ಬಾಕ್ಸಿಂಗ್: ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ಗೆ ಅಮಿತ್, ಐತಿಹಾಸಿಕ ಸಾಧನೆಗೈದ ಮೊದಲ ಭಾರತೀಯ
ಏಷ್ಯಾ ಚಾಂಪಿಯನ್ ಭಾರತೀಯ ಬಾಕ್ಸರ್ ಅಮಿತ್ ಪಂಗಾಲ್ ವಿಶ್ವ ಚಾಂಪಿಯನ್‌ಶಿಪ್ ನ ಪುರುಷರ 52 ಕೆಜಿ ವಿಭಾಗದಲ್ಲಿ ಫೈನಲ್ ತಲುಪುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಎಕಟರಿನ್ ಬರ್ಗ್: ಏಷ್ಯಾ ಚಾಂಪಿಯನ್ ಭಾರತೀಯ ಬಾಕ್ಸರ್ ಅಮಿತ್ ಪಂಗಾಲ್ ವಿಶ್ವ ಚಾಂಪಿಯನ್‌ಶಿಪ್ ನ ಪುರುಷರ 52 ಕೆಜಿ ವಿಭಾಗದಲ್ಲಿ ಫೈನಲ್ ತಲುಪುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಅಂತಿಮ ನಾಲ್ಕರ ಘಟ್ಟ- ಸೆಮಿಫೈನಲ್ಸ್ ನಲ್ಲಿ ಪಂಗಾಲ್ ಕಝಕಿಸ್ತಾನದ ಸಾಕೆನ್ ಬಿಬೋಸಿನೋವ್ ವಿರುದ್ಧ 3-2 ಅಂತರದಲ್ಲಿ ಗೆದ್ದು ಈ ಸಾಧನೆ ಮಾಡಿದ್ದಾರೆ. ತನ್ಮೂಲಕ ವಿಶ್ವ ಬಾಕ್ಸಿಂಗ್ ನಲ್ಲಿ ಅಂತಿಮ ಘಟ್ಟ ತಲುಪಿದ ಮೊದಲ ಭಾರತೀಯನೆಂಬ ಕೀರ್ತಿಗೆ ಭಾಜನರಾದರು.
ಶನಿವಾರ ನಡೆಯಲಿರುವ ಫೈನಲ್ಸ್ ನಲ್ಲಿ ಪಂಗಾಲ್ ಉಜ್ಬೇಕಿಸ್ತಾನ್‌ನ ಶಾಖೋಬಿದಿನ್ ಜೊಯಿರೊವ್ ಅವರನ್ನು ಎದುರಿಸಲಿದ್ದಾರೆ.
2017 ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 49 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ ನಂತರ ಪಂಗಾಲ್ ಅವರ ಈ ಸಾಧನೆ ಇನ್ನಷ್ಟು ಉತ್ತಮವಾದುದಾಗಿದೆ.
ಇನ್ನೊಂದೆಡೆ ವಿಶ್ವ ಚಾಂಪಿಯನ್‌ಶಿಪ್ 63 ಕೆಜಿ ವಿಭಾಗದ ಸೆಮಿಫೈನಲ್ಸ್ ನಲ್ಲಿ ಭಾರತದ ಮನೀಶ್ ಕೌಶಿಕ್ ಕಂಚಿನ ಪದಕ ಗಳಿಸಿದ್ದಾರೆ. ಮನೀಶ್ ಕ್ಯೂಬಾದ ಆಂಡಿ ಗೋಮೆಝ್ ವಿರುದ್ಧ 0-5 ಅಂತರದಲ್ಲಿ ಸೋತು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


