ಕ್ರೀಡೆ

ರೇಸ್ ವೇಳೆ ಅಪಘಾತ: ಗಿಲ್, ಸಹ ಚಾಲಕ ಶರೀಪ್ ಮೇಲೆ ಎಫ್‍ಐಆರ್

ಕಳೆದ ಶನಿವಾರ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಶಿಪ್ ನ ಮೂರನೇ ಸುತ್ತಿನ ವೇಳೆ ಸಂಭವಿಸಿದ್ದ ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದ ಪ್ರಕರಣ ಸಂಬಂಧ ಹಲವು ಎಪಿಆರ್ ಸಿ ಚಾಂಪಿಯನ್ ಗೌರವ್ ಗಿಲ್ ಹಾಗೂ ಆತನ ಸಹ ಚಾಲಕ ಮುಸಾ ಶರೀಫ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ರೇಸ್ ವೇಳೆ ಅಪಘಾತ: ಗಿಲ್, ಸಹ ಚಾಲಕ ಶರೀಪ್ ಮೇಲೆ ಎಫ್‍ಐಆರ್
ರೇಸ್ ವೇಳೆ ಅಪಘಾತ: ಗಿಲ್, ಸಹ ಚಾಲಕ ಶರೀಪ್ ಮೇಲೆ ಎಫ್‍ಐಆರ್
Published On :

ಜೋಧಪುರ: ಕಳೆದ ಶನಿವಾರ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಶಿಪ್ ನ ಮೂರನೇ ಸುತ್ತಿನ ವೇಳೆ ಸಂಭವಿಸಿದ್ದ ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದ ಪ್ರಕರಣ ಸಂಬಂಧ ಹಲವು ಎಪಿಆರ್ ಸಿ  ಚಾಂಪಿಯನ್ ಗೌರವ್ ಗಿಲ್ ಹಾಗೂ ಆತನ ಸಹ ಚಾಲಕ ಮುಸಾ ಶರೀಫ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಶನಿವಾರ ಮೂರನೇ ಸುತ್ತಿನ ರ್ಯಾಲಿಯಲ್ಲಿ ಗಿಲ್ ಅವರ ಮಹೇಂದ್ರ ಅಡ್ವೆಂಚರ್ ಕಾರು 150 ಕಿ.ಮೀ ಚಲಿಸುತ್ತಿದ್ದ ವೇಳೆ  ಬೈಕ್‍ಗೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಒಂದೇ ಕುಟುಂಬದ ನರೇಂದ್ರ ಭಾಟಿ(42) ಪುಷ್ಪಾ (40) ಹಾಗೂ ಪುತ್ರ ಜಿತೇಂದ್ರ (15) ಸ್ಥಳದಲ್ಲೇ ಮೃತಪಟ್ಟಿದ್ದರು.

ಈ ಪ್ರಕರಣ ಕುರಿತಂತೆ ಸಮದಾರಿ ಪೊಲೀಸ್ ಠಾಣೆಯಲ್ಲಿ ಗಿಲ್, ಆತನ ಸಹ ಚಾಲನ ಹಾಗೂ ಆಯೋಜಕರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಬಲೋತ್ರಾದ ಡಿಎಸ್‍ಪಿ ಚುಗ್ ಸಿಂಗ್ ಸೋಧಾ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.