ಕ್ರೀಡೆ

ಬಾಕ್ಸಿಂಗ್‌ 'ಪವರ್' ಪಂಚ್‌ಗೆ ಮತ್ತೊಬ್ಬ ಬಾಕ್ಸರ್‌ ಸಾವು, ವಿಡಿಯೋ!

ರಷ್ಯನ್‌ ಮ್ಯಾಕ್ಸಿಮ್‌ ದಾದಾಶೇವ್‌ ಅವರು ಅಮೆರಿಕದಲ್ಲಿ ಮೃತಪಟ್ಟ ಕೇವಲ ಎರಡೇ ದಿನಗಳ ಅಂತರದಲ್ಲಿ ಬಾಕ್ಸಿಂಗ್‌ ವೇಳೆ ಗಂಭೀರ ಗಾಯಗೊಂಡಿದ್ದ ಅರ್ಜೆಂಟೀನಾ ಬಾಕ್ಸರ್‌...

ಬಾಕ್ಸಿಂಗ್‌ 'ಪವರ್' ಪಂಚ್‌ಗೆ ಮತ್ತೊಬ್ಬ ಬಾಕ್ಸರ್‌ ಸಾವು, ವಿಡಿಯೋ!
ಹ್ಯೂಗೊ ಸ್ಯಾಂಟಿಲೀಯನ್‌
Published On :
ಬ್ಯೂನಸ್ ಐರಿಸ್‌: ರಷ್ಯನ್‌ ಮ್ಯಾಕ್ಸಿಮ್‌ ದಾದಾಶೇವ್‌ ಅವರು ಅಮೆರಿಕದಲ್ಲಿ ಮೃತಪಟ್ಟ ಕೇವಲ ಎರಡೇ ದಿನಗಳ ಅಂತರದಲ್ಲಿ ಬಾಕ್ಸಿಂಗ್‌ ವೇಳೆ ಗಂಭೀರ ಗಾಯಗೊಂಡಿದ್ದ ಅರ್ಜೆಂಟೀನಾ ಬಾಕ್ಸರ್‌ ಹ್ಯೂಗೊ ಸ್ಯಾಂಟಿಲೀಯನ್‌ ಅವರು ಗುರುವಾರ ಕೊನೆಯುಸಿರೆಳೆದಿದ್ದಾರೆ.
ಇಲ್ಲಿ ನಡೆದ ಬಾಕ್ಸಿಂಗ್‌ನಲ್ಲಿ 10 ಸುತ್ತಿನ ಪಂದ್ಯಗಳ ಫಲಿತಾಂಶವನ್ನು ಪ್ರಕಟಿಸುತ್ತಿದ್ದಂತೆ ಅರ್ಜೆಂಟೀನಾ ಬಾಕ್ಸರ್‌ ಸ್ಯಾಂಟಿಲೀಯನ್‌ ಅವರು ಕುಸಿದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಪರ್ಧೆಯಲ್ಲಿ ತಲೆಗೆ ಗಾಯವಾಗಿದ್ದು, ಮೆದುಳಿಗೆ ಬಲವಾದ ಹೊಡೆತವಾಗಿದೆ. ಇದರ ಜತೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ವೈದ್ಯರು ಖಚಿತಪಡಿಸಿದ್ದಾರೆ.
ರಷ್ಯನ್‌ ಮ್ಯಾಕ್ಸಿಮ್‌ ದಾದಾಶೇವ್‌ ಮರ್ಯಾಲೆಂಡ್‌ನಲ್ಲಿ ಮಂಗಳವಾರ ನಡೆದಿದ್ದ ಬಾಕ್ಸಿಂಗ್‌ನಲ್ಲಿ ರಷ್ಯನ್‌ ಮ್ಯಾಕ್ಸಿಮ್‌ ದಾದಾಶೇವ್‌ ಅವರು ಪ್ಯೂರ್ಟೊ ರಿಸಾನ್‌ ಸುಬ್ರಿಲ್‌ ವಿರುದ್ಧ ಸೆಣಸಿದ್ದರು. ಈ ವೇಳೆ ಅವರ ಮೆದುಳಿಗೆ ಬಲವಾದ ಪೆಟ್ಟು ತಗುಲಿದ್ದರಿಂದ ಅವರ ನೆಲಕ್ಕೆ ಕುಸಿದು ಕೊನೆಯುಸಿರೆಳೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.