ಡೋಪಿಂಗ್ ಆರೋಪ: ಸತ್ನಾಮ್ ಸಿಂಗ್ ಭಮರಾಗೆ ನಿಷೇಧ
ಡೋಪಿಂಗ್ ಆರೋಪದ ಮೇಲೆ ಭಾರತದ ಬಾಸ್ಕೆಟ್ ಬಾಲ್ ಆಟಗಾರ ಸತ್ನಾಮ್ ಸಿಂಗ್ ಭಮರ ಅವರನ್ನು ಎರಡು ವರ್ಷಗಳ ನಿಷೇಧ ಹೇರಲಾಗಿದೆ.

ನವದೆಹಲಿ: ಡೋಪಿಂಗ್ ಆರೋಪದ ಮೇಲೆ ಭಾರತದ ಬಾಸ್ಕೆಟ್ ಬಾಲ್ ಆಟಗಾರ ಸತ್ನಾಮ್ ಸಿಂಗ್ ಭಮರ ಅವರನ್ನು ಎರಡು ವರ್ಷಗಳ ನಿಷೇಧ ಹೇರಲಾಗಿದೆ.
2015ರಲ್ಲಿ ಎನ್ ಬಿಎ ಕರಡಿನಲ್ಲಿ ಸ್ಥಾನ ಪಡೆಯವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎಂಬ ಇತಿಹಾಸ ಸೃಷ್ಟಿಸಿದ್ದರು.
ನಿಷೇಧಿತ ಪದಾರ್ಥ ಸೇವಿಸಿರುವುದು ಪರೀಕ್ಷೆಯಲ್ಲಿ ಸಾಬೀತಾದ ನಂತರ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ (ನಾಡಾ)ದ ಉದ್ದೀಪನ ನಿಷೇಧ ಶಿಸ್ತು ಸಮಿತಿ ಸತ್ನಾಮ್ ವಿರುದ್ಧ ಈ ನಿಷೇಧ ಹೇರಿದೆ.
ಬಾಸ್ಕೆಟ್ ಬಾಲ್ ಆಟಗಾರ ಸತ್ನಾಮ್ ಸಿಂಗ್ ಭಮರಾ ಅವರ ಪರೀಕ್ಷೆಯಲ್ಲಿ ನಿಷೇಧಿತ ಪದಾರ್ಥ ಸೇವಿಸಿರುವುದ ಸಾಬೀತಾದ ಹಿನ್ನೆಲೆಯಲ್ಲಿ ಉದ್ದೀಪನಾ ಮದ್ದು ನಿಗ್ರಹ ಶಿಸ್ತು ಸಮಿತಿ ಅವರಿಗೆ ಎರಡು ವರ್ಷ ನಿಷೇಧ ಹೇರಿದೆ ಎಂದು ನಾಡಾ ಗುರುವಾರ ಟ್ವೀಟ್ ಮಾಡಿದೆ. ಹೈಜೆನಮೈನ್ ಎಂಬ ಪದಾರ್ಥವನ್ನು 2017ರಲ್ಲೇ ವಾಡಾ ನಿಷೇಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


