ಕೊರೋನಾ ಕಂಟಕ: ಭಾರತದಲ್ಲಿ ನಡೆಯಲಿದ್ದ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್ ಮುಂದೂಡಿಕೆ
ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಬೇಕಾಗಿದ್ದ ಫಿಫಾ ಅಂಡರ್ -17 ಮಹಿಳಾ ವಿಶ್ವಕಪ್ ಮುಂದೂಡಿಕೆಯಾಗಿದೆ. ವಿಶ್ವಾದ್ಯಂತ ವ್ಯಾಪಿಸಿರುವ ಕೊರೋನಾವೈರಸ್ ಹಾವಳಿಯಿಂದಾಗಿ ವಿಶ್ವಕಪ್ ಪಂದ್ಯಾವಳಿಯನ್ನು ಮುಂದೂಡಿ ಫಿಫಾ ಫುಟ್‌ಬಾಲ್‌ನ ಆಡಳಿತ ಮಂಡಳಿ ಶನಿವಾರ ಆದೇಶಿಸಿದೆ.

ನವದೆಹಲಿ: ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಬೇಕಾಗಿದ್ದ ಫಿಫಾ ಅಂಡರ್ -17 ಮಹಿಳಾ ವಿಶ್ವಕಪ್ ಮುಂದೂಡಿಕೆಯಾಗಿದೆ. ವಿಶ್ವಾದ್ಯಂತ ವ್ಯಾಪಿಸಿರುವ ಕೊರೋನಾವೈರಸ್ ಹಾವಳಿಯಿಂದಾಗಿ ವಿಶ್ವಕಪ್ ಪಂದ್ಯಾವಳಿಯನ್ನು ಮುಂದೂಡಿ ಫಿಫಾ ಫುಟ್‌ಬಾಲ್‌ನ ಆಡಳಿತ ಮಂಡಳಿ ಶನಿವಾರ ಆದೇಶಿಸಿದೆ.
ನವೆಂಬರ್ 2 ರಿಂದ 21 ರವರೆಗೆ ಕೋಲ್ಕತಾ, ಗುವಾಹಟಿ, ಭುವನೇಶ್ವರ, ಅಹಮದಾಬಾದ್ ಮತ್ತು ನವೀ ಮುಂಬೈ ಸೇರಿದಂತೆ ದೇಶದ ಐದು ನಗರಗಳಲ್ಲಿ ಮಹಿಳಾ ಅಂಡರ್ -17 ವಿಶ್ವಕಪ್ ನಡೆಯಬೇಕಿತ್ತು.ಪಂದ್ಯಾವಳಿಯನ್ನು 16 ತಂಡಗಳ ನಡುವೆ ಆಯೋಜಿಸಲಾಗಿತ್ತು.
ಇದೇ ಮೊದಲ ಬಾರಿಗೆ ಭಾರತದಲ್ಲಿ ಅಂಡರ್ -17 ಮಹಿಳಾ ವಿಶ್ವಕಪ್ ನಡೆಯುತ್ತಿತ್ತು. ಆದರೆ ಕೊರೋನಾವೈರಸ್ ದ ಪರಿಣಾಮಗಳನ್ನು ಪರಿಹರಿಸಲು ಫಿಫಾ-ಕಾನ್ಫೆಡರೇಶನ್ಸ್ ಕಾರ್ಯ ಸಮೂಹವು ಇತ್ತೀಚೆಗೆ ಫಿಫಾ ಕೌನ್ಸಿಲ್ ನ ಬ್ಯೂರೋ ಈ ತೀರ್ಮಾನಕ್ಕೆ ಬಂದಿದೆ. ಮೂಲತಃ ಫಿಫಾ ಅಂಡರ್ -20 ಮಹಿಳಾ ವಿಶ್ವಕಪ್ ಪನಾಮ / ಕೋಸ್ಟಾ ರಿಕಾ 2020 ಅನ್ನು ಮುಂದೂಡಲು ಕಾರ್ಯನಿರತ ಗುಂಪು ಶಿಫಾರಸು ಮಾಡಿದೆ - ಈ ಪಂದ್ಯಾವಳಿ ಆಗಸ್ಟ್ / ಸೆಪ್ಟೆಂಬರ್ 2020ಕ್ಕೆ ನಿಗದಿಯಾಗಿತ್ತು.ತ್ತು ಫಿಫಾ ಅಂಡರ್ -17 ಮಹಿಳಾ ವಿಶ್ವಕಪ್ ಇಂಡಿಯಾ 2020 ನವೆಂಬರ್ ನಲ್ಲಿ ನಡೆಯುವುದಿತ್ತು.
ಇದೇ ವೇಳೆ "ಹೊಸ ದಿನಾಂಕಗಳನ್ನು ಮುಂದೆ ಪ್ರಕಟಿಸಲಾಗುವುದು"ಫಿಫಾ ಹೇಳಿಕೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


