ಗೋವಾ: ಹಸು ಪುಟ್ಬಾಲ್ ಆಡುವ ವಿಡಿಯೋ ವೈರಲ್!
ಹಸುವೊಂದು ಪುಟ್ಬಾಲ್ ಆಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಿಬ್ಬೆರಗಾಗಿದ್ದಾರೆ.ಮಾರ್ಡೊಲಾ ಆಟದ ಮೈದಾನದಲ್ಲಿ ಯುವಕರ ಗುಂಪೊಂದು ಪುಟ್ಬಾಲ್ ಆಡುತ್ತಿರುವಾಗ ಅಲ್ಲಿಗೆ ಬಂದ ಹಸು ಆಟಕ್ಕೆ ಅಡ್ಡಿಪಡಿಸಿದೆ.

Published On :
ಗೋವಾ: ಹಸುವೊಂದು ಪುಟ್ಬಾಲ್ ಆಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಿಬ್ಬೆರಗಾಗಿದ್ದಾರೆ.ಮಾರ್ಡೊಲಾ ಆಟದ ಮೈದಾನದಲ್ಲಿ ಯುವಕರ ಗುಂಪೊಂದು ಪುಟ್ಬಾಲ್ ಆಡುತ್ತಿರುವಾಗ ಅಲ್ಲಿಗೆ ಬಂದ ಹಸು ಆಟಕ್ಕೆ ಅಡ್ಡಿಪಡಿಸಿದೆ.
ಕೆಲ ನಿಮಿಷದವರೆಗೆ ಹಸು ಬಳಿಯಿದ್ದ ಪುಟ್ಬಾಲ್ ನ್ನು ಪಡೆಯಲು ಯುವಕರು ಪ್ರಯತ್ನಿಸಿದಾಗ ಮೈದಾನದ ತುಂಬೆಲ್ಲಾ ಅತ್ತಿದ್ದಿಂತ ಓಡಾಡಿದ ಹಸು, ಕೊನೆಗೂ ಚೆಂಡನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮೈದಾನದಲ್ಲಿ ತನ್ನ ಮೂಗು ಹಾಗೂ ಕಾಲಿನಿಂದ ಚೆಂಡನ್ನು ರಕ್ಷಿಕೊಳ್ಳುತ್ತಿದ್ದ ಹಸುವಿನ ಕೌಶಲ್ಯದ ಮುಂದೆ ಯುವಕರ ಕೌಶಲ್ಯ ಗೌಣವಾಗಿತ್ತು. ಚೆಂಡನ್ನು ಕಸಿದುಕೊಳ್ಳಲು ಎಷ್ಟೇ ಬಾರಿ ಪ್ರಯತ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ. ಆದರೆ, ಅಂತಿಮವಾಗಿ ಯುವಕನೊಬ್ಬ ಹಸುವಿನಿಂದ ಚೆಂಡನ್ನು ಕಸಿದುಕೊಂಡಿದ್ದಾನೆ.
ಟ್ವಿಟರ್ ನಲ್ಲಿ ಈ ವಿಡಿಯೋಗೆ ತುಂಬಾ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಸುವನ್ನು ಕೆಲವರು ಮೆಸ್ಸಿ , ಕ್ರಿಸ್ಟಿಯಾನ್ ರೊನಾಲ್ಡ್ ಎಂದು ಕರೆದಿದ್ದಾರೆ. ಭಾರತೀಯ ಕ್ರಿಕೆಟ್ ವೀಕ್ಷಕ ವಿವರಣೆಗಾಗ ಹರ್ಷ ಭೋಗ್ಲೆ ಕೂಡಾ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


