ಕ್ರೀಡೆ

ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿ: ರೋಜರ್ ಫೆಡರರ್ ಮಣಿಸಿ ಫೈನಲ್ ಪ್ರವೇಶಿಸಿದ ರಾಫೆಲ್ ನಡಾಲ್

ಇಂದು ನಡೆದ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ರೋಜರ್ ಫೆಡರರ್ ಅವರನ್ನು ಸೋಲಿಸಿದ ರಾಫೆಲ್ ನಡಾಲ್ ಫೈನಲ್ ಪ್ರವೇಶಿಸಿದ್ದಾರೆ.

ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿ: ರೋಜರ್ ಫೆಡರರ್ ಮಣಿಸಿ ಫೈನಲ್ ಪ್ರವೇಶಿಸಿದ  ರಾಫೆಲ್ ನಡಾಲ್
ರಾಫೆಲ್ ನಡಾಲ್
Published On :
ಫ್ಯಾರಿಸ್ : ಇಂದು ನಡೆದ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ರೋಜರ್ ಫೆಡರರ್ ಅವರನ್ನು ಸೋಲಿಸಿದ ರಾಫೆಲ್ ನಡಾಲ್  ಫೈನಲ್  ಪ್ರವೇಶಿಸಿದ್ದಾರೆ.
ಫಿಲಿಪ್ಪೆ ಚಾರ್ಟಿಯರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 33 ವರ್ಷದ ರಾಫೆಲ್ ನಡಾಲ್ ಅದ್ಬುತ ಪ್ರದರ್ಶನ ನೀಡಿದರು.  ಕೊನೆಯಲ್ಲಿ 6-3, 6-4, 6-2 ಅಂತರದಿಂದ ರೋಜರ್ ಫೆಡರರ್ ಅವರನ್ನು ಸೋಲಿಗೆ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ 1 ಕ್ರಮಾಂಕದ ಆಟಗಾರ ನೊವಾಕ್ ಜಾಕೊವಿಕ್ ಅಥವಾ ಆಸ್ಟ್ರೇಲಿಯಾದ ಡಾಮಿನಿಕ್  ಥೀಮ್ ವಿರುದ್ಧ ಪ್ರಶಸ್ತಿಗೆ ರಾಫೆಲ್ ನಡಾಲ್ ಸೆಣಸಲಿದ್ದಾರೆ.ಇದು ನಡಾಲ್ ಅವರ 12 ನೇ ಚಾಂಫಿಯನ್ ಶಿಫ್ ಪಂದ್ಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.