲ್ ತಾರೆ ರೊನಾಲ್ಡಿನೋ ಅರೆಸ್ಟ್
ನಕಲಿ ಪಾಸ್‌ಪೋರ್ಟ್‌ನೊಂದಿಗೆ ಪೆರಗ್ವೆಗೆ ಪ್ರವೇಶಿಸಿದ್ದ ಆರೋಪದ ಮೇಲೆ ಬ್ರಿಜಿಲ್ ನ ಫುಟ್‌ಬಾಲ್ ದಿಗ್ಗಜ ರೊನಾಲ್ಡಿನೊ ವನ್ನು ಬಂಧಿಸಲಾಗಿದೆ.

ನಕಲಿ ಪಾಸ್‌ಪೋರ್ಟ್‌ನೊಂದಿಗೆ ಪೆರಗ್ವೆಗೆ ಪ್ರವೇಶಿಸಿದ್ದ ಆರೋಪದ ಮೇಲೆ ಬ್ರಿಜಿಲ್ ನ ಫುಟ್‌ಬಾಲ್ ದಿಗ್ಗಜ ರೊನಾಲ್ಡಿನೊ ವನ್ನು ಬಂಧಿಸಲಾಗಿದೆ.
ರೊನಾಲ್ಡಿನೋ ಃಆಗೂ ಆತನ ಸೋದರ ರಾಬರ್ಟೊ ಡಿ ಅಸಿಸ್ ಅವರನ್ನು ಅಸುನ್ಸಿಯಾನ್‌ನ ಐಷಾರಾಮಿ ಹೋಟೆಲ್‌ವೊಂದರಲ್ಲಿದ್ದಾಗ ಬಂಧಿಸಲಾಗಿದೆ ಎಂದು ಕ್ಸಿನ್ಹುವಾ ನ್ಯೂ ಏಜನ್ಸಿ ವರದಿ ಮಾಡಿದೆ.
ಇನ್ನು ರೊನಾಲ್ಡಿನೊ ಪರ ವಕೀಲರಾದ ಅಡಾಲ್ಫೊ ಮರಿನ್, ರೊನಾಲ್ಡಿನೊ ಮತ್ತು ಅಸಿಸ್ ಇಂತಹಾ ಕೃತ್ಯ ಎಸಗಲು ಯಾವ ಕಾರಣಗಳಿಲ್ಲ ಎಂದು ವಾದಿಸಿದ್ದಾರೆ."ವಾಸ್ತವವಾಗಿ ಅವರನ್ನು ಬಲಿಪಶುವನ್ನಾಗಿಸಲಾಗಿದೆ.ಅವರು ಅಂತಹಾ ಕೃತ್ಯ ಎಸಗುವ ಕಾರಣವಿಲ್ಲ. ಅವರು ತಮ್ಮ ಬ್ರೆಜಿಲಿಯನ್ ಪಾಸ್ಪೋರ್ಟ್ ಗಳೊಡನೆ ಗೆ ಪ್ರವೇಶಿಸಬಹುದಿತ್ತು" ಎಂದು ಮರಿನ್ ಪೆರಗ್ವೆ ರೇಡಿಯೊ 730 ಎಎಂ ಗೆ ಹೇಳಿದ್ದಾರೆ.
"ರೊನಾಲ್ಡಿನೋಗೆ ಇದುವರೆಗೆ ಏನಾಗಿದೆ ಅರ್ಥವಾಗುತ್ತಿಲ್ಲ, ಈ ಘಟನೆಯಿಂದ ಅವರು ಆಘಾತಗೊಂಡಿದ್ದಾರೆ"
ಮಕ್ಕಳ ಫುಟ್ಬಾಲ್ತರಗತಿಯಲ್ಲಿ ಪಾಲ್ಗೊಳ್ಳಲು ಹಾಗೂ ರೊನಾಲ್ಡಿನೊ ಅವರ ವೃತ್ತಿಜೀವನದ ಬಗ್ಗೆ ಹೊಸ ಪುಸ್ತಕದ ಪ್ರಚಾರ ಮಾಡಲು ಈ ಜೋಡಿ ಬುಧವಾರ ಬೆಳಿಗ್ಗೆ ಪೆರುಗ್ವೆಗೆ ಆಗಮಿಸಿತ್ತು.
ಇನ್ನು ಈ ಕುರಿತು ಮಾತನಾಡಿರುವ ಪೆರಗ್ವೆ ಆಂತರಿಕ ಸಚಿವ ಎಸ್ವೆಡೊ "ರೊನಾಲ್ಡಿನೊ ಓರ್ವ ಶ್ರೇಷ್ಠ ಕ್ರೀಡಾಪಟು ಎನ್ನುವುದು ಸತ್ಯ. ನಾವವರನ್ನು ಗೌರವಿಸುತ್ತೇವೆ. ಆದರೆ ನಕಲಿ ಪಾಸ್ ಪೋರ್ಟ್ ಹೊಂದುವುದು ಕ್ರಿಮಿನಲ್ ಅಪರಾಧವಾಗುತ್ತದೆ" ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


