ಎಟಿಪಿ ರ್ಯಾಂಕಿಂಗ್: ಜೊಕೊವಿಚ್ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ರಫೇಲ್ ನಡಾಲ್
ಪ್ಯಾರೀಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ ಗಾಯದ ಸಮಸ್ಯೆಯಿಂದ ಹೊರ ನಡೆದ ಸ್ಪೇನ್ ನ ರಫೇಲ್ ನಡಾಲ್ ಅವರು 12 ತಿಂಗಳು ಬಳಿಕ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದ್ದಾರೆ.

ಪ್ಯಾರೀಸ್: ಪ್ಯಾರೀಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ ಗಾಯದ ಸಮಸ್ಯೆಯಿಂದ ಹೊರ ನಡೆದ ಸ್ಪೇನ್ ನ ರಫೇಲ್ ನಡಾಲ್ ಅವರು 12 ತಿಂಗಳು ಬಳಿಕ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದ್ದಾರೆ.
ನಡಾಲ್ ಅವರು ಕಳೆದ ವರ್ಷ ನವಂಬರ್ 4 ರಂದು ಅಗ್ರ ಶ್ರೇಯಾಂಕ ಅಲಂಕರಿಸಿದ್ದರು. ಇದಾದ ಸರಿಯಾಗಿ ಒಂದು ವರ್ಷದ ಬಳಿಕ ನಡಾಲ್ ಅವರು ನಂಬರ್ 1 ಸ್ಥಾನಕ್ಕೆ ಏರಿದ್ದಾರೆ. ವಿಶ್ವದ ಸ್ಟಾರ್ ಆಟಗಾರ ನೋವಾಕ್ ಜೊಕೊವಿಚ್ ಅವರು ಪ್ಯಾರೀಸ್ ಮಾಸ್ಟರ್ಸ್ ಚಾಂಪಿಯನ್ ಆಗಿ ಐದು ಬಾರಿ ಹೊರ ಹೊಮ್ಮಿದರು. ಆದರೂ ನಂಬರ್ 1 ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ನಡಾಲ್ ಈ ಹಿಂದೆ 2008, 2010, 2013 ಮತ್ತು 2017 ರಲ್ಲಿ ಪ್ರಥಮ ಸ್ಥಾನದೊಂದಿಗೆ ವರ್ಷವನ್ನು ಮುಗಿಸಿದ್ದರು. ಎಟಿಪಿ ಫೈನಲ್‌ನಲ್ಲಿ ನಡಾಲ್ ಪ್ರಥಮ ಸ್ಥಾನದಲ್ಲಿದ್ದರೆ. 2008 ರ ಆಗಸ್ಟ್ 18 ರಂದು 22 ನೇ ವಯಸ್ಸಿನಲ್ಲಿ ಸ್ಪೇನ್‌ನ ನಡಾಲ್ ಮೊದಲ ಬಾರಿಗೆ ಪ್ರಥಮ ಸ್ಥಾನ ಗಳಿಸಿದರು. ಅಲ್ಲದೆ ಅವರು 46 ವಾರಗಳಲ್ಲಿ ಅಗ್ರಸ್ಥಾನದಲ್ಲಿದ್ದರು. 2010–11ರಲ್ಲಿ 56, 2013–2014ರಲ್ಲಿ 39, 2017–18ರಲ್ಲಿ 26 ವಾರಗಳು, ಏಪ್ರಿಲ್‌ನಲ್ಲಿ ಆರು ವಾರಗಳು - 2018 ರಲ್ಲಿ ಮೇ, ನಾಲ್ಕು ವಾರಗಳು ಮೇ - ಜೂನ್‌ನಲ್ಲಿ ಮತ್ತು ಜೂನ್ - ನವೆಂಬರ್‌ನಲ್ಲಿ 19 ವಾರಗಳ ಕಾಲ್ ಅಗ್ರ ಸ್ಥಾನದಲ್ಲಿದ್ದರು.
ಸದ್ಯ ನಡಾಲ್ ಅವರು 9585 ಅಂಕಗಳನ್ನು ಕಲೆ ಹಾಕಿದ್ದಾರೆ. ಜೋಕೊ 8945 ಅಂಕಗಳೊಂದಿಗೆ ಎರಡನೇ ಹಾಗೂ ರೋಜರ್ ಫೆಡರರ್ 6190 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


