ಲಿಯೋನೆಲ್ ಮೆಸ್ಸಿಗೆ "ವರ್ಷದ ಫಿಫಾ ಆಟಗಾರ" ಪ್ರಶಸ್ತಿ
ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ವರ್ಷದ ಫಿಫಾ ಪುರುಷರ ಫಿಫಾ ಆಟಗಾರ ಪ್ರಶಸ್ತಿಗೆ ಸೋಮವಾರ ಭಾಜನರಾಗಿದ್ದಾರೆ.

ರೋಮ್: ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ವರ್ಷದ ಫಿಫಾ ಪುರುಷರ ಫಿಫಾ ಆಟಗಾರ ಪ್ರಶಸ್ತಿಗೆ ಸೋಮವಾರ ಭಾಜನರಾಗಿದ್ದಾರೆ.
ಕಳೆದ ಆವೃತ್ತಿಯ ಚಾಂಪಿಯನ್ಸ್ ಲೀಗ್ ಚಾಂಪಿಯನ್ ಲಿವರ್ಪೂಲ್ ತಂಡದ ವರ್ಗಿಲ್ ವಾನ್ ಡಿಜ್ಕ್ ಅವರು ಕಳೆದ ತಿಂಗಳು ಯುಇಎಫ್ಎ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದರು. ಇದೀಗ, ಅವರನ್ನು ಮೆಸ್ಸಿ ಹಿಂದಿಕ್ಕಿ ವರ್ಷದ ಫಿಫಾ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಜುವೆಂಟಾಸ್ ಮುಂಚೂಣಿ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಕೂಡ ಈ ಪ್ರಶಸ್ತಿ ರೇಸ್ನಲ್ಲಿ ಇದ್ದರು. ಆದರೆ, ಪ್ರಶಸ್ತಿ ವಿತರಣಾ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಇನ್ನು ಮಹಿಳೆಯರ ವಿಭಾಗದಲ್ಲಿ ಅಮೆರಿಕದ ಮೆಗನ್ ರಾಪಿನೋಯಿ ಅವರು ಮುಡಿಗೇರಿಸಿಕೊಂಡರು.
ಇನ್ನು ಫಿಫಾದ ಪ್ರತಿಷ್ಠಿತ ಬ್ಯಾಲನ್ ಡಿ ಓರ್ ಪ್ರಶಸ್ತಿ ರೇಸ್ ನಲ್ಲೂ ಮೆಸ್ಸಿ ಮತ್ತು ವರ್ಗಿಲ್ ವಾನ್ ಡಿಜ್ಕ್ ಇದ್ದು, ಡಿಸೆಂಬರ್ 2ರಂದು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


