ಕ್ರೀಡೆ

ಎಟಿಪಿ ಫೈನಲ್ಸ್: ಜೊಕೊವಿಚ್ ಮಣಿಸಿ ಸೆಮಿಫೈನಲ್ ತಲುಪಿದ ಫೆಡರರ್

ಅಮೋಘ ಪ್ರದರ್ಶನ ತೋರಿದ ಸ್ವಿಸ್ ಆಟಗಾರ ರೋಜರ್ ಫೆಡರರ್ ಅವರು ಸರ್ಬಿಯಾದ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿ ಎಟಿಪಿ ಫೈನಲ್ಸ್ ನಲ್ಲಿ 16ನೇ ಬಾರಿ ಸೆಮಿಫೈನಲ್ಸ್ ಕದ ತಟ್ಟಿದರು.

ಎಟಿಪಿ ಫೈನಲ್ಸ್: ಜೊಕೊವಿಚ್ ಮಣಿಸಿ ಸೆಮಿಫೈನಲ್ ತಲುಪಿದ ಫೆಡರರ್
ರೋಜರ್ ಫೆಡರರ್
Published On :

ಲಂಡನ್: ಅಮೋಘ ಪ್ರದರ್ಶನ ತೋರಿದ ಸ್ವಿಸ್ ಆಟಗಾರ ರೋಜರ್ ಫೆಡರರ್ ಅವರು ಸರ್ಬಿಯಾದ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿ ಎಟಿಪಿ ಫೈನಲ್ಸ್ ನಲ್ಲಿ 16ನೇ ಬಾರಿ ಸೆಮಿಫೈನಲ್ಸ್ ಕದ ತಟ್ಟಿದರು.

ಗುರುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತ ರೋಜರ್ ಫೆಡರರ್ ಹಾಗೂ ಎರಡನೇ ಸ್ಥಾನದ ಜೊಕೊವಿಚ್ ವಿರುದ್ಧ ಭಾರಿ ಕಾದಾಟ ನಡೆದಿತ್ತು. ಆದರೆ, ಪಂದ್ಯದಲ್ಲಿ ಪ್ರಭುತ್ವ ಮೆರೆದ ಫೆಡರರ್ 6-4, 6-3 ಅಂತರದಲ್ಲಿ ಜೊಕೊವಿಚ್ ವಿರುದ್ದ ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಮಾಡಿದರು.

ಸೋಲಿನೊಂದಿಗೆ ಸರ್ಬಿಯಾ ಆಟಗಾರನ ಎಟಿಪಿ ಕನಸು ಭಗ್ನವಾಯಿತು. ಅಲ್ಲದೇ, ವರ್ಷಾಂತ್ಯದಲ್ಲಿ ಅಗ್ರ ಸ್ಥಾನಕ್ಕೇರಬೇಕೆಂದು ಪಣ ತೊಟ್ಟಿದ್ದ ಜೊಕೊವಿಚ್‍ಗೆ ಭಾರಿ ನಿರಾಸೆ ಉಂಟಾಯಿತು. ಇದರ ಲಾಭದೊಂದಿಗೆ ಸ್ಪೇನ್ ನ ರಫೆಲ್ ನಡಾಲ್ ಅವರು ವೃತ್ತಿ ಜೀವನದಲ್ಲಿ ಐದನೇ ಬಾರಿ ಅಲಂಕರಿಸಿರುವ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.