ಕೆನಡಾ ಓಪನ್: ಫೈನಲ್ ತಲುಪಿದ ಭಾರತದ ಪರುಪಳ್ಳಿ ಕಶ್ಯಪ್
ಕೆನಡಾ ಓಪನ್ 2019 ಬ್ಯಾಡ್ನಿಂಟನ್ ಟೂರ್ನಿಯಲ್ಲಿ ಭಾರತದ ಪರುಪಳ್ಳಿ ಕಶ್ಯಪ್ ತಮ್ಮ ಗೆಲುವಿನ ಲಯ ಮುಂದುವರೆಸಿದ್ದು, ಟೂರ್ನಿಯಲ್ಲಿ ಫೈನಲ್ ಪ್ರವೇಶ ಮಾಡಿದ್ದಾರೆ.

Published On :
ಕಾಲ್ಗರಿ: ಕೆನಡಾ ಓಪನ್ 2019 ಬ್ಯಾಡ್ನಿಂಟನ್ ಟೂರ್ನಿಯಲ್ಲಿ ಭಾರತದ ಪರುಪಳ್ಳಿ ಕಶ್ಯಪ್ ತಮ್ಮ ಗೆಲುವಿನ ಲಯ ಮುಂದುವರೆಸಿದ್ದು, ಟೂರ್ನಿಯಲ್ಲಿ ಫೈನಲ್ ಪ್ರವೇಶ ಮಾಡಿದ್ದಾರೆ.
ಕೆನಡಾದ ಕಾಲ್ಗರಿಯಲ್ಲಿ ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ 32ರ ಪ್ರಾಯದ ಕಶ್ಯಪ್ ಅವರು ಚೈನೀಸ್ ತೈಫೆಯ ವಾಂಗ್ ಟಿಜು ವೀ ಅವರ ವಿರುದ್ಧ 14-21, 21-17, 21-18, ಅಂತರದಲ್ಲಿ ಗೆದ್ದು ಕೆನಡಾ ಓಪನ್ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟರು. ಭಾನುವಾರ ಒಂದು ಗಂಟೆ 10 ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕಶ್ಯಪ್ ಭರ್ಜರಿ ಗೆಲುವು ಸಾಧಿಸಿದರು.
ಅಂತೆಯೇ ಚೈನೀಸ್ ತೈಫೆ ಆಟಗಾರ ವಾಂಗ್ ವಿರುದ್ಧ 3-0 ಮುಖಾಮುಖಿ ದಾಖಲೆಯನ್ನು ಪಡೆದುಕೊಂಡರು. ಕಳೆದ ಮಾರ್ಚ್ ನಲ್ಲಿ ಇಂಡಿಯಾ ಓಪನ್ ನಲ್ಲಿ ಆರನೇ ಶ್ರೇಯಾಂಕ ಕಶ್ಯಪ್ ಈ ಆಟಗಾರನನ್ನು ಸೋಲಿಸಿದ್ದರು.
ಇನ್ನು ಕಶ್ಯಪ್ ಗೆಲುವಿನ ನಾಗಾಲೋಟಕ್ಕೆ ಅವರ ಪತ್ನಿ ಮತ್ತು ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಟ್ವಿಟರ್ ನಲ್ಲಿ ಶುಭ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


