ಫುಟ್ಬಾಲ್ ದಂತಕಥೆ ಪೀಲೆ ಸಾರ್ವಕಾಲಿಕ ದಾಖಲೆ ಮುರಿದ ಲಿಯೋನೆಲ್ ಮೆಸ್ಸಿ
ಜಾಗತಿಕ ಫುಟ್ ಬಾಲ್ ನ ದಂತಕಥೆ ಪೀಲೆ ಅವರ ಸಾರ್ವಕಾಲಿಕ ದಾಖಲೆಯನ್ನು ಬಾರ್ಸಿಲೋನಾ ಫುಟ್ ಬಾಲ್ ಸೂಪರ್ ಸ್ಟಾರ್ ಲಿಯೋನೆಲ್ ಮೆಸ್ಸಿ ಮುರಿದಿದ್ದಾರೆ.

ಲಂಡನ್: ಜಾಗತಿಕ ಫುಟ್ ಬಾಲ್ ನ ದಂತಕಥೆ ಪೀಲೆ ಅವರ ಸಾರ್ವಕಾಲಿಕ ದಾಖಲೆಯನ್ನು ಬಾರ್ಸಿಲೋನಾ ಫುಟ್ ಬಾಲ್ ಸೂಪರ್ ಸ್ಟಾರ್ ಲಿಯೋನೆಲ್ ಮೆಸ್ಸಿ ಮುರಿದಿದ್ದಾರೆ.
ಹೌದು.. ಲಿಯೋನೆಲ್ ಮೆಸ್ಸಿ ಮಂಗಳವಾರ ಬಾರ್ಸಿಲೋನಾ ಪರ ತಮ್ಮ 644ನೇ ಗೋಲು ಗಳಿಸುವ ಮೂಲಕ ಪೀಲೆ ಅವರ ಸಾರ್ವಕಾಲಿಕ ಗೋಲುಗಳ ಮೈಲಿಗಲ್ಲನ್ನು ಮುರಿದಿದ್ದಾರೆ. ವಲ್ಲಾಡೋಲಿಡ್‌ನಲ್ಲಿ ನಡೆದ ಪಂದ್ಯದಲ್ಲಿ ಬಾರ್ಸಿಲೋನಾ ತಂಡ 3-0 ಗೋಲುಗಳಿಂದ ಗೆಲ್ಲಲು ಸಹಾಯ ಮಾಡಿದ ಮೆಸ್ಸಿ, ಶನಿವಾರ ಪೀಲೆ ಅವರು ಗಳಿಸಿದ್ದ ಸಾರ್ವಕಾಲಿಕ ದಾಖಲೆಯ ಗೋಲುಗಳನ್ನು ಸರಿಗಟ್ಟಿದ್ದರು. 1957-74ರವರೆಗೆ ಸ್ಯಾಂಟೋಸ್ ತಂಡಕ್ಕಾಗಿ ಪೀಲೆ ಅವರು 643 ಗೋಲುಗಳನ್ನು ಬಾರಿಸಿದ್ದರು. 2004 ರಂದು ಫುಟ್ಬಾಲ್ ಜಗತ್ತಿಗೆ ಕಾಲಿರಿಸಿದ ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ಪರ ಆಡಿದ ಮೊದಲ ಪಂದ್ಯದಿಂದ ಈ ವರೆಗೂ ತಮ್ಮ ವೃತ್ತಿಜೀವನದಲ್ಲಿ 644 ಗೋಲು ಗಳಿಸಿದ್ದಾರೆ.
ಈ ಕುರಿತಂತೆ ಟ್ವಿಟರ್ ನಲ್ಲಿ ಭಾವನಾತ್ಮಕ ಸಂದೇಶ ಹಾಕಿ ತಮ್ಮ ಸಂತಸ ಹಂಚಿಕೊಂಡಿರುವ ಮೆಸ್ಸಿ, 'ನಾನು ಆಟವಾಡಲು ಪ್ರಾರಂಭಿಸಿದಾಗ ನಾನು ಈ ದಾಖಲೆಯನ್ನು ಮುರಿಯುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. ನನ್ನ ಸಾಧನೆಯ ಹಾದಿಯಲ್ಲಿ ನನಗೆ ಸಹಾಯ ಮಾಡಿದ ನನ್ನ ತಂಡದ ಸದಸ್ಯರು, ನನ್ನ ಕುಟುಂಬ, ನನ್ನ ಸ್ನೇಹಿತರು ಮತ್ತು ಪ್ರತಿದಿನ ನನ್ನನ್ನು ಬೆಂಬಲಿಸುವ ಎಲ್ಲರಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
Ig Messi : (1) When I started playing football, I did not expect that I would break a record like this, especially since it is a number for @Pele ... pic.twitter.com/NertBGqYek
— Leo Messi
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


